Advertisement

ಕಾನೂನು ಮಾರ್ಗದಲ್ಲಿ ರಾಮಮಂದಿರ ನಿರ್ಮಾಣ 

03:45 AM Jun 28, 2017 | Team Udayavani |

ಉಡುಪಿ: ರಾಮ ಮಂದಿರ ನಿರ್ಮಾಣಕ್ಕೆ ನವೆಂಬರ್‌ನಲ್ಲಿ ಉಡುಪಿಯಿಂದ ಚಾಲನೆ ನೀಡುವ ಕುರಿತಂತೆ ಸಂಸದ ಸಾಕ್ಷಿ ಮಹಾರಾಜ… ನೀಡಿರುವ ಹೇಳಿಕೆ ಕುರಿತಂತೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪ್ರತಿಕ್ರಿಯೆ ನೀಡಿದ್ದು ಈ ವಿಚಾರದಲ್ಲಿ ಮೊದಲು ಸಮಿತಿ, ಸಂವಿಧಾನ, ಕಾನೂನು, ರಾಜ್ಯಸಭೆ, ಲೋಕಸಭೆಯಲ್ಲಿ ತೀರ್ಮಾನ ಆಗಬೇಕು ಎಂದು ತಿಳಿಸಿದ್ದಾರೆ.

Advertisement

ಇತ್ತೀಚೆಗೆ ಸಾಕ್ಷಿ ಮಹಾರಾಜರು ಕೃಷ್ಣಮಠಕ್ಕೆ ಬಂದು ಹೋಗಿ¨ªಾರೆ. ಅವರು ರಾಮ ಮಂದಿರ ನಿರ್ಮಾಣದ ವಿಚಾರ
ಕುರಿತು ಮಾತನಾಡಿದ್ದರು. ಆದರೆ ಅವರು ಹಿಂದಿಯಲ್ಲಿ ಮಾತನಾಡಿದ್ದರಿಂದ ಸ್ಪಷ್ಟವಾಗಿ ಅರ್ಥ ಆಗಲಿಲ್ಲ ಎಂದರು. ನಮ್ಮ ಮೂರನೇ ಪರ್ಯಾಯದಲ್ಲಿ ಉಡುಪಿ ಯಲ್ಲಿ ಧರ್ಮ ಸಂಸತ್ತು ನಡೆದಿತ್ತು. ಅದರಲ್ಲಿ ರಾಮ ಮಂದಿರ ಪ್ರವೇಶಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ರಾಜೀವ್‌ ಗಾಂಧಿ ಮಂದಿರದ ಬೀಗ ತೆಗೆಸಿದ್ದರು. ಅಂದು ಎಲ್ಲರೂ ದರ್ಶನ ಮಾಡಿದ್ದರು ಎಂದು ಪೇಜಾವರ ಶ್ರೀಗಳು ನೆನಪಿಸಿಕೊಂಡರು. 

ನವೆಂಬರ್‌ನ‌ಲ್ಲಿ ಉಡುಪಿಯಲ್ಲಿ ವಿಶ್ವ ಸಂತ ಸಮ್ಮೇಳನ ನಡೆಸುವ ಅಪೇಕ್ಷೆಯಿದೆ. ಇದರಲ್ಲಿ ರಾಮಮಂದಿರ ನಿರ್ಮಾಣ ಬಗ್ಗೆ ಚರ್ಚೆಯಾಗ ಬಹುದು. ಇದರಲ್ಲಿಯೇ ರಾಮಮಂದಿರಕ್ಕೆ ಮೂಹೂರ್ತ ಆಗಬಹುದು ಎಂದು ಮಹಾರಾಜ… ಹೇಳಿರಬಹುದು. ಯಾವುದೂ ಸ್ಪಷ್ಟವಾಗದೆ ಈ ಬಗ್ಗೆ ಏನನ್ನೂ ಹೇಳಲಾರೆ ಎಂದು ಅವರು ತಿಳಿಸಿದರು.

ಪ್ರತಿಭಟನೆ ಕಾದು ನೋಡೋಣ
ಕೃಷ್ಣಮಠದಲ್ಲಿ ಉಪಾಹಾರ ಕೂಟ ವಿರೋಧಿಸಿ ನಡೆಸುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಮುಂದೇನಾಗುತ್ತದೆ ಎಂಬುದನ್ನು ಕಾದುನೋಡುತ್ತೇವೆ. ಅವರ ಪ್ರತಿಭಟನೆ ಬಗ್ಗೆ  ನಾನು ಏನನ್ನೂ ಹೇಳುವುದಿಲ್ಲ. ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಅವರು ಹೇಳಿದರು.

ನಾನು ಶಾಂತವಾಗಿಯೇ ನೋಡುತ್ತಿದ್ದೇನೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಪ್ರಮೋದ್‌ ಮುತಾಲಿಕ್‌ ಅವರ ಜತೆ ಬಹಳ ಹೊತ್ತು ಮಾತನಾಡಿದ್ದೇನೆ. ನನ್ನ ಅಭಿಪ್ರಾಯವನ್ನು ಅವರಿಗೆ ಹೇಳಿದ್ದೇನೆ. ಅವರು ಯಾವ ರೀತಿ ಪ್ರತಿಭಟನೆ ಮಾಡುತ್ತಾರೆಂದು ಗೊತ್ತಿಲ್ಲ. ಏನಾಗುತ್ತದೆ ನೋಡೋಣ ಎಂದು ಪೇಜಾವರ ಶ್ರೀಗಳು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next