ಸೇಡಂ: ಡಾ| ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಸಂವಿಧಾನ ಗ್ರಂಥ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅದಕ್ಕೆ ಮಿಗಿಲಾದಗ್ರಂಥ ಮತ್ತೂಂದಿಲ್ಲ ಎಂದು ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗೆಳ್ಳಿ ಹೇಳಿದರು. ಪಟ್ಟಣದ ಕ್ರೀಡಾಂಗಣದಲ್ಲಿಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂವಿಧಾನದ ಆಧಾರದ ಮೇಲೆ ಅನೇಕರು ಸರಿಯಾದ ಮಾರ್ಗದಲ್ಲಿನಡೆಯುವಂತಾಗಿದೆ. ಪ್ರತಿಯೊಂದು ಜಾತಿ, ಜನಾಂಗಕ್ಕೆ ಸಮಾನ ಹಕ್ಕು ದೊರೆಯುತ್ತಿದೆ. ತಮ್ಮ ಅಧಿಕಾರಾವಧಿಯಲ್ಲಿ ಸರ್ವರಿಗೂನ್ಯಾಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಜಿಪಂ ಸದಸ್ಯ ದಾಮೋಧರರೆಡ್ಡಿ ಪಾಟೀಲ ಮಾತನಾಡಿ, ವಿವಿಧ ಸಮುದಾಯಗಳ ಧರ್ಮ ಗ್ರಂಥಗಳಾದ ಕುರಾನ್, ಗೀತಾ,ಬೈಬಲ್‌ಗಿಂತಲೂ ಸಂವಿಧಾನವೇ ಶ್ರೇಷ್ಠ ಎಂದು ಪ್ರತಿಪಾದಿಸಿದರು. ತೋಟಗಾರಿಕೆ ಮಹಾಮಂಡಳಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಊಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರಾವ ಮಾಲಿಪಾಟೀಲ ಮಾತನಾಡಿದರು.
ತಾಪಂ ಅಧ್ಯಕ್ಷೆ ಸುರೇಖಾ ರಾಜಶೇಖರ ಪುರಾಣಿಕರ, ಪುರಸಭೆ ಅಧ್ಯಕ್ಷೆ ಮಲ್ಲಮ್ಮಚವ್ಹಾಣ, ಗೌರಮ್ಮ ಜೈಭೀಮ, ದೇವಮ್ಮ ಕರೆಪ್ಪ ಪಿಲ್ಲಿ, ತಾಪಂ ಇಒ ಗುರುನಾಥ ಶೆಟಗಾರ, ಸಿಪಿಐ ಪಂಚಾಕ್ಷರಿ ಸಾಲಿಮಠ ಇದ್ದರು. ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಸ್ವಾಗತಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಯ್ಯಸ್ವಾಮಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ ವಂದಿಸಿದರು. ಇದೇ ವೇಳೆ ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿ ಪ್ರದರ್ಶನ ನೀಡಿದರು. ಜೆನ್ ಶಿಟೋ ರಿಯೋ ಕರಾಟೆ ಶಾಲೆ ಮಕ್ಕಳ ಕರಾಟೆ ಪ್ರದರ್ಶನ ಗಮನಸೆಳೆಯಿತು.