Advertisement
ಅವರು ಸೋಮವಾರ ಕಿನ್ನಿ ಮೂಲ್ಕಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದ ನಗರಸಭಾ ವ್ಯಾಪ್ತಿಯ ಕಿನ್ನಿಮೂಲ್ಕಿ ವಾರ್ಡಿನ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 3.50 ಕೋ. ರೂ. ಮಂಜೂರು ಕಿನ್ನಿಮೂಲ್ಕಿ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ 3.30 ಲ.ರೂ. ವ್ಯಯಿಸಲಾಗಿದ್ದು, ಮುಖ್ಯ ಮಂತ್ರಿಗಳ ವಿಶೇಷ ಅನುದಾನದಡಿ ಮಂಜೂರಾದ 10 ಕೋ.ರೂ.ಗಳಲ್ಲಿ 48 ಲ.ರೂ.ಗಳನ್ನು ಕಿನ್ನಿಮೂಲ್ಕಿ ವಾರ್ಡಿಗೆ ಬಳಸಲಾಗುವುದು ಎಂದ ಸಚಿವರು, ಬ್ರಹ್ಮಗಿರಿಯ ಅಗ್ನಿ ಶಾಮಕ ಕಚೇರಿ ಇರುವ ರಸ್ತೆಯಿಂ ಕಿನ್ನಿಮೂಲ್ಕಿ ವರೆಗೆ ದ್ವಿಪಥ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನವೆಂಬರ್‌ನಲ್ಲಿ ಲೋಕಾರ್ಪಣೆ ಉದ್ಯಮಿ ಬಿ.ಆರ್. ಶೆಟ್ಟಿ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ 200 ಬೆಡ್‌ಗಳಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಂಪೂರ್ಣ ಉಚಿತವಾಗಿದ್ದು, ನವೆಂಬರ್‌ನಲ್ಲಿ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಬನ್ನಂಜೆಯಲ್ಲಿ ನಿರ್ಮಾಣವಾಗಲಿರುವ ಜಿಲ್ಲಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶೀಘ್ರ ಟೆಂಡರ್ ಕರೆಯ ಲಾಗುವುದು ಎಂದು ಸಚಿವರು ಹೇಳಿದರು.
ಮನೆ ನಿವೇಶನ ಹಕ್ಕುಪತ್ರ, ಸಹಾಯಧನ, ವಿಧವಾ ವೇತನ, ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ ಸಹಿತ ವಿವಿಧ ಸವಲತ್ತು ವಿತರಿಸಲಾಯಿತು. ಸಚಿ ವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿದರು. ಈ ಸಂದರ್ಭ ಉಡುಪಿ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಆಯುಕ್ತ ಜನಾರ್ದನ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ
ಬನ್ನಂಜೆ, ಸದಸ್ಯರಾದ ಅಮೃತಾ ಕೃಷ್ಣ ಮೂರ್ತಿ, ಲತಾ ಆನಂದ ಶೇರಿಗಾರ್, ಜನಾರ್ದನ ಭಂಡಾರ್ಕರ್, ನಾರಾಯಣ
ಕುಂದರ್, ಗಣೇಶ್ ನೆರ್ಗಿ, ಹಸನ್ ಅಜ್ಜರಕಾಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಡಿವೈಎಸ್‌ಪಿ ಕುಮಾರಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ನವೀನ್ ಚಂದ್ರ ಜೋಗಿ ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿದರು. 1,743 ಅರ್ಜಿ ಸ್ವೀಕೃತ
ಉಡುಪಿ ನಗರಸಭೆಯ 35ನೇ ವಾರ್ಡಿನ ಜನಸಂಪರ್ಕ ಸಭೆಯ ಜತೆಗೆ ಕೊನೆಯ ಸಭೆಯೂ ಆಗಿದೆ. ಪ್ರಮೋದ್ ಮಧ್ವರಾಜ್ ಅವರು ಶಾಸಕರಾಗಿರುವ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ 65ನೇ ಗ್ರಾಮ ಗಳ ಜನಸಂಪರ್ಕ ಸಭೆಯಾಗಿದ್ದು, ಉಪ್ಪೂರು ಗ್ರಾ.ಪಂ.ನಲ್ಲಿ ಮಾತ್ರ ಬಾಕಿಯಿದೆ. ವಿಧಾನಸಭಾ ವ್ಯಾಪ್ತಿ ಯಲ್ಲಿ ಈವರೆಗೆ 1,743 ಅರ್ಜಿ ಸ್ವೀಕೃತಿಯಾದರೆ, ನಗರಸಭಾ ವ್ಯಾಪ್ತಿ ಯಲ್ಲಿ 1,422 ಅರ್ಜಿ ಸ್ವೀಕೃತ ಗೊಂಡಿದೆ.