Advertisement

Constitution;’ಜೈ ಸಂವಿಧಾನ’ ಹೇಳುವುದು ತಪ್ಪಾ?: ಪ್ರಿಯಾಂಕಾ ಪ್ರಶ್ನೆ

12:51 AM Jun 28, 2024 | Team Udayavani |

ಹೊಸದಿಲ್ಲಿ: ಲೋಕಸಭೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರ ನಡೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ “ಜೈ ಸಂವಿಧಾನ’ ಎಂಬ ಘೋಷಣೆ ಕೂಗಬಾರದೇ, ಅಧಿಕಾರದಲ್ಲಿರುವವರು ಅಸಂಸದೀಯ, ಅಸಾಂವಿಧಾನಿಕ ಘೋಷಣೆ ಕೂಗಿದಾಗ ಇರದ ಆಕ್ಷೇಪ ವಿಪಕ್ಷ ನಾಯಕರು ಕೂಗಿದಾಗ ಮಾತ್ರ ಇರುತ್ತದೆ. ಇದೇ ಸಂವಿಧಾನದಿಂದ ಸದನ ನಡೆಯುತ್ತದೆ, ಸದಸ್ಯರು ಪ್ರಮಾಣ ಸ್ವೀಕರಿಸುತ್ತಾರೆ ಹಾಗೂ ಇದೇ ಸಂವಿಧಾನದಿಂದ ನಾಗರಿಕರ ಜೀವ, ಜೀವನಕ್ಕೆ ರಕ್ಷಣೆಯಾಗುತ್ತದೆ. ಈಗ ವಿಪಕ್ಷವನ್ನು ಹತ್ತಿಕ್ಕಲು ಅದೇ ಸಂವಿಧಾನವನ್ನು ವಿರೋಧಿಸಲಾಗುತ್ತಿದೆಯೇ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

Advertisement

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪ್ರಮಾಣ ಸ್ವೀಕರಿಸುವ ವೇಳೆ “ಜೈ ಸಂವಿಧಾನ’ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಸ್ಪೀಕರ್‌ ಓಂ ಬಿರ್ಲಾ ಆಕ್ಷೇಪಿಸಿದ ಕಾರಣ ಸದನದಲ್ಲಿ ಗದ್ದಲ ಉಂಟಾಯಿತು. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಸ್ಪೀಕರ್‌ ವಿರುದ್ಧ ಕಿಡಿಕಾರಿದ್ದಾರೆ.

ಇಂದು ಸಂಸತ್‌ನಲ್ಲಿ ನೀಟ್‌ ಅಕ್ರಮ ಪ್ರಸ್ತಾವ: ಶುಕ್ರವಾರ ಸಂಸತ್‌ನ ಉಭಯ ಸದನಗಳಲ್ಲಿ ನೀಟ್‌ ಅಕ್ರಮ ವಿಚಾರವನ್ನೆತ್ತಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳ ಒಕ್ಕೂಟ ಸಜ್ಜಾಗಿವೆ. ಗುರುವಾರ ಐಎನ್‌ಡಿಐಎ ನಾಯಕರು ನಡೆಸಿದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಕುರಿತು ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗಿದ್ದು, ನೀಟ್‌ ವಿಚಾರದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next