Advertisement

ಮಂದಿರಕ್ಕೆ ರಾಮನವಮಿಯಂದು ಚಾಲನೆ?

09:48 AM Nov 13, 2019 | Sriram |

ಲಕ್ನೋ/ಹೊಸದಿಲ್ಲಿ: ಎಲ್ಲವೂ ಅಂದು ಕೊಂಡಂತೆ ನಡೆದರೆ ಬರುವ ರಾಮನವಮಿಯಂದೇ ಅಯೋಧ್ಯೆಯಲ್ಲಿ ರಾಮಮಂದಿರ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ. 2020ರ ಎ.2ರಂದು ರಾಮನವಮಿ; ಅಂದು ನಿರ್ಮಾಣ ಮೊದಲ್ಗೊಂಡು 2022ಕ್ಕೆ ಮುಗಿಸುವ ಗುರಿ ಹೊಂದಲಾಗಿದೆ.

Advertisement

ಆದರೆ ರಾಮಮಂದಿರಕ್ಕೆ ಮತ್ತೆ ಶಿಲಾನ್ಯಾಸ ನಡೆಯುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದೆ 1989ರಲ್ಲಿ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಶಿಲಾನ್ಯಾಸ ನೆರವೇರಿಸಿದ್ದರು.
ಮಂದಿರ ನಿರ್ಮಾಣಕ್ಕಾಗಿ ಸೋಮನಾಥ ಮಂದಿರದ ಮಾದರಿಯಲ್ಲೇ ಟ್ರಸ್ಟ್‌ ನಿರ್ಮಾಣ ವಾಗಲಿದೆ. ಜತೆಗೆ ಅಮರನಾಥ ದೇಗುಲ ಅಥವಾ ವೈಷ್ಣೋದೇವಿ ದೇಗುಲ ಮಾದರಿಯಲ್ಲಿ ಆಡಳಿತ ಮಂಡಳಿ ಟ್ರಸ್ಟ್‌ ನಿರ್ಮಿಸಲು ಯೋಜನೆ ರೂಪಿಸಲಾಗುತ್ತದೆ ಎನ್ನಲಾಗಿದೆ.

ಸಿದ್ಧಗೊಂಡಿವೆ ಶಿಲೆಗಳು
ದೇಗುಲಕ್ಕಾಗಿ ಕೇಂದ್ರ ಸರಕಾರ 62.23 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ 43 ಎಕರೆಗಳನ್ನು ರಾಮಜನ್ಮಭೂಮಿ ನ್ಯಾಸ, 20 ಎಕರೆಗಳನ್ನು ಮಾನಸ ಭವನ, ಸಂಕಟ ಮೋಚನ ಮಂದಿರ, ಕಥಾ ಮಂಟಪ ಮತ್ತು ಜಾನಕಿ ಮಹಲ್‌ಗ‌ಳಿಂದ ಪಡೆಯಲಾಗಿದೆ. ಜತೆಗೆ ರಾಮ ಜನ್ಮಭೂಮಿ ನ್ಯಾಸ್‌ 1.80 ಲಕ್ಷ ಶಿಲೆಗಳನ್ನು ಸಿದ್ಧ ಪಡಿಸಿಕೊಂಡಿದೆ. ಇವನ್ನು ಶೀಘ್ರದಲ್ಲಿಯೇ ರಚನೆ ಯಾಗುವ ಟ್ರಸ್ಟ್‌ಗೆ ಹಸ್ತಾಂತರಿಸಲಾಗುತ್ತದೆ. ಇದೇ ವೇಳೆ ದೇಗುಲಕ್ಕಾಗಿ ಕೇಂದ್ರ ಸರಕಾರ ರಚನೆ ಮಾಡಲಿರುವ ಟ್ರಸ್ಟ್‌ನಲ್ಲಿ ರಾಮ ಜನ್ಮಭೂಮಿ ನ್ಯಾಸ್‌ ಸ್ಥಾನ ಪಡೆದುಕೊಳ್ಳಲಿದೆ ಎಂದು ಹೇಳ ಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆಗಳಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ದೂರ ಉಳಿದು, ಸಚಿವರೋರ್ವರನ್ನು ನೇಮಿಸುವ ಸಾಧ್ಯತೆ ಇದೆ.

ಮಂದಿರ ಹೇಗಿರಲಿದೆ?
ರಾಮಮಂದಿರದ ವಿನ್ಯಾಸ ಸಿದ್ಧವಾಗಿದೆ. ದೇಗುಲದಲ್ಲಿ ಒಟ್ಟಾರೆ 212 ಸ್ತಂಭಗಳು ಇರಲಿದ್ದು, ಆ ಪೈಕಿ ಅರ್ಧದಷ್ಟರ ನಿರ್ಮಾಣ ಮುಗಿದಿದೆ.

ಮುಖ್ಯಾಂಶಗಳು
ತಳಪಾಯ ನಿರ್ಮಾಣಕ್ಕೆ ಉಕ್ಕಿನ ಬಳಕೆ ಇಲ್ಲ
ಪ್ರಾರ್ಥನೆ ಹಾಲ್‌, ಶಿಕ್ಷಣಕ್ಕಾಗಿ ಪ್ರತ್ಯೇಕ ಕೊಠಡಿ
ಉಪನ್ಯಾಸಕ್ಕಾಗಿ ರಾಮಕಥಾ ಕುಂಜ್‌
ಸಂತರ ವಾಸ್ತವ್ಯಕ್ಕೆ ನಿವಾಸ
ಪ್ರವಾಸಿಗರಿಗೆ ಯಾತ್ರಿ ನಿವಾಸ
ಡಿಜಿಟಲ್‌ ಮ್ಯೂಸಿಯಂ, ಉಪಾಹಾರ ಗೃಹ
ಪವಿತ್ರ ಗ್ರಂಥಗಳಿಗೆ ಸಂಬಂಧಿಸಿದ ಚಿತ್ರಣ
ವಿಶಾಲ ವಾಹನ ನಿಲುಗಡೆಯ ಸ್ಥಳ

Advertisement
Advertisement

Udayavani is now on Telegram. Click here to join our channel and stay updated with the latest news.

Next