Advertisement

ಸೆಗಣಿ ರಾಡಿ ಸುರುವಿಕೊಂಡು ಸೊಬರದಮಠ ಪ್ರತಿಭಟನೆ

06:00 AM Apr 11, 2018 | |

ನರಗುಂದ: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ಆಗ್ರಹಿಸಿ ನಡೆಯುತ್ತಿರುವ ನಿರಂತರ ಹೋರಾಟ ಮಂಗಳವಾರ ಸಾವಿರ ದಿನ ಪೂರೈಸಿದ್ದು, ಹೋರಾಟ ದ ನೇತೃತ್ವ ವಹಿಸಿರುವ ಸ್ವಾಮೀಜಿ ವೀರೇಶ ಸೊಬರದಮಠ ಜೀವ ಜಲಕ್ಕಾಗಿ ಮೈಮೇಲೆ ಸೆಗಣಿ ರಾಡಿ ಸುರುವಿಕೊಂಡು ವಿನೂತನವಾಗಿ ಪ್ರತಿಭಟಿಸಿದರು.

Advertisement

ನಿರಂತರ ಸತ್ಯಾಗ್ರಹ ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿತು. ಪುರಸಭೆ ಆವರಣದ ಬಾಬಾಸಾಹೇಬ ಪುತ್ಥಳಿ ಬಳಿ ಪ್ರತಿಭಟನೆ ಪ್ರಾರಂಭಿಸುವ ಮುನ್ನ ಸೇರಿದ್ದ ಹೋರಾಟಗಾರರಿಂದ ಸೊಬರದಮಠ ಸ್ವಾಮೀಜಿ ಮೈಮೇಲೆ ಸೆಗಣಿ ರಾಡಿ ಖುದ್ದಾಗಿ ಸುರುವಿಕೊಂಡರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿತು. ಪ್ರತಿಭಟನಾಕಾರರು ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ನೀರಿಗಾಗಿ  
ಒತ್ತಾಯಿಸಿದರು. ಮಹದಾಯಿ ಹೋರಾಟ 2015ರ ಜು.16ರಂದು ಪ್ರಾರಂಭಗೊಂಡು ಸುದೀರ್ಘ‌ ಒಂದು ಸಾವಿರ ದಿನ ಪೂರೈಸಿತು. ರೈತರ ಅಸಹನೆ, ಆಕ್ರೋಶ ಮುಂದುವರಿಯುತ್ತಲೇ ಬಂದಿದ್ದು, ಮಂಗಳವಾರ ಸಾವಿರ ದಿನದಂದು ಹೋರಾಟಗಾರರು ಆಳುವ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next