Advertisement

ರಸ್ತೆ ಅಪಘಾತ ತುರ್ತು ಚಿಕಿತ್ಸೆಗೆ ಆರೈಕೆ ಕೇಂದ್ರ ನಿರ್ಮಾಣ

05:54 PM Apr 29, 2022 | Team Udayavani |

ನೆಲಮಂಗಲ: ಜನರ ಅವಶ್ಯಕತೆಗೆ ಅನುಗುಣವಾಗಿ ಸೌಲಭ್ಯ ನೀಡುವುದೇ ನಿಜವಾದ ಅಭಿವೃದ್ಧಿ. ಈ ನಿಟ್ಟಿನಲ್ಲಿ ಹೆದ್ದಾರಿಯಲ್ಲಿ ಅಪಘಾತವಾದಾಗ ತುರ್ತು ಚಿಕಿತ್ಸೆಗೆ ದಾಬಸ್‌ಪೇಟೆಯಲ್ಲಿ ಅಪಘಾತ ಆರೈಕೆ ಕೇಂದ್ರ ನಿರ್ಮಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ತಾಲೂಕಿನ ಸೋಂಪುರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಿರುವ ಅಪಘಾತ ಆರೈಕೆ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿ, ದಾಬಸ್‌ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದರಿಂದ ರಸ್ತೆ ಅಪಘಾತ ಸಂಭವಿಸಿ ಸಾಕಷ್ಟು ಪ್ರಾಣಹಾನಿಗಳಾಗಿದ್ದು, ಅನೇಕರು ತೀವ್ರವಾಗಿ ಗಾಯಗೊಂಡಿರುವುದರಿಂದ ಅಪಘಾತ ಆರೈಕೆ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರ, ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡುವುದು ಶಾಸಕರು ಮತ್ತು ತಾಲೂಕಿನ ಜನರ ಬಹುದಿನದ ಬೇಡಿಕೆಯಾಗಿತ್ತು. ಈಗ ಅಪಘಾತ ಆರೈಕೆ ಕೇಂದ್ರವನ್ನು ಉದ್ಘಾಟಿಸಲಾಗಿ ದೆ. ಶೀಘ್ರದಲ್ಲೇ ಕೇಂದ್ರಕ್ಕೆ ವೈದ್ಯರು ಮತ್ತು ಇತರೆ ಸಿಬ್ಬಂದಿ ನೀಡಲಾಗುವುದು ಎಂದರು.

ಜನೌಷಧ ಕೇಂದ್ರ: ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ ಜನೌಷಧ ಕೇಂದ್ರವೂ ಪಟ್ಟಣದಿಂದ ದೂರವಿದ್ದು, ರೋಗಿಗಳಾಗಲಿ, ಸಾರ್ವಜನಿಕರಾಗಲಿ ಹೋಗಲು ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಸಚಿವರ ಗಮನಕ್ಕೆ ತಂದ ಹಿನ್ನೆಲೆ, ಆಸ್ಪತ್ರೆಯ ಆವರಣ ದಲ್ಲಿ ತಿಂಗಳ ಅವಧಿಯೊಳಗೆ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಆಪರೇಷನ್‌ ಕಮಲ: ಬಿಜೆಪಿ ರಾಜ್ಯಾಧ್ಯಕ್ಷರ ಆಪರೇಷನ್‌ ಕಮಲದ ಬಗ್ಗೆ ಮಾಧ್ಯಮದವರು ಕೇಳಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಧ್ಯಕ್ಷರ ಮಾತು ಮತ್ತು ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲೂ ಆಪರೇಷನ್‌ ಬಗ್ಗೆ ಅಧ್ಯಕ್ಷರ ಬಳಿ ಚರ್ಚಿಸುತ್ತೇನೆ. ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದರು.

ಕಾಟಾಚಾರಕ್ಕೆ ಉದ್ಘಾಟನೆ: ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ನಾನು ವೈದ್ಯಾಕಾರಿಯಾದ್ದಾಗ ದಾಬಸ್‌ಪೇಟೆಗೆ ಸಮುದಾಯ ಆಸ್ಪತ್ರೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈಗ ಶಾಸಕನಾಗಿಯೂ ಒತ್ತಾಯಿಸಿದೆ. ಈಗ ನಿರ್ಮಿಸಿರುವ ಕಟ್ಟಡ ನಿರ್ಮಾಣ ಕಾಟಾಚಾರಕ್ಕೆ ಉದ್ಘಾಟಿಸಲಾಗಿದೆ. ಐಸಿಯು ಮತ್ತು ಶಸ್ತ್ರ ಚಿಕಿತ್ಸಾ ಕೊಠಡಿಗಳ ಗುಣಮಟ್ಟ ಸರಿಯಿಲ್ಲ. ಅವೈಜ್ಞಾನಿ ಕವಾಗಿ ಕಟ್ಟಡ ಕಟ್ಟಿದ್ದಾರೆ ಎಂದರು.

Advertisement

ಆರೋಗ್ಯಾಕಾರಿಗೆ ತರಾಟೆ: ಪಟ್ಟಣದಲ್ಲಿ ಅಪಘಾತ ಆರೈಕೆ ಕೇಂದ್ರ ಉದ್ಘಾಟನೆ ಬಗ್ಗೆ ಮಾಜಿ ಶಾಸಕರಿಗೆ ಮಾಹಿತಿ ಇಲ್ಲ. ನಮ್ಮ ಪಕ್ಷದ ಸಚಿವರು ತಾಲೂಕಿಗೆ ಆಗಮಿಸುತ್ತಿರುವ ಬಗ್ಗೆ ಆರೋಗ್ಯ ಇಲಾಖೆಯವರು ಮಾಹಿತಿಯೇ ನೀಡಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಜನಪ್ರತಿನಿಧಿಗಳಿಗೆ ವಿಷಯವೇ ಗೊತ್ತಿಲ್ಲ. ಇದೇನಾ ನಿಮ್ಮ ಕಾರ್ಯವೈಖ್ಯರಿ ಎಂದು ತಾಲೂಕು ಆರೋಗ್ಯಾಕಾರಿಗಳಿಗೆ ಮಾಜಿ ಶಾಸಕ ಎಂ.ವಿ. ನಾಗರಾಜು ತರಾಟೆಗೆ ತೆಗೆದುಕೊಂಡರು.

ಶಾಲೆ ಉಳಿಸಿ ಕೊಡುವಂತೆ ಮನವಿ: ಪಟ್ಟಣದ ಸಿವಿಜಿ ಪ್ರೌಢಶಾಲೆ ಆಡಳಿತ ಮಂಡಳಿ ದುರಾಚಾರ ಮತ್ತು ಶಾಲೆಯ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಪಂ ಸದಸ್ಯ ಅಶೋಕ್‌ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದರು.

ಪೌರಾಡಳಿತ ಸಚಿವ ಎಂಟಿಬಿ ನಾಗರಾಜು, ಶಾಸಕ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಜಿಲ್ಲಾ ಆರೋಗ್ಯಾಕಾರಿ ತಿಪ್ಪೆಸ್ವಾಮಿ, ತಹಶೀಲ್ದಾರ್‌ ಕೆ.ಮಂಜುನಾಥ್‌, ತಾಪಂ ಇಒ ಮೋಹನ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next