Advertisement

ನೀರು ಸಂಗ್ರಹ ಘಟಕ ನಿರ್ಮಾಣ

12:30 PM Sep 04, 2020 | Suhan S |

ದೇವನಹಳ್ಳಿ: ಬಯಲು ಸೀಮೆಯ ಪ್ರದೇಶವಾಗಿರುವುದರಿಂದ ಮಳೆ ನೀರು ಅವಲಂಬಿಸಿದ್ದ ಜನರಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ವೈಯಕ್ತಿಕ, ಸಮುದಾಯ ನೀರು ಸಂಗ್ರಹಣ ಘಟಕಗಳ ನಿರ್ಮಾಣ ಕಾರ್ಯಕ್ರಮಕ್ಕೆ ಸಿದ್ಧತೆಯಲ್ಲಿ ತೊಡಗಿದೆ.

Advertisement

ಜಿಲ್ಲೆಯಲ್ಲಿ ಬರಗಾಲದ ಸಮಯದಲ್ಲಿ ಹಾಗೂ ಬೇಸಿಗೆಯಲ್ಲಿ ಆಧಾರಿತ ನೀರಾವರಿ ಅಗತ್ಯತೆ ಒದಗಿಸುವುದು ಹಾಗೂ ತೋಟಗಾರಿಕೆ ಬೆಳೆ ಒಣಗುವ ಸಮಯದಲ್ಲಿ ನಿರ್ಣಾಯಕ ಹಂತದ ನೀರುಣಿಸುವಿಕೆಯಿಂದ ಬೆಳೆ ಸಂರಕ್ಷಿಸುವ ಅವಶ್ಯಕತೆ ಇರುತ್ತದೆ.

ಸಹಾಯಧನ: ನೀರು ಸಂಗ್ರಹಣಾ ಘಟಕಗಳನ್ನು ರಚಿಸಿಕೊಂಡು ಮಳೆಗಾಲದಲ್ಲಿ ಮಳೆ ನೀರು, ನಾಲೆ, ಹರಿಯುವ ನೀರು ಹೀಗೆ ಇತ್ಯಾದಿ ಮೂಲಗಳಿಂದ ನೀರು ಸಂಗ್ರಹಿಸಿ ಸದುಪಯೋಗ ಪಡಿಸಿಕೊಂಡು ನೆಲ ಮಟ್ಟದಿಂದ ಕೆಳಗೆ ರಚಿಸಿರುವ ನೀರು ಸಂಗ್ರಹಣಾ ಘಟಕಗಳ ಮತ್ತು ನೆಲ ಮಟ್ಟಕ್ಕಿಂತ ಮೇಲೆ ರಚಿಸಿರುವ ನೀರು ಸಂಗ್ರಹ ವಿನ್ಯಾಸಗಳ ಅನುಗುಣವಾಗಿ ಸಹಾಯ ಧನವನ್ನು ತೋಟಗಾರಿಕೆ ಇಲಾಖೆ ನೀಡಲಾಗುವುದು ಎಂದು ಮಾಹಿತಿ ನೀಡಿದೆ.

ಅರ್ಹ ರೈತರಿಂದ ಅರ್ಜಿ: ತೋಟಗಾರಿಕೆ ಇಲಾಖೆ ವತಿಯಿಂದ 2020-21 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ನೀರು ಸಂಗ್ರಹಣಾ ಘಟಕ ಅನುಷ್ಠಾನಗೊಳಿಸುತ್ತಿದೆ. ಜಿಲ್ಲೆಯ ವ್ಯಾಪ್ತಿಯ ಅರ್ಹ ರೈತರಿಂದ ಅರ್ಜಿಗಳನ್ನು ತೋಟಗಾರಿಕೆ ಇಲಾಖೆ ಆಹ್ವಾನಿಸಿದೆ. ಸೆ.16 ರ ಒಳಗಾಗಿ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತೋಟಗಾರಿಕೆ ಇಲಾಖೆ ಕೋರಿದೆ.

ಟ್ಯಾಂಕರ್‌ ವಿತರಣೆಗೆ ತಯಾರಿ: ಕೋವಿಡ್ ಲಾಕ್‌ ಡೌನ್‌ನಿಂದಾಗಿ ಹೂ, ಹಣ್ಣು ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರೂ ಅವರನ್ನು ಮತ್ತೆ ತೋಟಗಾರಿಕೆ ಬೆಳೆಯತ್ತ ಆಕರ್ಷಿಸಲು ಮತ್ತು ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಟ್ಯಾಂಕರ್‌ಗಳನ್ನು ವಿತರಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

Advertisement

ಜಮೀನಿನಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗದಂತೆ ಸೂಕ್ತ ಸ್ಥಳದಲ್ಲಿ 4 ಸಾವಿರ ಕ್ಯೂಬಿಕ್‌ ಮೀಟರ್‌ನಿಂದ 8 ಸಾವಿರ ಕ್ಯೂಬಿಕ್‌ ಮೀಟರ್‌ ಗಾತ್ರದಷ್ಟು ಹೊಂಡ ತೆಗೆದು ನೀರು ಸಂಗ್ರಹಿಸಿ ಬೆಳೆಗಳಿಗೆ ನೀರಾವರಿ ಒದಗಿಸುವ ಯೋಜನೆಯ ಉದ್ದೇಶವಾಗಿದೆ.

ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ನೀರು ಸಂಗ್ರಹಣಾ ಘಟಕ ಅನುಷ್ಠಾನಗೊಳಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಟ್ಯಾಂಕರ್‌ ವಿತರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ರೈತರು ನೀರು ಸಂಗ್ರಹ ಮಾಡಿ ಬೆಳೆ ಗಳಿಗೆ ನೀರು ಬಳಸಬಹುದು. ವೈಯಕ್ತಿಕ, ಸಮುದಾಯ ನೀರು ಸಂಗ್ರಹಣಾ ಘಟಕಗಳನ್ನು ನಿರ್ಮಿಸುವ ಫ‌ಲಾನುಭವಿಗಳಿಗೆ ಜಿಲ್ಲಾ ವ್ಯಾಪ್ತಿಯ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.   ಮಹಾಂತೇಶ್‌ ಮುರುಗೋಡ್‌, ಉಪ ನಿರ್ದೇಶಕ, ಜಿಲ್ಲಾ ತೋಟಗಾರಿಕೆ ಇಲಾಖೆ

 

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next