Advertisement

ಅವಧಿ ಮುಗಿಯುತ್ತ ಬಂದರೂ ಮುಗಿಯದ ವಸತಿಗೃಹ ನಿರ್ಮಾಣ

12:25 AM Apr 25, 2019 | Team Udayavani |

ಕಾರ್ಕಳ: ಕಾರ್ಕಳ ಪೊಲೀಸ್‌ ಠಾಣೆಯ ಪಕ್ಕದಲ್ಲೇ ಕಾನ್‌ಸ್ಟೆàಬಲ್‌ಗ‌ಳಿಗಾಗಿ ನಿರ್ಮಾಣ ವಾಗುತ್ತಿರುವ ವಸತಿಗೃಹ ಮೇನಲ್ಲಿ ಹಸ್ತಾಂತರ ವಾಗಬೇಕಿದ್ದರೂ ಇನ್ನೂ ಕುಂಟುತ್ತಲೇ ಸಾಗುತ್ತಿದೆ.

Advertisement

2018ರಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ನಿಯಮದಂತೆ ಮುಂದಿನ ತಿಂಗಳು ಗುತ್ತಿಗೆದಾರರು ಹಸ್ತಾಂತರಿ ಸಬೇಕು. ಆದರೆ ಆರೇಳು ತಿಂಗಳು ಕಳೆದರೂ ಕಾಮಗಾರಿ ಮುಗಿಯುವುದು ಅನುಮಾನವಾಗಿದೆ. ಈವರೆಗೆ ಗೋಡೆ, ಸ್ಲಾéಬ್‌ ಕಾಮಗಾರಿ ಆಗಿದೆ.

9.29 ಕೋಟಿ ರೂ. ವೆಚ್ಚ
ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ವತಿಯಿಂದ ಪೊಲೀಸ್‌ ಗƒಹ 2020 ಯೋಜನೆಯಡಿ ವಸತಿಗƒಹ ಕಟ್ಟಡ ನಿರ್ಮಾಣಕ್ಕೆ 9.29 ಕೋಟಿ ರೂ. ಬಿಡುಗಡೆಗೊಂಡಿತ್ತು. ಉಡುಪಿಯ ಶ್ರುತಿ ಎಂಜಿನಿಯರ್ನವರು ಕಾಮಗಾರಿ ಗುತ್ತಿಗೆ ಪಡೆದು ಕಾಮಗಾರಿ ಪ್ರಾರಂಭಿಸಿದ್ದರು. ವಸತಿ ಕಾರ್ಯ ಪೂರ್ಣಗೊಂಡ ಬಳಿಕ ಇಂಟರ್‌ಲಾಕ್‌ ಅಳವಡಿಕೆ, ಪಾರ್ಕಿಂಗ್‌ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕಾಗಿದೆ.

ಮರಳಿನ ಅಭಾವ
ಕಾರ್ಕಳದಲ್ಲಿ ಮರಳಿನ ಅಭಾವವಿರುವ ಕಾರಣ ದಿಂದಾಗಿ ಕಟ್ಟಡ ಕಾಮಗಾರಿಗಳೆಲ್ಲ ಅರೆಬರೆ ಹಂತದಲ್ಲಿದೆ. ಮರಳಿನ ಕುರಿತಾಗಿ ಸ್ಪಷ್ಟ ನಿಯಮ ವಿಲ್ಲದ ಕಾರಣ ಖಾಸಗಿಯಾಗಿ ಕಟ್ಟಡ ನಿರ್ಮಾಣ ಮಾಡುವವರಿಗೆ ಮಾತ್ರವಲ್ಲದೇ ಅನೇಕ ಸರಕಾರಿ ಕಾಮಗಾರಿಗಳಿಗೂ ತೊಂದರೆಯಾಗಿದೆ.

ಆದಷ್ಟು ಬೇಗ ದೊರೆಯಲಿದೆ
ಮೇ ವೇಳೆ ವಸತಿಗƒಹ ಹಸ್ತಾಂತರವಾಗಬೇಕಿತ್ತು. ಈ ವಿಚಾರದ ಕುರಿತಂತೆ ಕೆಎಸ್‌ಪಿಎಚ್‌, ಐಡಿಸಿಎಲ್‌ನವರೊಂದಿಗೆ ಮಾತನಾಡಿದ್ದೇನೆ. ವೃತ್ತ ನಿರೀಕ್ಷಕರು ಯೋಜನೆ ಮೇಲ್ವಿಚಾರಣೆ ನಡೆಸಲಿದ್ದು, ಆದಷ್ಟು ಬೇಗ ಕಟ್ಟಡ ಕಾಮಗಾರಿ ಮುಗಿದು ಪೊಲೀಸರಿಗೆ ವಸತಿಗೃಹ ದೊರೆಯಲಿದೆ.
– ನಿಶಾ ಜೇಮ್ಸ್‌, ಎಸ್‌ಪಿ, ಉಡುಪಿ

Advertisement

48 ಮನೆಗಳು
ಕಾರ್ಕಳದ ಪೊಲೀಸ್‌ ವಸತಿ ಸಮುಚ್ಚಯದಲ್ಲಿ ಎರಡು ಅಂತಸ್ತಿನ ನಾಲ್ಕು ಬ್ಲಾಕ್‌ಗಳಲ್ಲಿ ಒಟ್ಟು 48 ವಸತಿ ಗೃಹಗಳಿದೆ. ಇದರಿಂದ ಕಾರ್ಕಳ ನಗರ, ಗ್ರಾಮಾಂತರ ಠಾಣೆಯ 48 ಪೊಲೀಸ್‌ ಕುಟುಂಬಗಳಿಗೆ ಪ್ರಯೋಜನ ಲಭಿಸಲಿದೆ. ಕಾರ್ಕಳದ ಎರಡು ಠಾಣೆಗಳಲ್ಲಿ ಸುಮಾರು 75 ಮಂದಿ ಸಿಬಂದಿಯಿದ್ದು ಕೆಲವರು ಈಗಿರುವ ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಿದ್ದರೆ, ಮತ್ತೆ ಕೆಲವರು ಖಾಸಗಿ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿದ್ದಾರೆ. ಸರಕಾರಿ ವಸತಿಗೃಹ ಹೊಂದಿರದ ಪೊಲೀಸರಿಗೆ ಎಚ್‌ಆರ್‌ಎ ಭತ್ಯೆ ಅವರ ಖಾತೆಗೆ ಜಮೆಯಾಗುತ್ತಿದೆ.

ನೀರಿನ ಸಮಸ್ಯೆ
ಪೊಲೀಸ್‌ ಠಾಣೆ ಹಾಗೂ ಉನ್ನತ ಹಂತದ ಪೊಲೀಸ್‌ ಅಧಿಕಾರಿಗಳ ವಸತಿ ಗೃಹ ಹೊರತು ಪಡಿಸಿದರೆ ಸಿಬಂದಿ ವಸತಿಗƒಹಕ್ಕೆ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಹೊಸ ಕಟ್ಟಡದ ಸಮೀಪ ಹೊಸ ಕೊಳವೆ ಬಾವಿ ಕೊರೆಯಲಾಗಿ ಪಂಪ್‌ ಅಳವಡಿಸಿದ್ದರೂ ಪೈಪ್‌ ಲೆ„ನ್‌ ಕಾರ್ಯ ಇನ್ನೂ ಆಗಿಲ್ಲ ಎನ್ನಲಾಗಿದೆ.

  • ರಾಮಚಂದ್ರ ಬರೆಪ್ಪಾಡಿ
Advertisement

Udayavani is now on Telegram. Click here to join our channel and stay updated with the latest news.

Next