Advertisement
– 1950ರಲ್ಲಿ ರಚಿಸಲಾಗಿರುವ ಮೂಲ ಸಂವಿಧಾನವನ್ನು ಸಂಸತ್ ಭವನದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿ ಇರಿಸಲಾಗಿದೆ.– ದೇಶದ ಖ್ಯಾತ ಕ್ರಾಂತಿಕಾರಿ ನಾಯಕರಾಗಿದ್ದ ಮಹೇಂದ್ರ ನಾಥ ರಾಯ್ (ಎಂ.ಎನ್.ರಾಯ್) ಸಂವಿಧಾನ ರಚನಾ ಸಭೆ (ಕಾನ್‌ಸ್ಟಿಟ್ಯುವೆಂಟ್ ಅಸೆಂಬ್ಲಿ) ರಚನೆ ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಿದ್ದ ಮೊದಲಿಗರಲ್ಲಿ ಒಬ್ಬರು. 1934ರಲ್ಲಿ ನಡೆದಿದ್ದ ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ಅವರು ಪ್ರಸ್ತಾಪ ಮಾಡಿದ್ದರು.
– ಜಗತ್ತಿನ ಸಂವಿಧಾನಗಳಿಗೆ ಹೋಲಿಕೆ ಮಾಡಿದಾಗ ನಮ್ಮ ದೇಶದ ಸಂವಿಧಾನವು “ಅತ್ಯಂತ ದೀರ್ಘವಾದ ಲಿಖಿತ ಸಂವಿಧಾನ’ ಎಂದು ಹೆಸರು ಪಡೆದಿದೆ. ಪ್ರೇಮ್ ನಾರಾಯಣ್ ರೈಜಾದಾ ಅವರು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅದನ್ನು ಬರೆದಿದ್ದರು. ಅದನ್ನು ಅವರು ಡೆಹ್ರಾಡೂನ್‌ನಲ್ಲಿ ಪ್ರಕಟಿಸಿದ್ದರು.
– ಸಂವಿಧಾನ ರಚನೆ ಮಾಡುವ ನಿಟ್ಟಿನಲ್ಲಿ ಆಗಿನ ಕಾಲಕ್ಕೆ 64 ಲಕ್ಷ ರೂ. ವೆಚ್ಚವಾಗಿತ್ತು.
– ಸಂವಿಧಾನದ ಮೊದಲ ಕರಡು ಸಿದ್ಧಗೊಂಡ ಬಳಿಕ ಅದಕ್ಕೆ ಸರಿ ಸುಮಾರು 2,000 ತಿದ್ದುಪಡಿಗಳನ್ನು ಸೂಚಿಸಲಾಗಿತ್ತು.
– ದೇಶದಲ್ಲಿ ಮಹಿಳೆಯರಿಗೆ ಮತ ಚಲಾವಣೆಯ ಹಕ್ಕು ನಿಷೇಧಿತವಾಗಿತ್ತು. ಸಂವಿಧಾನ ಜಾರಿಗೊಂಡ ಬಳಿಕ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು.
– ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನಕ್ಕೆ ಸಹಿ ಹಾಕಿದ ಮೊದಲ ವ್ಯಕ್ತಿ. ಸಂವಿಧಾನ ರಚನಾ ಮಂಡಳಿಯ ಅಧ್ಯಕ್ಷರಾಗಿದ್ದ ಪಿರೋಜ್ ಗಾಂಧಿ ಅವರು ಸಹಿ ಹಾಕಿದ ಕೊನೆಯ ವ್ಯಕ್ತಿ.
– 1976ರಲ್ಲಿ ಅನುಮೋದನೆಗೊಂಡು ಜಾರಿಯಾದ 43ನೇ ತಿದ್ದುಪಡಿ ಕಾಯ್ದೆಯಲ್ಲಿ ಹಲವು ಅಂಶಗಳು ಉಲ್ಲೇಖಗೊಂಡಿದ್ದವು. ಮೊದಲಿಗೆ ಉಲ್ಲೇಖಗೊಂಡಿದ್ದ “ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ’ (sovereign democratic republic)) ವನ್ನು ಸಾರ್ವಭೌಮ ಸಮಾಜವಾದಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ (sovereign, socialist secular democratic republic) ಎಂದು ಬದಲಾವಣೆಗೊಂಡಿತು. ಇದರ ಜತೆಗೆ ದೇಶದ ಏಕತೆ (unity of the nation),ಯಿಂದ ದೇಶದ ಏಕತೆ ಮತ್ತು ಸಮಗ್ರತೆ (unity and integrity of the nation)ಎಂದೂ ಬದಲಾಯಿಸಲಾಯಿತು. ಈ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು “ಮಿನಿ ಸಂವಿಧಾನ’ ಎಂದು ಕರೆಯಲಾಗುತ್ತದೆ.