Advertisement
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಮ್ಮಿಕೊಂಡ ಒಂದು ತಿಂಗಳ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
Related Articles
Advertisement
ಖಾದಿ ಬೆಳೆಸುವ ಬಗ್ಗೆ ಕೈಗಾರಿಕಾ ಇಲಾಖೆಗೆ ಶ್ರದ್ಧೆ ಇಲ್ಲ. ಆದ್ದರಿಂದ ಖಾದಿ ಉತ್ಪನ್ನಗಳಿಗಾಗಿಯೇ ಪ್ರತ್ಯೇಕ ಇಲಾಖೆ ರೂಪಿಸಬೇಕು. ಕೈಗಾರಿಕಾ ಇಲಾಖೆ ಹಂಗು ಇದಕ್ಕೆ ಬೇಡ ಎಂದು ಅಭಿಪ್ರಾಯಪಟ್ಟ ಅವರು, ಸರ್ಕಾರವೇ ದಂಗಾಗುವ ರೀತಿಯಲ್ಲಿ ಖಾದಿಯನ್ನು ಬೆಳೆಸಬೇಕು ಎಂದರು.
60 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿರುವುದಾಗಿ ಮಂಡಳಿ ಹೇಳಿಕೊಳುತ್ತಿದೆ. ಆದರೆ, 50 ವರ್ಷಗಳು ಕಳೆದರೂ ಉದ್ಯೋಗಿಗಳ ಸಂಖ್ಯೆ ಒಂದು ಲಕ್ಷ ಕೂಡ ದಾಟಿಲ್ಲ. ಒಟ್ಟಾರೆ ಜವಳಿ ಕ್ಷೇತ್ರದಲ್ಲಿ ಖಾದಿ ಉತ್ಪನ್ನಗಳು ಶೇ. 1ರಷ್ಟು ಮಾತ್ರ ತಯಾರಾಗುತ್ತಿವೆ. ಇದೇನು ..ಪ್ರಗತಿಯೇ? ನಮ್ಮವರಿಗೆ ಸ್ವಾಭಿಮಾನ ಇದೆಯೇ? ವಿದೇಶಿಗರು ನಮ್ಮ ಕಾಟನ್ ಬಟ್ಟೆ ಕೇಳಿ ಪಡೆಯುತ್ತಾರೆ. ಆದರೆ, ನಾವು ಖರೀದಿಸುತ್ತಿಲ್ಲ. ನಾಚಿಕೆ ಆಗಬೇಕು ಎಂದು ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಕಲಿ ಖಾದಿಗೆ ಪ್ರತಿಬಂಧಕ; ಪಾಪು: ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ (ಪಾಪು) ಮಾತನಾಡಿ, ಮಿಲ್ ಬಟ್ಟೆಗಳು ಖಾದಿ ಭಂಡಾರದ ಹೆಸರಲ್ಲಿ ಮಾರಾಟ ಆಗುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಮಿಲ್ ಬಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಪರವಾನಗಿ ನೀಡುವಾಗ ಈ ಸಂಬಂಧ ಸ್ಪಷ್ಟ ಪ್ರತಿಬಂಧಕಗಳನ್ನು ವಿಧಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮೇಯರ್ ಸಂಪತ್ ರಾಜ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಮಾತನಾಡಿದರು. ನಿರ್ದೇಶಕ ಸೋಮಶೇಖರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
“ರಾಜಕಾರಣಿಗಳಿಗೆ ಖಾದಿ ಹಾಕಿಸಿ’: “ಮೊದಲು ನಮ್ಮ ರಾಜಕಾರಣಿಗಳಿಗೆ ಖಾದಿ ಬಟ್ಟೆ ಧರಿಸುವ ಮನೋಭಾವ ಬೆಳೆಸುವ ಅವಶ್ಯಕತೆ ಇದೆ’ ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ ಪಕ್ಷದ ನಾಯಕರು ಖಾದಿ ಬಟ್ಟೆ ಧರಿಸುತ್ತಾರೆ. ಆದರೆ, ರಾಜ್ಯದಲ್ಲಿ ಸ್ವತಃ ಕಾಂಗ್ರೆಸ್ ನಾಯಕರೇ ಖಾದಿ ಧರಿಸುವುದಿಲ್ಲ. ಉಳಿದ ಪಕ್ಷಗಳ ನಾಯಕರದ್ದು ದೂರದ ಮಾತು. ಆದ್ದರಿಂದ ಮೊದಲು ರಾಜಕಾರಣಿಗಳಿಗೆ ಖಾದಿ ಬಟ್ಟೆ ಹಾಕಿಸಬೇಕು ಎಂದು ಎಚ್.ಎಸ್. ದೊರೆಸ್ವಾಮಿ ತಿಳಿಸಿದರು.
ಒಂದು ತಿಂಗಳ ಮಾರಾಟ: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಒಂದು ತಿಂಗಳ ಕಾಲ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಇಲ್ಲಿ ಖಾದಿಗೆ ಸಂಬಂಧಿಸಿದ ಜುಬ್ಬ, ಸೀರೆ, ವಸ್ತ್ರಗಳು ಮತ್ತು ಇತರ ಗ್ರಾಮೋದ್ಯೋಗ ವಸ್ತುಗಳು ದೊರೆಯಲಿದೆ. ಖಾದಿ ಉತ್ಪನ್ನಗಳು ವಿನೂತನ ವಿನ್ಯಾಸ ಮತ್ತು ಆಕರ್ಷಕ ಬಣ್ಣ ಗಳ ವಸ್ತ್ರಗಳು ಇಲ್ಲಿ ಲಭ್ಯವಿದೆ.