Advertisement
ಬುಧವಾರ ಬೆಳಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 20.06 ಮಿ.ಮೀ. ಮಳೆಯಾಗಿದೆ. ಸಿಂದಗಿ ತಾಲೂಕಿನಲ್ಲಿ 45.02 ಮಿ.ಮೀ. ದೇವರಹಿಪ್ಪರಗಿ ತಾಲೂಕಿನಲ್ಲಿ 42.73, ಮಿ.ಮೀ, ಇಂಡಿ ತಾಲೂಕಿನಲ್ಲಿ 33.18 ಮಿ.ಮೀ, ಚಡಚಣ ತಾಲೂಕಿನಲ್ಲಿ 29.05 ಮಿ.ಮೀ, ತಾಳಿಕೋಟೆ ತಾಲೂಕಿನಲ್ಲಿ 20.25 ಮಿ.ಮೀ, ವಿಜಯಪುರ ಹಾಗೂ ಬಬಲೇಶ್ವರ ತಾಲೂಕುಗಳಲ್ಲಿ ತಲಾ 19 ಮಿ.ಮೀ, ಮಳೆಯಾಗಿದೆ.
Related Articles
Advertisement
ಜಿಲ್ಲೆಯಲ್ಲಿ ಬಹುತೇಕ ಎಲ್ಲೆಡೆ ಕಳೆದ ಸುಮಾರು 12 ಗಂಟೆಯಿಂದ ನಿರಂತರ ಮಳೆ ಸುರಿಯುತ್ತಿದೆ. ಜಿಲ್ಲೆಯ ಎಲ್ಲ ಹಳ್ಳಗಳು ತುಂಬಿ ಹರಿಯುತ್ತಿವೆ. ಡೋಣಿ ನದಿ ಪ್ರವಾಹ ಮುಂದುವರಿದಿದ್ದು, ಸಾತಿಹಾಳ ಬಳಿ ಸೇತುವೆ ಜಲಾವೃತವಾಗಿದ್ದು, ಬಸವನಬಾಗೇವಾಡಿ, ದೇವರಹಿಪ್ಪರಗಿ ತಾಕೂಕಗಳ ಮಧ್ಯೆ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ಇದನ್ನೂ ಓದಿ: ರೋಣ : ಭಾರಿ ಮಳೆಗೆ ಮನೆ ಕುಸಿದು ಬಿದ್ದು 70 ವರ್ಷದ ವೃದ್ಧೆ ಸಾವು
ಈ ಮಧ್ಯೆ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.ಇದೇ ನದಿಗೆ ನಾರಾಯಣಪುರ ಬಳಿ ನಿರ್ಮಿಸಿರುವ ಬಸವಸಾಗರ ಜಲಾಶಯದಲ್ಲೂ ಒಳ ಹರಿವು ಹೆಚ್ಚಿದ್ದು, ಜಲಾಶಯದಿಂದ 1.33 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಭೀಮಾ ನದಿಗೂ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದ ಎಂದು ರೊಚ್ಚಿಗೆದ್ದ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