Advertisement

ತಾಲೂಕು ಕಚೇರಿ ಮುಂದೆ ಅವೈಜ್ಞಾನಿಕ ತಂತಿ ಬೇಲಿ ನಿರ್ಮಾಣ

06:58 PM Aug 20, 2021 | Team Udayavani |

ಗುಂಡ್ಲುಪೇಟೆ: ಪಟ್ಟಣದ ಜನನಿಬಿಡ ತಾಲೂಕು ಕಚೇರಿ ಮುಂದೆ ಅವೈಜ್ಞಾನಿಕವಾಗಿ ತಂತಿ ಬೇಲಿ ನಿರ್ಮಾಣದಿಂದ ಸಾರ್ವಜನಿಕರಿಗೆ
ಕಿರಿಕಿರಿ ಉಂಟಾಗಿದೆ.

Advertisement

ಒಂದೇ ಸೂರಿನಡಿ ತಹಶೀಲ್ದಾರ್‌ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪ ನೋಂದಣಿ ಕಚೇರಿ, ಆಹಾರ ಇಲಾಖೆ, ಸರ್ವೆ ಇಲಾಖೆ, ಅಬಕಾರಿ ಇಲಾಖೆ, ಟ್ರಜರಿ ಕಚೇರಿ ಮತ್ತಿತರ ಶಾಖೆಗಳು ಬರುತ್ತವೆ. ಇಲ್ಲಿಗೆ ನಿತ್ಯ ವಿವಿಧ ಕೆಲಸದ ನಿಮಿತ್ತ ನೂರಾರು ಜನರು ಬಂದು ಹೋಗುತ್ತಾರೆ. ಅಧಿಕ ಮಂದಿ ಬೈಕ್‌ಗಳಲ್ಲಿ ಬಂದು ತಹಶೀಲ್ದಾರ್‌ ಕಚೇರಿ ಇಕ್ಕೆಲಗಳಲ್ಲಿ ನಿಲ್ಲಿಸುವು ದರಿಂದ ಓಡಾಡಲು ತೊಂದರೆಯಾಗಿದೆ. ಜೊತೆಗೆ ಪೊಲೀಸ್‌ ವಸತಿ ಗೃಹಗಳಿಗೆ ಈ ಮೂಲಕವೇ ತೆರಳಬೇಕಾಗಿ ರುವ ಹಿನ್ನೆಲೆ ಸಮಸ್ಯೆ ಮತ್ತಷ್ಟು ಹೆಚ್ಚಿದೆ.

ಅಡ್ಡಾದಿಡ್ಡಿ ಪಾರ್ಕಿಂಗ್‌: ನಿತ್ಯ ತಾಲೂಕು ಕಚೇರಿ ಆಗಮಿಸುವ ಅಧಿಕಾರಿ ವರ್ಗದವರು ಸೇರಿದಂತೆ ಸಾರ್ವಜನಿಕರು ಬೈಕ್‌, ಕಾರುಗಳಲ್ಲಿ
ಬರುತ್ತಾರೆ. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಎಲ್ಲೆಂದ ರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಾರೆ. ಇದರಿಂದ ಚಿಕ್ಕ
ದಾಗಿರುವ ಪ್ರವೇಶ ದ್ವಾರಕ್ಕೆ ಸಲೀಸಾಗಿ ತೆರಳಲು ಸಮಸ್ಯೆಯಾಗುತ್ತಿದೆ. ಮಳೆ ಬಂದರೆ ನೀರು ನಿಂತು ಕೆಸರು ಗದ್ದೆಯಂತಾಗುತ್ತದೆ. ಹೀಗಾಗಿ
ತಹಶೀಲ್ದಾರ್‌ ಇತ್ತ ಗಮನ ಹರಿಸಿ ವಾಹನ ಸವಾರರಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕೆಂದು ರೈತ ಮುಖಂಡ ಬಾಚಹಳ್ಳಿ ಸ್ವಾಮಿ
ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1453 ಪ್ರಕರಣ ಪತ್ತೆ| 1408 ಸೋಂಕಿತರು ಗುಣಮುಖ

