Advertisement
ಗುರುವಾರದಂದು ಆರಂಭವಾಗಿರುವ ವ್ಯಾಸರಾಯ (ರಾಜ)ರ ಆರಾಧನಾ ಕಾರ್ಯಕ್ರಮ ಕ್ಕೆ ಹೊಸಪೇಟೆ ಕಡೆಯಿಂದ ಬರುವ ಭಕ್ತರು ಮತ್ತು ವಿವಿಧ ಮಠಾಧೀಶರಿಗೆ ಅನುಕೂಲವಾಗುವ ದೃಷ್ಟಿಯಿಂದ ವ್ಯಾಸರಾಯ ಮಠದ ವತಿಯಿಂದ ತುಂಗಭದ್ರಾ ನದಿಗೆ ಸುಮಾರು 200ಮೀಟರ್ ಉದ್ದದ ತಾತ್ಕಾಲಿಕ ಪ್ಲಾಸ್ಟಿಕ್ ಸೇತುವೆ ನಿರ್ಮಿಸಿ ಲಾಗಿದೆ.ಮಹಾರಾಷ್ಟ್ರ ಪುಣೆಯ ಖಾಸಗಿ ಕಂಪನಿಯೊಂದು ನಿರ್ಮಾಣ ಮಾಡಿದ ಸೇತುವೆ ಈಭಾಗದಲ್ಲಿ ಹೊಸತಾಗಿದೆ. 2+2 ಅಳತೆಯ 10ಕೆಜಿ ಭಾರವಿರುವ ಪ್ಲಾಸ್ಟಿಕ್ ಡಬ್ಬಿಗಳನ್ನು ಒಂದಕ್ಕೊಂದು ಲಾಕರ್ ಮೂಲಕ ಜೋಡಿಸಲಾಗಿತ್ತೆ. ಡಬ್ಬಿಗಳು ಜಾರದಂತೆ ಹಗ್ಗದ ಮೂಲಕ ಕಟ್ಟಿ ಭದ್ರಪಡಿಸಲಾಗುತ್ತದೆ. ಈ ಸೇತುವೆಯನ್ನು ಕಡಿಮೆ ಮತ್ತು ನಿಂತ ನೀರಿನಲ್ಲಿ ಮಾತ್ರ ನಿರ್ಮಿಸಲಾಗುತ್ತದೆ.
ತಾತ್ಕಾಲಿಕ ವ್ಯವಸ್ಥೆ: ನವವೃಂದಾವನಗಡ್ಡಿಯಲ್ಲಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಸೇತುವೆ ನಿರ್ಮಿಸಲಾಗಿದೆ. ನಿಂತ ನೀರಿನಲ್ಲಿ ಸೇತುವೆ ನಿರ್ಮಿಸಲಾಗಿದೆ. ಸುರಕ್ಷತಾ ಕ್ರಮ ಅನುಸರಿಸಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಮೇಲೆ ಜನರು ಹೋಗುವಾಗ ಒಬ್ಬಬ್ಬರಂತೆ ಹೋಗಲು ಸೂಚನೆ ನೀಡಿ ಸುರಕ್ಷತೆಯ ಎಚ್ಚರಿಕೆ ವಹಿಸಲಾಗಿದೆ. ಈ ಸೇತುವೆ ಆರಾಧನಾ ಕಾರ್ಯಕ್ರಮ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ ಎಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸ್ಥಳೀಯ ವ್ಯವಸ್ಥಾಪಕ ಸುಮಂತಕುಲಕರ್ಣಿ ಉದಯವಾಣಿ ಗೆ ತಿಳಿಸಿದ್ದಾರೆ.