Advertisement
ಮುಜರಾಯಿ ಇಲಾಖೆಯ ದೇಗುಲಕ್ಕೆ ಬರುವ ತಾಯಂದಿರಿಗೆ ಮಗುವಿಗೆ ಹಾಲುಣಿಸಲು ಅನುಕೂಲವಾಗುವಂತೆ ದೇಗುಲದ ಆವರಣದಲ್ಲಿ ಪ್ರತ್ಯೇಕ ಕೊಠಡಿ ನಿರ್ಮಿಸಲು ಮುಂದಾಗಿದೆ.
ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ 6 ದೇಗುಲದಲ್ಲಿ ಪ್ರತ್ಯೇಕ ಶಿಶು ಆರೈಕೆ ಕೇಂದ್ರ ನಿರ್ಮಿಸಲಾಗಿದೆ. ಬೆಂಗಳೂರಿನ ಶ್ರೀ ಬನಶಂಕರಿ ದೇಗುಲ, ವಸಂತಪುರದ ವಸಂತವಲ್ಲಭರಾಯ ಸ್ವಾಮಿ ದೇಗುಲ, ಚಾಮುಂಡಿಬೆಟ್ಟ, ಮಹಾಲಕ್ಷ್ಮೀ ಲೇಔಟ್‌ನ ಮಹಾಲಕ್ಷ್ಮೀ, ನಂಜನಗೂಡಿನ ದೇವಾಲಯದಲ್ಲಿ ಪ್ರತ್ಯೇಕ ಕೊಠಡಿ ನಿರ್ಮಾಣವಾಗಿದೆ. 500 ಕಡೆ ಕೇಂದ್ರಗಳು
ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35,000 ದೇಗುಲಗಳಿವೆ. ಅದರಲ್ಲಿ ಎ ಮತ್ತು ಬಿ ಶ್ರೇಣಿಯಲ್ಲಿ ಸುಮಾರು 500 ಹಾಗೂ ಸಿ 34,500 ದೇಗುಲಗಳಿವೆ. ಈಗ ಎ ಹಾಗೂ ಬಿ ಶ್ರೇಣಿಯ ದೇಗುಲದಲ್ಲಿ ಪ್ರತ್ಯೇಕ ಕೊಠಡಿ ನಿರ್ಮಾಣವಾಗಲಿದೆ. ಇವುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ದೇಗುಲಗಳಲ್ಲಿ ಮೊದಲ ಆದ್ಯತೆಯಲ್ಲಿ ಕೊಠಡಿ ನಿರ್ಮಿಸಲು ಮುಂದಾಗಿದೆ.
Related Articles
ರಾಜ್ಯದ ಎಲ್ಲ ಎ ಹಾಗೂ ಬಿ ವರ್ಗ ಸೇರಿದ ದೇಗುಲದಲ್ಲಿ ಶಿಶು ಆರೈಕೆ ಕೇಂದ್ರ ನಿರ್ಮಿಸಬೇಕು. ಪ್ರತಿಯೊಂದು ಕಡೆಯಲ್ಲಿಯೂ ಶಿಶು ಆರೈಕೆಗೆ ಪ್ರತ್ಯೇಕ ಕೊಠಡಿ ಇರುವ ಮಾಹಿತಿಯನ್ನು ದೇವಸ್ಥಾನದ ಪ್ರಾಂಗಣದಲ್ಲಿ ಉಲ್ಲೇಖೀಸಬೇಕು. ಜತೆಗೆ ಕೊಠಡಿಯ ಸ್ವತ್ಛತೆಯತ್ತ ದೇಗಲುಗಳ ಆಡಳಿತ ಮಂಡಳಿ ಜತೆಗೆ ಭಕ್ತರೂ ಗಮನ ಹರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆ.
Advertisement
ಶೀಘ್ರದಲ್ಲಿ ರಾಜ್ಯಾದ್ಯಂತ ಪ್ರಾರಂಭರಾಜ್ಯಾದ್ಯಂತ ಮುಜರಾಯಿ ಇಲಾಖೆ ವ್ಯಾಪ್ತಿಯ ಭಕ್ತರು ಅಧಿಕವಾಗಿ ಆಗಮಿಸುವ ದೇಗಲುದಲ್ಲಿ ಶಿಶು ಆರೈಕೆಗೆ ಪ್ರತ್ಯೇಕ ಕೊಠಡಿ ನಿರ್ಮಿಸುವಂತೆ ಆದೇಶಿಸಲಾಗಿದೆ. ನಿರ್ಮಾಣ ಕೆಲಸವಾಗುತ್ತಿದೆ. ಶೀಘ್ರದಲ್ಲಿ ರಾಜ್ಯಾದ್ಯಂತ ಪ್ರಾರಂಭವಾಗಲಿದೆ.
-ಬಸವರಾಜೇಂದ್ರ ಎಚ್., ಆಯುಕ್ತರು, ಮುಜರಾಯಿ ಇಲಾಖೆ -ತೃಪ್ತಿ ಕುಮ್ರಗೋಡು