Advertisement

ನ.7ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ?

12:09 PM Oct 08, 2017 | Team Udayavani |

ಬೆಂಗಳೂರು: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನವೆಂಬರ್‌ 7ರಿಂದ 18ರವರೆಗೆ ಬೆಳಗಾವಿಯ
ಸುವರ್ಣ ಸೌಧದಲ್ಲಿ ನಡೆಯುವ ಸಾಧ್ಯತೆಯಿದೆ.

Advertisement

ಮುಂದಿನ ಬುಧವಾರ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಅಂದು ಅಧಿವೇಶನದ ದಿನಾಂಕದ ಬಗ್ಗೆ
ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ನ.6ರಂದು ಕನಕ ಜಯಂತಿ ಇದ್ದು, ಮರುದಿನ 7 ರಿಂದ ಅಧಿವೇಶನ
ಪ್ರಾರಂಭಿಸಿ ನ.18ರಂದು ಶನಿವಾರವೂ ಮುಂದುವರಿಸಿ ಹತ್ತು ದಿನಗಳ ಕಾಲ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಅದಕ್ಕೆ ಮುಂಚೆ ವಿಧಾನಸೌಧದ ವಜ್ರ ಮಹೋತ್ಸವ ಅಂಗವಾಗಿ ಎರಡು ದಿನಗಳ ವಿಶೇಷ
ಅಧಿವೇಶನ ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನ ನವೆಂಬರ್‌ ಮೊದಲ ವಾರ ನಡೆಸುವುದಾ ಅಥವಾ ನವೆಂಬರ್‌ 20 ರಿಂದ ಡಿಸೆಂಬರ್‌ 2 ರವರೆಗೆ
ನಡೆಸುವುದಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ನ.14ರಂದು ಬೆಳಗಾವಿಯಲ್ಲಿ ಅಖೀಲ ಭಾರತ ಸಹಕಾರಿ
ಸಪ್ತಾಹವೂ ಇದ್ದು, ನ.7ರಿಂದ ಅಧಿವೇಶನ ಪ್ರಾರಂಭಿಸಿದರೆ ಸಹಕಾರ ಸಪ್ತಾಹದಲ್ಲೂ ಎಲ್ಲರೂ ಪಾಲ್ಗೊಳ್ಳಲು ಅನುಕೂಲವಾಗುತ್ತದೆ. ಈ ಮಧ್ಯೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.16 ರಿಂದ 18 ರವರೆಗೆ ಐಟಿ ಬಿಝ್ ನಡೆಯಲಿದ್ದು, ಅದು ಮುಗಿದ ನಂತರ ಎಂದರೆ ನ.20ರಿಂದ ಅಧಿವೇಶನ ಪ್ರಾರಂಭಿಸಿ ಡಿ.2ರವರೆಗೆ ನಡೆಸಬೇಕಾಗುತ್ತದೆ ಎಂದು ಲೆಕ್ಕಾಚಾರವಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next