ತಂತಿಬೇಲಿ ತೆರವಿಗೆ ಒತ್ತಾಯ: ತಾಲೂಕು ಕಚೇರಿ ಒಳಗೆ ಈಗಾಗಲೇ ಸುಂದರ ಪಾರ್ಕ್‌ ನಿರ್ಮಿಸ ಲಾಗಿದೆ. ಅದಾಗ್ಯೂ ಕಚೇರಿ ಇಕ್ಕೆಲಗಳಲ್ಲಿ
ಅವೈ ಜ್ಞಾನಿಕ ತಂತಿ ಬೇಲಿ ನಿರ್ಮಿಸಿರುವುದು ಸಾರ್ವ ಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡು ತ್ತಿದೆ. ಇದನ್ನು ತೆರವುಗೊಳಿಸಿ ಜನರ ಮುಕ್ತ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಗಿರೀಶ್‌ ಲಕ್ಕೂರು ಒತ್ತಾಯಿದರು.

Advertisement

ಆಧಾರ್‌ ಕೇಂದ್ರದಲ್ಲಿ ಜನಸಂದಣಿ
ನಿತ್ಯ ನೂರಾರು ಮಂದಿ ಆಧಾರ್‌ಗೆ ಫೋನ್‌ ನಂಬರ್‌ ಜೋಡಣೆ,ಹೆಸರು ತಿದ್ದುಪಡಿಗೆ ಆಗಮಿಸುತ್ತಾರೆ. ದಿನಕ್ಕೆಕೆಲವೇ ಮಂದಿಗೆ
ತಿದ್ದುಪಡಿ ಸೀಮಿತಗೊಳಿಸಿರುವ ಹಿನ್ನೆಲೆ ಟೋಕನ್‌ ಪಡೆಯಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಟೋಕನ್‌ ಪಡೆದ ನಂತರವೂ
ನೆಟ್‌ವರ್ಕ್‌ ಮತ್ತಿತರ ಸಮಸ್ಯೆಗಳು ತಲೆದೋರುವುದರಿಂದ ಒಬ್ಬ ವ್ಯಕ್ತಿಗೆ ಆಧಾರ್‌ ಮಾಡಲು ಗಂಟೆಗಟ್ಟಲೆ ಸಮಯ ಬೇಕಾಗುತ್ತಿದೆ.
ಇದರಿಂದ ಜನರು ಸಂಯಮಕಳೆದೊಕೊಳ್ಳುವಂತಾಗಿದೆ.

ಮೂಲಭೂತ ಸೌಕರ್ಯ ಕೊರತೆ
ತಾಲೂಕು ಕಚೇರಿಗೆ ಬಂದ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆಯಿಲ್ಲ. ಕುಡಿವ ನೀರು, ಶೌಚಾಲಯ ಸಮರ್ಪಕವಾಗಿ
ಇಲ್ಲದ ಕಾರಣ ಜನರು ಬಯಲನ್ನೇ ಅವಲಂಬಿಸಬೇಕಿದೆ. ಮಹಿಳೆಯರ ಪಾಡಂತು ಹೇಳ ತೀರದಾಗಿದೆ. ಇರುವ ಒಂದು ಶೌಚಾಲಯವು ಗಬ್ಬೆದ್ದು ನಾರುತ್ತಿವುದರಿಂದ ಜನರು ಇತ್ತ ಸುಳಿಯುತ್ತಿಲ್ಲ.

ತಾಲೂಕುಕಚೇರಿ ಆವರಣದೊಳಗೆ ಸರ್ಕಾರಿ ವಾಹನ ನಿಲುಗಡೆಗೆ ಸಾಧ್ಯವಾಗದಂತೆ ಸಾರ್ವಜನಿಕರು ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿದ್ದರು. ಈ
ಕಾರಣದಿಂದ ತಂತಿ ಬೇಲಿ ನಿರ್ಮಿಸಲಾಗಿದೆ. ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ಸವಾರರು ನಿಲ್ಲಿಸದಂತೆ ಮಾಡಲು ಪಕ್ಕದಲ್ಲಿ ಶಲ್ಟರ್‌ ನಿರ್ಮಿಸಿ
ಪಾರ್ಕಿಂಗ್‌ ವ್ಯವಸ್ಥೆಕಲ್ಪಿಸಲಾಗುವುದು.
– ರವಿಶಂಕರ್‌, ತಹಶೀಲ್ದಾರ್‌

-ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next