Advertisement

ರೈಫ‌ಲ್‌ಗ‌ಳೊಂದಿಗೆ ಪರಾರಿಯಾಗಿದ್ದ ಕಾನ್‌ಸ್ಟೆಬಲ್‌ ಹಿಜ್‌ಬುಲ್‌ಗೆ

07:19 PM May 22, 2017 | Team Udayavani |

ಶ್ರೀನಗರ : ಎರಡು ದಿನಗಳ ಹಿಂದೆ ಕಾಶ್ಮೀರದ ಬಡಗಾಂವ್‌ ಜಿಲ್ಲೆಯಿಂದ ನಾಲ್ಕು ಸರ್ವಿಸ್‌ ರೈಫ‌ಲ್‌ಗ‌ಳೊಂದಿಗೆ ಪರಾರಿಯಾಗಿದ್ದ  ಜಮ್ಮು ಕಾಶ್ಮೀರ ಪೊಲೀಸ್‌ ಕಾನ್‌ಸ್ಟೆಬಲ್‌, ಹಿಜ್‌ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದಾನೆ ಎಂದು ವರದಿಯಾಗಿದೆ.

Advertisement

ಭಾರತೀಯ ಆಹಾರ ನಿಗಮ – ಎಫ್ ಸಿ ಐ – ಇದರ ಗೋದಾಮಿನ ಕಾವಲಿಗಾಗಿ ನಿಯೋಜಿಸಲ್ಪಟ್ಟಿದ್ದ ಜಮ್ಮು ಕಾಶ್ಮೀರ ಪೊಲೀಸ್‌ ಕಾನ್‌ಸ್ಟೆಬಲ್‌ ಸೈಯದ್‌ ನವೀದ್‌ ಮುಷ್ತಾಕ್‌ ಚಾಂದ್‌ಪುರ ಪ್ರದೇಶದಿಂದ ನಾಲ್ಕು ಇನ್ಸಾಸ್‌ ರೈಫ‌ಲ್‌ಗ‌ಳೊಂದಿಗೆ ಪರಾರಿಯಾಗಿದ್ದ.

“ನಾವು ಸೈಯದ್‌ ನವೀದ್‌ (ಮುಷ್ತಾಕ್‌) ಶಾ ನನ್ನು ನಮ್ಮ ಸಂಘಟನೆಗೆ ಸ್ವಾಗತಿಸುತ್ತೇವೆ’ ಎಂದು ಹಿಜ್‌ಬುಲ್‌ ಮುಜಾಹಿದೀನ್‌ ವಕ್ತಾರ ಬುರ್ಹಾನ್‌ ಉದ್‌ ದಿನ್‌ ಹೇಳಿರುವುದನ್ನು ಉಲ್ಲೇಖೀಸಿ ಸಳೀಯ ಮಾಧ್ಯಮಗಳು ವರದಿ ಮಾಡಿವೆ. 

ಮುಷ್ತಾಕ್‌ 2012ರಲ್ಲಿ ಜಮ್ಮು ಕಾಶ್ಮೀರ ಪೊಲೀಸ್‌ ಪಡೆಯನ್ನು ಸೇರಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next