Advertisement
ಅಕ್ಟೋಬರ್ 2017ರಲ್ಲಿ ಈ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಇದೀಗ ಅಂತಿಮ ಹಂತದಲ್ಲಿದೆ. ಕೇವಲ ಬಸ್ಸು ತಂಗುದಾಣ ಮಾತ್ರವಲ್ಲದೆ ವಾಣಿಜ್ಯ ಬಳಕೆಗೆ ಉಪಯೋಗವಾಗುವಂತೆ ಮಾಡುವ ಮೂಲಕ ಆದಾಯ ಗಳಿಸುವ ಉದ್ದೇಶವನ್ನೂ ಕೆಎಸ್ಸಾರ್ಟಿಸಿ ಹೊಂದಿದೆ.
ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವಂತೆ ನಗರಸಭೆಯ ಅನುಮತಿ ಪಡೆದು ನಗರಸಭೆಯ ಮಾರ್ಗಸೂಚಿಯಂತೆಯೇ ಈ ಟಾಯ್ಲೆಟ್ ಪಿಟ್‌ಗಳನ್ನು ರಚಿಸಲಾಗಿದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ವೈಜ್ಞಾನಿಕವಾಗಿ ನಿರ್ಮಾಣ
ಕೆಎಸ್ಸಾರ್ಟಿಸಿ ನರ್ಮ್ ಬಸ್ ತಂಗುದಾಣದಲ್ಲಿ ನಗರಸಭೆಯ ಅನುಮತಿ ಪಡೆದೇ ಶೌಚಗುಂಡಿ ನಿರ್ಮಾಣ ಮಾಡಲಾಗುತ್ತಿದೆ. ನಗರಸಭೆಯ ಅನುಸೂಚಿಯಂತೆ ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ. ಇದರಿಂದಾಗಿ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. -ರಾಘವೇಂದ್ರ,ಪರಿಸರ ಅಭಿಯಂತರರು. ಉಡುಪಿ ನಗರಸಭೆ.