Advertisement

Punjab: ಪಂಜಾಬ್‌ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಪಾಕ್‌ ಮೂಲದ ಉಗ್ರನ ಸೆರೆ

12:20 AM Jan 13, 2024 | Team Udayavani |

ಚಂಢೀಗಢ: ಪಂಜಾಬ್‌ನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ “ಹರ್ವಿಂದರ್‌ ಸಿಂಗ್‌ ರಿಂದ’ ಪ್ರಮುಖ ಉಗ್ರ ಕೈಲಾಶ್‌ ಖೀಚನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಪಂಜಾಬ್‌ ಪೊಲೀಸ್‌ನ ಗ್ಯಾಂಗ್‌ಸ್ಟರ್‌ ನಿಯಂತ್ರಣ ದಳ ಜಂಟಿ ಕಾರ್ಯಾಚರಣೆ ನಡೆಸಿ, ರಾಜಸ್ಥಾನದ ಫ‌ಲೋಡಿ ಜಿಲ್ಲೆಯ ಲೋಹಾವತ್‌ ಗ್ರಾಮದಲ್ಲಿ ಉಗ್ರ ಕೈಲಾಶ್‌ ಖೀಚನ್‌ನನ್ನು ಬಂಧಿಸಿದ್ದಾರೆ. ಈತನಿಂದ ಚೀನ ನಿರ್ಮಿತ ಬಂದೂಕು ಮತ್ತು ಎಂಟು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next