Advertisement

ಸಂವಿಧಾನ ಎಲ್ಲ  ಕಾನೂನುಗಳ ತಾಯಿ: ಸಿದ್ರಾಮ್‌

02:48 PM Jan 20, 2021 | Team Udayavani |

ಬೀದರ: ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದದ್ದು. ನಮ್ಮ ಸಂವಿಧಾನ ಎಲ್ಲ ಕಾನೂನುಗಳ ತಾಯಿ ಬೇರು. ಎಲ್ಲರಿಗೂ ಸಮಾನ ಹಕ್ಕು ನೀಡಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಟಿ.ಪಿ. ಸಿದ್ರಾಮ್‌ ಹೇಳಿದರು.

Advertisement

ನಗರದ ಲಾಡಗೇರಿ ಹಿರೇಮಠದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಜಾಗೃತಿ ವೇದಿಕೆ, ನ್ಯೂ ಮದರ್‌ ತೆರೆಸಾ ಸಂಸ್ಥೆ, ಜಗದ್ಗುರು ಪಂಚಾಚಾರ್ಯ ಯುವಕ ಸಂಘ ಹಾಗೂ ನವೀನ್‌ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆದ ಕಾನೂನು ಅರಿವು ಹಾಗೂ ಯುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದರು ಭಾರತದ ಹೆಮ್ಮೆಯ ಪುತ್ರ. ಯುವ ಜನರಿಗೆ ಸ್ಫೂರ್ತಿ ಚಿಲುಮೆಯಂತಿದ್ದು, ಅವರ ಚಿಂತನೆ ಮತ್ತು ಆದರ್ಶ ಯುವಕರು ಜೀವನದಲ್ಲಿ ಅಳವಡಿಸಿಕೊಂಡರೆ ಭಾರತ ವಿಶ್ವದಲ್ಲಿಯೇ ಬಲಿಷ್ಠ ಆಗಬಹುದು. ಭಾರತದ ಭವ್ಯ ಪರಂಪರೆ ಮರುಸ್ಥಾಪನೆಗೆ ಇಂದಿನ ಯುವಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ ಮಾತನಾಡಿ, ವಿವೇಕಾನಂದರು ವಿಶ್ವದ ಅತ್ಯಂತ ಪ್ರಭಾವಿ ಅಧ್ಯಾತ್ಮ ಚಿಂತಕರಾದ್ದರು. ಅವರ ನುಡಿಮುತ್ತುಗಳು ನಮ್ಮನ್ನು ಸದಾಕಾಲಕ್ಕೂ ಬಡಿದೆಬ್ಬಿಸುತ್ತವೆ ಎಂದರು. ರಾಜ್ಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ನಾಸ್ವಾಮಿ ಮಾತನಾಡಿ, ವಿವೇಕಾನಂದರು ಭಾರತದ ಸಂಸ್ಕೃತಿ, ಸಿರಿವಂತಿಕೆ, ಜ್ಞಾನ ಮತ್ತು ಹಿಂದು ಧರ್ಮ ವಿಶ್ವಕ್ಕೆ ಪರಿಚಯಿಸಿದವರು ಎಂದರು.

ಇದನ್ನೂ ಓದಿ:ಗುಡಿಬಂಡೆ ವರ್ಲಕೊಂಡ ಬೆಟ್ಟಕ್ಕೆ ಗಣಿಆಪತ್ತು? ಅಧಿಕಾರಿಗಳು ಮೌನ: ಸ್ಥಳೀಯರಿಗೆ ಆತಂಕ

Advertisement

ನವೀನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೋವಿಡ್ ವಾರಿಯರ್ಗಳಾದ ಡಾ| ಚಂದ್ರಕಾಂತ ಚಿಲ್ಲರ್ಗೆ, ಡಾ| ಶಿವನಂದ ಚಿಕ್ಕಮಠ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಹೊಸ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು. ಶ್ರೀ ಗಂಗಾಧರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಸಂಯೋಜಕ ಸಂಜೀವಕುಮಾರ ಸ್ವಾಮಿ, ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರ್ಮೆ, ಅರವಿಂದ ಕುಲಕರ್ಣಿ, ಸುನೀಲ ಭಾವಿಕಟ್ಟಿ, ಶಂಕ್ರೆಪ್ಪಾ ಜನಕಟ್ಟಿ, ಸುಭಾಷ ಬಿರಾದಾರ, ಶ್ರೀಕಾಂತ ಸ್ವಾಮಿ, ಓಂಕಾರ ಉಪ್ಪೆ, ಪ್ರದೀಪ ಶೆಟಕಾರ, ಬಂಡೆಪ್ಪಾ ಗಿರಿ, ಮಲ್ಲಿಕಾರ್ಜುನ ಬಸಂತಪುರೆ, ಕಾಶಿನಾಥ ಗಿರಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next