Advertisement

ಪಾರ್ಕಿಂಗ್‌ ಸ್ಥಳದಲ್ಲಿ ಕೊಳವೆ ಬಾವಿ ನಿರ್ಮಾಣ

09:59 AM May 10, 2019 | Suhan S |

ಕಾಸರಗೋಡು, ಮೇ 9: ಸರಕಾರಿ ಜನರಲ್ ಆಸ್ಪತ್ರೆಯ ಕುಡಿಯುವ ನೀರು ಕ್ಷಾಮಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ.

Advertisement

ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಹಸ್ತಕ್ಷೇಪ ನಡೆಸಿ ಆಸ್ಪತ್ರೆಯ ಪಾರ್ಕಿಂಗ್‌ ಏರಿಯಾ ಬಳಿ ಕೊಳವೆ ಬಾವಿ ನಿರ್ಮಿಸಿರುವುದರಿಂದಾಗಿ ಕುಡಿಯುವ ನೀರು ಕ್ಷಾಮ ಪರಿಹಾರವಾಗಿದೆ.

ಪ್ರತ್ಯೇಕ ನಿಧಿ ಬಳಕೆ:

ನಗರಸಭೆಯ ಪ್ರತ್ಯೇಕ ನಿಧಿ ಉಪಯೋಗಿಸಿ ಕೊಳವೆ ಬಾವಿ ನಿರ್ಮಿಸಲಾಗಿದೆ. ಇದರ ಚಾಲ್ತಿ ವೆಚ್ಚವನ್ನು ನಗರಸಭೆ ವಹಿಸಿರುವುದಾಗಿ ನಗರಸಭಾ ಉಪಾಧ್ಯಕ್ಷ ಎನ್‌.ಎ. ಮುಹಮ್ಮದ್‌ ಹಾಜಿ ತಿಳಿಸಿದ್ದಾರೆ.

ದಿನಂಪ್ರತಿ 60,000 ಲೀಟರ್‌ ನೀರು ಜನರಲ್ ಆಸ್ಪತ್ರೆಗೆ ಬೇಕಾಗಿದೆ. ಇದರಲ್ಲಿ 24,000 ಲೀಟರ್‌ ನೀರು ನಗರಸಭೆ ವಿತರಿಸುತ್ತಿದೆ.

Advertisement

ಆಸ್ಪತ್ರೆಯಲ್ಲಿ ಬಾವಿಗಳಿದ್ದರೂ ಕೆಲವು ಬತ್ತಿದ್ದು, ಕೆಲವು ಮಲಿನವಾಗಿದೆ. ಜಲಪ್ರಾಧಿಕಾರದಿಂದ ಸರಬರಾಜಾಗುವ ಕುಡಿಯುವ ನೀರಿನಲ್ಲಿ ಈಗ ಉಪ್ಪು ಬೆರೆತಿರುವುದರಿಂದ ಉಪಯೋಗಶೂನ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಶಾಸಕರು ಮಧ್ಯಪ್ರವೇಶಿಸಿ ಕೊಳವು ಬಾವಿ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next