Advertisement

ಸೆಪ್ಟೆಂಬರ್‌ಗೆ ಮೇಲ್ಸೇತುವೆ ನಿರ್ಮಾಣ ಪೂರ್ಣ

04:24 PM Jul 31, 2019 | Team Udayavani |

ಕುಷ್ಟಗಿ: ಇಲ್ಲಿನ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಕುಷ್ಟಗಿ ಪಟ್ಟಣ ವ್ಯಾಪ್ತಿಯ 66 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೇ.80 ರಷ್ಟಾಗಿದ್ದು, ಸೆಪ್ಟೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ.

Advertisement

ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4 ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-50ರ ಅಗಲೀಕರಣಗೊಂಡಿದ್ದು, ಅಗತ್ಯ ಮೇಲ್ಸೇತುವೆ ನಿರ್ಮಿಸಿರಲಿಲ್ಲ. ಆದರೆ ಕಾಟಾಚಾರಕ್ಕೆ ಅವೈಜ್ಞಾನಿಕವಾಗಿ ಟೆಂಗುಂಟಿ ಕ್ರಾಸ್‌ ಹಾಗೂ ಕೃಷ್ಣಗಿರಿ ಬಳಿ ಅಂಡರ್‌ಪಾಸ್‌ ನಿರ್ಮಿಸಿ ಕೈ ತೊಳೆದುಕೊಂಡಿತ್ತು. ಆದರೆ ಸಿಂಧನೂರು-ನರಗುಂದ ರಾಜ್ಯ ಹೆದ್ದಾರಿ, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕ್ರಾಸ್‌ ನಲ್ಲಿ ಮೇಲ್ಸೇತುವೆ ನಿರ್ಮಿಸುವುದು ಬಹುಜನರ ಬೇಡಿಕೆಯಾದರೂ, ಸಂಬಂಧಿಸಿದ ಗುತ್ತಿಗೆ ವಹಿಸಿಕೊಂಡ ಕಂಪನಿ ನಿರ್ಲಕ್ಷ್ಯಿಸಿತ್ತು. ನಂತರದ ದಿನಗಳಲ್ಲಿ ಈ ಹೆದ್ದಾರಿಯಲ್ಲಿ ಅಪಘಾತಗಳನ್ನು ಹೆಚ್ಚಿದ್ದರಿಂದ ಹೆದ್ದಾರಿ ದಾಟುವುದೇ ಜೀವ ಭಯಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಹೋರಾಟ ತೀವ್ರಗೊಳ್ಳಲು ಕಾರಣವಾಗಿತ್ತು.

2014ರಲ್ಲಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರ ಗಮನದಲ್ಲಿತ್ತು. ಅವರು ಸಂಸದರಾಗಿ ಚುನಾಯಿತರಾದ ಬಳಿಕ ಮೊದಲಾದ್ಯತೆಯಾಗಿ ಮೇಲ್ಸೇತುವೆಗೆ ಆಗಿನ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಂದ ಅನುಮೋದನೆ ದೊರೆಯಿತು.

ಕಳೆದ 2017ರಲ್ಲಿ ಮೇ. 27ರಿಂದ ಕಾರ್ಯಾರಂಭವಾದ ಮೇಲ್ಸೇತುವೆ ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ. ಸದ್ಯ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಮೇಲ್ಸೇತುವೆ 420 ಮೀಟರ್‌ ಇದ್ದು ಒಟ್ಟು 14 ಜೋಡು ಪಿಲ್ಲರ್‌ಗಳ ಮೇಲೆ ಸಿಕ್ಸ್‌ ವೇ ಮೇಲ್ಸೇತುವೆ ಇದಾಗಿದೆ. ಹೈದರಾಬಾದ್‌ ಕರ್ನಾಟಕದ ಹೆದ್ದಾರಿ ಮೊದಲ ಮೇಲ್ಸೇತುವೆ ಎನ್ನುವ ಹೆಗ್ಗಳಿಗೆ ಇದಾಗಿದೆ.

ಹೆದ್ದಾರಿಯಿಂದ ಕುಷ್ಟಗಿ ಪಟ್ಟಣದ ಚಿತ್ರಣ ಬದಲಾಗಿದ್ದು, ಸುಗಮ ಸಂಚಾರದ ನಿಟ್ಟುಸಿರಿಗೆ ಕಾರಣವಾಗಿದೆ. ಇದೀಗ ಸಿಂಧನೂರು-ನರಗುಂದ ರಾಜ್ಯ ಹೆದ್ದಾರಿ ಮೇಲ್ದರ್ಜೆ ಏರಿದ್ದು, ಈ ಮೇಲ್ಸೇತುವೆ ನಿರ್ಮಿಸಿರುವುದಕ್ಕೂ, ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿರುವುದಕ್ಕೂ ಸರಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳ ಕ್ರಾಸ್‌ ಈ ಮೇಲ್ಸೇತುವೆ ಕೇಂದ್ರೀಕೃತವಾಗಲಿದೆ.

Advertisement

ಒಎಸ್‌ಇ ಕಂಪನಿ ಪ್ರಕಾರ ಒಂದೂವರೆ ವರ್ಷದಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆ ವಿಳಂಬವಾಗಿದ್ದು, ಈ ಹೆದ್ದಾರಿ ಮೇಲ್ಸೇತುವೆ ನಿರ್ಮಾಣವಾಗಲು 2 ವರ್ಷ ಗತಿಸಿದೆ. ಇದೀಗ ಸಂಗಣ್ಣ ಕರಡಿ ಮತ್ತೆ ಸಂಸದರಾಗಿದ್ದು, ಕಾಮಗಾರಿಯ ವೇಗ ಹೆಚ್ಚಿದೆ.

• 66 ಕೋಟಿ ವೆಚ್ಚದಲ್ಲಿ ನಿರ್ಮಾಣ

• ಶೇ.80 ಕಾಮಗಾರಿ ಪೂರ್ಣ

• ಹೈದರಾಬಾದ್‌ ಕರ್ನಾಟಕದ ಮೊದಲ ಸಿಕ್ಸ್‌ ವೇ ಮೇಲ್ಸೇತುವೆ ಎಂಬ ಹೆಗ್ಗಳಿಕೆ

Advertisement

Udayavani is now on Telegram. Click here to join our channel and stay updated with the latest news.

Next