Advertisement

Politics: ಸಂವಿಧಾನ ನನ್ನ ಧರ್ಮ: ಸಚಿವ ಪ್ರಿಯಾಂಕ್‌

08:32 PM Sep 07, 2023 | Team Udayavani |

ಬೆಂಗಳೂರು: ಸಂವಿಧಾನ ನನ್ನ ಧರ್ಮ. ನಾನದನ್ನು ನಂಬುತ್ತೇನೆ. ನಾನು ನಿಮ್ಮ ಧರ್ಮ, ಆಚರಣೆ, ಸಂಸ್ಕೃತಿಗಳನ್ನು ಪ್ರಶ್ನಿಸಿಲ್ಲ. ನನ್ನ ಧರ್ಮವನ್ನೂ ಪ್ರಶ್ನಿಸಬೇಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ಖರ್ಗೆ ಹೇಳಿದರು.

Advertisement

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಉದಯನಿಧಿ ಸ್ಟಾಲಿನ್‌ ಹೇಳಿಕೆಗಳನ್ನು ನಾನೇಕೆ ಸಮರ್ಥಿಸಿಕೊಳ್ಳಬೇಕು? ಸನಾತನ ಧರ್ಮವನ್ನು ನೀವು ನಂಬುತ್ತೀರಾ ಎಂದು ಮಾಧ್ಯಮದವರು ಪ್ರಶ್ನಿಸಿದ್ದೀರಿ. ನನಗೆ ಸಮಾನತೆಯಲ್ಲಿ ನಂಬಿಕೆಯಿದೆ ಎಂದಿದ್ದೆ. ಅದಕ್ಕೆ ಬಿಜೆಪಿಯವರು ಏಕೆ ಅಷ್ಟೊಂದು ಕೆಂಡಾಮಂಡಲ ಆಗಬೇಕೆಂದು ಮರುಪ್ರಶ್ನೆ ಹಾಕಿದರು.
ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ಅಸ್ಸಾಂ ಎಲ್ಲಿ ಬೇಕಿದ್ದರೂ ಎಫ್ಐಆರ್‌ ಆಗಲಿ. ಎಫ್ಐಆರ್‌ ಹಾಕಿದವರು ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂಬುದನ್ನೂ ಹೇಳಲಿ. ಸಂವಿಧಾನ ನನ್ನ ಧರ್ಮ, ನಾನದನ್ನು ಗೌರವಿಸುತ್ತೇನೆ, ಪ್ರೀತಿಸುತ್ತೇನೆ ಎಂದಿದ್ದಕ್ಕೆ ಎಫ್ಐಆರ್‌ ಮಾಡುತ್ತಾರಾ, ಮಾಡಲಿ ಎಂದು ಸಮರ್ಥಿಸಿಕೊಂಡರು.

ತಲೆ ಏಕೆ ಕೆಡಿಸಿಕೊಳ್ಳಬೇಕು?: ಸನಾತನ ಧರ್ಮದ ಹುಟ್ಟಿನ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಪ್ರಶ್ನಿಸಿದ್ದಾರೆ. ಯಾವುದೇ ಸಂದರ್ಭದ, ಯಾವುದೇ ನಾಗರಿಕತೆ ತೆಗೆದುಕೊಂಡರೂ ಆಧುನಿಕತೆ ಬಂದಿದ್ದೇ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದರಿಂದ. ಕುತೂಹಲ ಇರಬೇಕು. ಮಾನವಕುಲ ಮುಂದುವರಿಯಬೇಕಿದ್ದರೆ ಆಧ್ಯಾತ್ಮಿಕ, ಧಾರ್ಮಿಕ ಅಥವಾ ವೈಜ್ಞಾನಿಕ, ಸಾಂಸ್ಕೃತಿಕವಾಗಿ ಪ್ರಶ್ನೆಗಳನ್ನು ಕೇಳಬೇಕು. ಅದಕ್ಕೆ ಉತ್ತರಿಸಿ. ಅದಕ್ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next