ಹೊಸದಿಲ್ಲಿ: ಬಾಹ್ಯಾಕಾಶದಲ್ಲಿರುವ ಚಿಕ್ಕ ನಕ್ಷತ್ರಪುಂಜಗಳು, ದೊಡ್ಡ ನಕ್ಷತ್ರಪುಂಜಗಳ ಪಕ್ಕದಿಂದ ಹಾದು ಹೋದಾಗ ದೊಡ್ಡ ನಕ್ಷತ್ರ ಪುಂಜಗಳು ದಪ್ಪವಾಗಿ, ವೃತ್ತಾಕಾರವಾಗಿ ಅಥವಾ ಸುರುಳಿಯಾಕಾರವಾಗಿ ಬದಲಾಗುತ್ತವೆ ಎಂಬ ಅಂಶವನ್ನು ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ.
“ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್‌ನ ಪ್ರೊ| ಮೌಸ ಮಿ ದಾಸ್, “ಶಾಂಘೈ ಜಿಯಾವೊ ತೊಂಗ್ ವಿಶ್ವ ವಿದ್ಯಾಲಯದ ಡಾ| ಸಂದೀಪ್ ಕಟಾರಿಯಾ ಹಾಗೂ ಅಂಕಿತ್ ದಾಸ್ ಎಂಬ ವಿಜ್ಞಾನಿಗಳು ನಡೆಸಿದ ಜಂಟಿ ಅಧ್ಯಯನಲ್ಲಿ ತಿಳಿಸಲಾಗಿದೆ.
ಅವರ ಅಧ್ಯಯನ ವರದಿಯು, ಸಂಶೋ ಧನಾ ವರದಿಗಳನ್ನು ಪ್ರಕಟಿಸುವ ಮಾಸಿಕ ವಾದ “ರಾಯಲ್ ಆಸ್ಟ್ರಾನಮರ್ಸ್ ಸೊಸೈಟಿ’ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ. ಇಂಥ ಸಂದರ್ಭಗಳಲ್ಲಿ ದೊಡ್ಡ ನಕ್ಷತ್ರಪುಂಜಗಳ ಉದ್ದ ಮತ್ತು ಅಗಲದ ಅನುಪಾತ ಹೆಚ್ಚಾಗಿರುತ್ತದೆ. ಅವುಗಳ ವಿಸ್ತೀರ್ಣವೂ ದೊಡ್ಡದಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಫೈನಲ್ ಪ್ರವೇಶಿಸಿದ ಕೋಲ್ಕತಾ ನೈಟ್‌ರೈಡರ್
ಎರಡೂ ನಕ್ಷತ್ರಪುಂಜಗಳು ಪರಸ್ಪರ ಹತ್ತಿರಕ್ಕೆ ಬಂದಾಗ ಎರಡರಲ್ಲೂ ಅಗಾಧವಾದ ಗುರುತ್ವಾಕರ್ಷಣ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ, ಸಣ್ಣ ನಕ್ಷತ್ರಪುಂಜದಲ್ಲಿರುವ ನಕ್ಷತ್ರಗಳನ್ನು ದೊಡ್ಡ ನಕ್ಷತ್ರಪುಂಜ ಗಳು ಸೆಳೆಯಲು ಶುರು ಮಾಡುತ್ತವೆ. ಇತ್ತ, ದೊಡ್ಡ ನಕ್ಷತ್ರ ಪುಂಜಗಳಲ್ಲಿನ ತಾರೆಗಳನ್ನು ಸಣ್ಣ ನಕ್ಷತ್ರ ಪುಂಜಗಳು ಸೆಳೆಯುತ್ತವೆ. ಆದರೆ ಚಿಕ್ಕ ನಕ್ಷತ್ರ ಪುಂಜ ಗಳಿಂದ ಹೆಚ್ಚೆಚ್ಚು ತಾರೆಗಳನ್ನು ದೋ ಚುವ ದೊಡ್ಡ ನಕ್ಷತ್ರ ಪುಂಜಗಳು ಮತ್ತಷ್ಟು ದೊಡ್ಡದಾಗಿ ಬೆಳೆಯುತ್ತವೆ. ಬಾಹ್ಯಾಕಾಶದಲ್ಲಿ ಈಗಿರುವ ನಕ್ಷತ್ರಪುಂಜಗಳು ಇಂಥ ಹಲ ವಾರು ಸೆಳೆತಗಳಿಂದಲೇ ರೂಪುಗೊಂಡಂಥ ವಾಗಿವೆ ಎಂದು ವಿಜ್ಞಾನಿಗಳು ತಮ್ಮ ವರದಿ ಯಲ್ಲಿ ಉಲ್ಲೇಖೀಸಿದ್ದಾರೆ.