Advertisement

ಸಂವಿಧಾನದ ಮೇಲೆ ದಾಳಿ, ದೇಶದಲ್ಲಿ ಭಯದ ವಾತಾವರಣ: ರಾಹುಲ್‌ ಆಕ್ರೋಶ

04:04 PM May 17, 2018 | udayavani editorial |

ರಾಯ್‌ಪುರ : ದೇಶದ ಸಂವಿಧಾನವು ತೀವ್ರವಾದ ದಾಳಿಗೆ ಗುರಿಯಾಗಿದೆ; ದೇಶದಲ್ಲಿ ಭಯದ ವಾತಾವರಣ ಇದೆ. ಸರ್ವಾಧಿಕಾರಿ ಆಡಳಿತೆ ಇರುವ ಪಾಕಿಸ್ಥಾನ ಮತ್ತು ಕೆಲವು ಆಫ್ರಿಕನ್‌ದೇಶಗಳಲ್ಲಿ ಇರುವ ಭೀತಿಯ ವಾತಾವರಣ ಈಗ ನಮ್ಮ ದೇಶದಲ್ಲೂ ನೆಲೆಗೊಂಡಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕರ್ನಾಟಕದ ವಿದ್ಯಮಾನಗಳಿಂದ ಆಕ್ರೋಶಿತರಾಗಿ ಗುಡುಗಿನ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಪ್ರಕೃತ ಎರಡು ದಿನಗಳ ಛತ್ತೀಸ್‌ಗಢ ಭೇಟಿಯಲ್ಲಿರುವ ರಾಹುಲ್‌ ಗಾಂಧಿ ಅವರು ಇಂದು ಗುರುವಾರ ಇಲ್ಲಿ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೆರೆದ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

ಬಿಜೆಪಿ ನಾಯಕ ಬಿ ಎಸ್‌ ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿದ್ಯಮಾನವನ್ನು ಖಂಡಿಸಿ ಮಾತನಾಡುತ್ತಿದ್ದ ಅವರು, ದೇಶದ ನ್ಯಾಯಾಂಗ ಕೂಡ ಬೆದರಿಕೆ ಮತ್ತು ದಮನಕ್ಕೆ ಗುರಿಯಾಗುತ್ತಿದೆ ಎಂದು ಹುಯಿಲೆಬ್ಬಿಸಿದರು. 

ಈ ವರ್ಷ ಜನವರಿಯಲ್ಲಿ ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ದೇಶದ ವರಿಷ್ಠ ನ್ಯಾಯಮೂರ್ತಿಗಳ ವಿರುದ್ದ ತಮಗಿರುವ ಅಹವಾಲುಗಳನ್ನು ಹೇಳಿಕೊಳ್ಳಲು ನಡೆಸಿದ ಅಭೂತಪೂರ್ವ ಪತ್ರಿಕಾ ಗೋಷ್ಠಿಯನ್ನು ರಾಹುಲ್‌ ಗಾಂಧಿ ಉಲ್ಲೇಖೀಸಿ “ದೇಶದ ಉನ್ನತ ನ್ಯಾಯಾಂಗ ಕೂಡ ಬೆದರಿಕೆ ಮತ್ತು ದಮನಕ್ಕೆ ಗುರಿಯಾಗಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next