Advertisement

ಮುಂದಿನ ಜನಾಂಗಕ್ಕೆ ಜಾಗೃತಿ ಅಗತ್ಯ: ಕರುಣಾಕರನ್‌

06:34 AM Jan 16, 2019 | Team Udayavani |

ಕಾಸರಗೋಡು : ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಸಂವಿಧಾನದ ಹಿನ್ನೆಲೆಯಲ್ಲಿ ಸಂರಕ್ಷಿಸುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಪರ್ಯಟನೆ ನಡೆಸುವ ಸಂವಿಧಾನ ಸಂದೇಶ ಯಾತ್ರೆ ಮಂಜೇಶ್ವರದಿಂದ ಆರಂಭಗೊಂಡಿತು.

Advertisement

ಕೇರಳ ವಿಧಾನ ಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ನೇತೃತ್ವದಲ್ಲಿ ಸಾಕ್ಷರತಾ ಮಿಷನ್‌ ಆಯೋಜಿಸುವ ಈ ಯಾತ್ರೆ ಸಂವಿಧಾನ ಸಾಕ್ಷರತಾ ಜನಪರ ಕಾರ್ಯ ಕ್ರಮದ ಅಂಗವಾಗಿ ನಡೆಯುತ್ತಿದೆ. ರಾಜ್ಯದ 52 ಕೇಂದ್ರಗಳನ್ನು ಸಂಪರ್ಕಿಸಿ, ಜ. 24ರಂದು ತಿರುವನಂತಪುರದಲ್ಲಿ ಯಾತ್ರೆ ಸಮಾಪ್ತಿಗೊಳ್ಳಲಿದೆ.

ಮಂಜೇಶ್ವರ ಗೋವಿಂದ ಪೈ ನಗರದಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಪಿ. ಕರುಣಾಕರನ್‌ ಯಾತ್ರೆಯನ್ನು ಉದ್ಘಾಟಿಸಿದರು. ಜಾಥಾ ಕ್ಯಾಪ್ಟನ್‌, ರಾಜ್ಯ ಸಾಕ್ಷರತಾ ಮಿಷನ್‌ ಪ್ರಾಧಿಕಾರ ನಿರ್ದೇಶಕ ಡಾ| ಪಿ.ಎಸ್‌.ಶ್ರೀಕಲಾ ಅವರಿಗೆ ಸಂಸದ ಧ್ವಜ ಹಸ್ತಾಂತರಿಸಿದರು.

ಜಾಥಾ ಕ್ಯಾಪ್ಟನ್‌ ಡಾ| ಪಿ.ಎಸ್‌.ಶ್ರೀಕಲಾ ಅವರು ಮಾತನಾಡಿ ಎಲ್ಲರನ್ನೂ ಸಮಾನವಾಗಿ ಕಾಣುವ ದೃಷ್ಟಿಕೋನವೇ ನಮ್ಮ ಸಂವಿಧಾನದ ವಿಶೇಷ. ಈ ಸಂದೇಶ ವನ್ನು ಜನತೆಗೆ ತಲಪಿಸುವ ಮಹತ್ತರ ಕರ್ತವ್ಯವನ್ನು ಸಂದೇಶ ಯಾತ್ರೆ ನಡೆಸುತ್ತಿದೆ ಎಂದು ವಿವರಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಕೆ.ಎಂ.ಕೆ. ನಂಬ್ಯಾರ್‌ ಅವರನ್ನು ಅಭಿನಂದಿಸ ಲಾಯಿತು. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಕೆ.ಎಂ.ಕೆ. ಅಶ್ರಫ್‌, ಉಪಾಧ್ಯಕ್ಷೆ ಮಮತಾ ದಿವಾಕರ್‌, ಜಿಲ್ಲಾ ಯೋಜನೆ ಸಂಚಾಲಕ ಶಾಜು ಜೋನ್‌, ಮಂಜೇಶ್ವರ ಗ್ರಾಮ ಪಂಚಾಯತ್‌ ಅಧ್ಯಕ್ಷ ಅಬ್ದುಲ್‌ ಅಝೀಝ್, ಬ್ಲಾಕ್‌ ಪಂಚಾಯತ್‌ ಸದಸ್ಯ ಮಹಮ್ಮದ್‌ ಮುಸ್ತಫ, ಮಂಜೇಶ್ವರ ಗ್ರಾಮ ಪಂಚಾಯತ್‌ ಸದಸ್ಯರಾದ ಕೆ.ಎಂ.ಕೆ.ಅಬ್ದುಲ್‌ ರಹಮಾನ್‌ ಹಾಜಿ, ರಿಯಾನಾ, ಬ್ಲಾಕ್‌ ಕೆ.ಬಿ.ಡಿ.ಒ. ನೂತನ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.

ಯಾತ್ರೆಗೆ ಕಾಸರಗೋಡು ನಗರದ ನೂತನಬಸ್‌ ನಿಲ್ದಾಣ ಬಳಿಯ ಟಿ. ಉಬೈದ್‌ ನಗರದಲ್ಲಿ ಸ್ವಾಗತ ನೀಡಲಾಯಿತು. ಆ ಬಳಿಕ ಯಾತ್ರೆಯನ್ನು ಕಾಂಞಂಗಾಡ್‌ ಕುಂಞಿ ಮಾಧವಿನಗರ, ಚೆರುವತ್ತೂರು ಟಿ.ಎಸ್‌.ತಿರುಮುಂಬ್‌ ನಗರದಲ್ಲಿ ಸ್ವಾಗತಿಸಲಾಯಿತು

ವಿಭಜನೆ ಯತ್ನ
ವೈವಿಧ್ಯಮಯ ಸಂಸ್ಕೃತಿ ಹಿನ್ನೆಲೆ ಇರುವ ನಮ್ಮ ದೇಶದಲ್ಲಿ ಜಾತಿ, ಮತಗಳ ಹೆಸರಲ್ಲಿ ಜನತೆಯನ್ನು ಒಡೆಯುವ ಯತ್ನ ವ್ಯವಸ್ಥಿತವಾಗಿ ನಡೆದು ಬರುತ್ತಿದೆ. ಇದರ ವಿರುದ್ಧ ಮುಂದಿನ ಜನಾಂಗವನ್ನು ಜಾಗೃತಗೊಳಿಸಲು ಸಂವಿಧಾನದ ಕುರಿತು ಶಾಸ್ತ್ರೀಯವಾಗಿ ಮನನ ಮಾಡುವ ಅಗತ್ಯವಿದೆ ಎಂದು ಸಂಸದ ಪಿ.ಕರುಣಾಕರನ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next