Advertisement

ಕೃಷಿ ಇಲಾಖೆಯಿಂದ ಇಂಗು ಗುಂಡಿಗಳ ನಿರ್ಮಾಣ

12:19 AM Jun 17, 2019 | sudhir |

ಹೆಬ್ರಿ : ಸರಕಾರ ಕೃಷಿ ಇಲಾಖೆ ಮೂಲಕ ಕೃಷಿ ಭಾಗ್ಯ ಯೋಜನೆಯಡಿ ಇಂಗು ಗುಂಡಿ ಮಾಡಿ ಕೊಡುವ ವ್ಯವಸ್ಥೆ ಮಾಡಿದ್ದು ಇದಕ್ಕೆ ಸಾಮಾನ್ಯ ವರ್ಗದ ರೈತರಿಗೆ ಶೇ.80 ಹಾಗೂ ಪ.ಜಾ/ಪ.ಪಂ.ರೈತರಿಗೆ ಶೇ.90 ಸಹಾಯಧನ ಸಿಗಲಿದೆ.

Advertisement

ಯಾರು ಆರ್ಹರು?
ಈ ಯೋಜನೆಯ ಪ್ರಯೋಜನ ಪಡೆಯಲು ರೈತರು ತಮ್ಮ ಸ್ವಂತ ಜಾಗದಲ್ಲಿ (ಆರ್‌.ಟಿ.ಸಿ,ಆಧಾರ್‌, ಬ್ಯಾಂಕ್‌ ಖಾತೆ)ಹೊಂದಿರಬೇಕು. ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡುತ್ತಾರೆ.

ಬೇರೆ ಯಾವೆಲ್ಲ ಯೋಜನೆಗಳು?
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಪಾಲಿಥೀನ್‌ ಹೊದಿಕೆ, ಡೀಸೆಲ್‌ ಪಂಪ್‌ ಸೆಟ್‌ ಅಳವಡಿಕೆ, ತುಂತುರು ನೀರಾವರಿ ಘಟಕ, ನೆರಳು ಪರದೆಯಂತಹ ಪ್ಯಾಕೇಜ್‌ ಯೋಜನೆಗಳಿದ್ದು ಒಟ್ಟು ಅನುದಾನ ಸಿಗಲಿದೆ.

ಅನುದಾನ ಯಾವುದಕ್ಕೆಲ್ಲ?
7 ಅಡಿ ಅಗಲ 10 ಅಡಿ ಆಳದಿಂದ 21ಅಡಿ ತನಕ ಕೃಷಿ ಹೊಂಡಗಳನ್ನು ಮಾಡಲು ಅನುದಾನ ಲಭ್ಯವಿದೆ. ವಿವಿಧ ಅಳತೆಯ ಕೃಷಿ ಹೊಂಡಗಳ ರಚನೆಗೆ ಕೃಷಿ ಭಾಗ್ಯ ಯೋಜನೆಯಡಿ ಸಹಾಯ ಧನ ದೊರಕುತ್ತಿದ್ದು ಉದಾ: 7x7x3 ಅಳತೆಯ ಇಂಗುಗುಂಡಿ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ 7321 ರೂ. ಹಾಗೂ ಪ.ಜಾ/ಪ.ಪಂ.ದ ರೈತರಿಗೆ 8236 ರೂ. ಸೇರಿದಂತೆ ಒಟ್ಟು ಪ್ಯಾಕೇಜ್‌ ಅಡಿಯಲ್ಲಿ 45824 ರೂ. ಸಹಾಯಧನ ಸಿಗಲಿದೆ.

ಅಂತರ್ಜಲ ಹೆಚ್ಚಿಸಲು ಸಹಕಾರಿ
ಅಗಲವಾದ ಗುಂಡಿ ಮಾಡುವ ಮೂಲಕ ಹರಿಯುವ ನೀರು ಗುಂಡಿಗೆ ಸೇರಿ ಅಂತರ್ಜಲ ವೃದ್ಧಿಯೊಂದಿಗೆ ಮಣ್ಣಿನ ಫ‌ಲವತ್ತತೆ ಹೆಚ್ಚಿಸಲು ಸಹಕಾರಿ. ತೋಡಿನಲ್ಲಿ ಸಾಗುವ ನೀರನ್ನು ಪೈಪ್‌ ಮೂಲಕ ಇಂಗು ಗುಂಡಿಗೆ ಸಾಗಿಸುವ ಮತ್ತು ಮನೆಯ ಮಾಡಿನ ನೀರನ್ನು ಇಂಗು ಗುಂಡಿಗೆ ತಲುಪಿಸುವ ವ್ಯವಸ್ಥೆಯಿಂದ ಕೂಡ ಅಂತರ್ಜಲ ಹೆಚ್ಚಿಸಬಹುದಾಗಿದೆ.

Advertisement

ಜಾಗ್ರತೆ ವಹಿಸಿ
ಮನೆಯ ಪರಿಸರದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡುವಾಗ ಸುತ್ತಲೂ ಆವರಣ ಮಾಡುವುದು ಅವಶ್ಯ. ಜನಸಮಾನ್ಯರು ಮಕ್ಕಳು, ಜಾನುವಾರುಗಳು, ಸಾಕು ಪ್ರಾಣಿ-ಪಕ್ಷಿಗಳು ತಮಗೆ ಅರಿವಿಲ್ಲದೆ ಇಂಗು ಗುಂಡಿಗೆ ಬೀಳದಂತೆ ಜಾಗ್ರತೆ ವಹಿಸುವುದು ಅಗತ್ಯ.

ಯಾರನ್ನು ಸಂಪರ್ಕಿಸಬೇಕು?
ಕೃಷಿ ಭಾಗ್ಯ ಯೋಜನೆಯಡಿ ಇಂಗುಗುಂಡಿ ನಿರ್ಮಾಣ ಮಾಡಲು ಆಸಕ್ತಿ ಇರುವ ರೈತರು ಕೃಷಿ ಇಲಾಖೆಯ ಅಧಿಕಾರಿ ಸಿದ್ದಪ್ಪ ಮೊ:8277932527 ಅವರನ್ನು ಸಂಪರ್ಕಿಸ ಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next