Advertisement

ಟಾಟಾ ಕೋವಿಡ್‌ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭ

12:42 AM Apr 13, 2020 | Sriram |

ಕಾಸರಗೋಡು: ಚೆಮ್ನಾಡ್‌ ಗ್ರಾಮ ಪಂಚಾಯತ್‌ನ ತೆಕ್ಕಿಲ್‌ ಗ್ರಾಮದಲ್ಲಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸುತ್ತಿರುವ ಕೋವಿಡ್‌ ಆಸ್ಪತ್ರೆಯ ನೆಲ ಸಮತಟ್ಟುಗೊಳಿಸುವ ಕಾಮಗಾರಿ ಆರಂಭವಾಗಿದೆ.

Advertisement

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ಸಮಕ್ಷಮದಲ್ಲಿ ಕಾಮಗಾರಿ ಆರಂಭಗೊಂಡಿದೆ. ಚಟ್ಟಂಚಾಲ್‌ ಮಲಬಾರ್‌ ಇಸ್ಲಾಮಿಕ್‌ ಕಾಲೇಜು ಬಳಿಯ 276, 277 ಸರ್ವೆ ನಂಬ್ರಗಳಲ್ಲಿರುವ 5 ಎಕ್ರೆ ಕಂದಾಯ ಜಾಗದಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. 540 ಬೆಡ್‌, ಐಸೊಲೇಶನ್‌ ವಾರ್ಡ್‌ಗಳು, ಐ.ಸಿ.ಯು. ಸಹಿತ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿರಲಿವೆ. ಟಾಟಾ ಸಮೂಹ ಸಂಸ್ಥೆ ಕಟ್ಟಡ ನಿರ್ಮಿಸಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲಿದೆ.

ಒಂದೂವರೆ ತಿಂಗಳಲ್ಲಿ ನಿರ್ಮಾಣ
ಆಸ್ಪತ್ರೆಯ ಕಾಮಗಾರಿ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇಲ್ಲಿನ ನೆಲ ಗಟ್ಟಿಯಾಗಿರುವ ಕಾರಣ ಸಮತಟ್ಟುಗೊಳಿಸಲು ಒಂದು ತಿಂಗಳು ಬೇಕಾದೀತು ಎಂದು ತಜ್ಞರು ತಿಳಿಸಿದ್ದರು. ಹೆಚ್ಚುವರಿ ಕಾರ್ಮಿಕರು ಹಾಗೂ ಯಂತ್ರಗಳನ್ನು ಬಳಸಿ 15 ದಿನಗಳಲ್ಲಿ ಈ ಕೆಲಸ ಮುಗಿಸಲಾಗುವುದು. ಬಳಿಕ ಒಂದು ತಿಂಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next