Advertisement
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪರಿಸ್ಥಿತಿ ದುರುದ್ದೇಶದ ರಾಜಕಾರಣ ಮುಂದುವರೆದರೆ ಇಡೀ ಜಿಲ್ಲೆಯ 8 ಕ್ಷೇತ್ರಗಳಲ್ಲಿ ನನ್ನ ಅಭಿಮಾನಿಗಳಿದ್ದಾರೆ. ನಾನೇನಾದರೂ ಕರೆ ನೀಡಿದರೆ ಅವರ ಪರಿಸ್ಥಿತಿ ಏನಾದೀತೆಂದು ಅರಿಯಬೇಕು. ನನ್ನ ಪಕ್ಷದ ನಾಯಕರಿಗೆ ನೇರವಾಗಿ ಎಚ್ಚರಿಕೆ ನೀಡುತ್ತೇನೆ ಎಂದರು.
Related Articles
Advertisement
ಬಸವನಬಾಗೇವಾಡಿ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಎಂಐಎಂ ಸೇರಿ ನನ್ನ ವಿರುದ್ಧ ಚುನಾವಣಾ ನಡೆಸುತ್ತಿವೆ. ಈ ರಾಜಕೀಯ ಕುತಂತ್ರದ ಹಿಂದೆ ಇರುವ ನನ್ನ ಪಕ್ಷದ ನಾಯಕರ ಹೆಸರನ್ನು ಸಂದರ್ಭ ಬಂದಾಗ ಬಹಿರಂಗ ಮಾಡುತ್ತೇನೆ ಎಂದು ಎಚ್ಚರಿಸಿದರು.
ಪಂಚಮಸಾಲಿ ಸಮುದಾಯವರ ಬಳಿ ಹೋಗಿ ನನಗೆ ಹಾಕದಿದ್ದರೆ ಜೆಡಿಎಸ್‍ನ ಅಪ್ಪುಗೌಡರಿಗೆ ಮತ ಹಾಕಿ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಿರುವುದು ಅವರ ಹತಾಶ ದುಸ್ಥಿತಿಯನ್ನು ತೋರಿಸುತ್ತದೆ. ಬಸವನಬಾಗೇವಾಡಿ ಹಾಲಿ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದಾಗ ಎಷ್ಟು ಮತ ಪಡೆದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಎಸ್.ಕೆ.ಬೆಳ್ಳುಬ್ಬಿ ಅವರನ್ನು ಛೇಡಿಸಿದರು.
ಗಣವೇಷಧಾರಿಯಾಗಿ ಆರ್.ಎಸ್.ಎಸ್. ರೂಟ್ ಮಾರ್ಚಿನಲ್ಲಿ ಪಾಲ್ಗೊಂಡಿದ್ದವರು ಇದೀಗ ಬಸವನಬಾಗೇವಾಡಿ ಜೆಡಿಎಸ್ ಅಭ್ಯರ್ಥಿ ಎಂದು ಅಪ್ಪುಗೌಡ ಪಟೀಲ ಅವರ ಗಣವೇಷದಲ್ಲಿದ್ದ ಫೋಟೋ ಪ್ರದರ್ಶಿಸಿದ ಶಿವಾನಂದ ಪಾಟೀಲ, ಜೆಡಿಎಸ್ ಅಭ್ಯರ್ಥಿ ಯಾವ ಹಿನ್ನೆಲೆ ಹೊಂದಿದ್ದಾರೆ, ಅವರ ಜಾತ್ಯಾತೀತ ನಿಲುವೇನು, ಕುಮಾರಸ್ವಾಮಿ ಯಾವ ಆಧಾರದಲ್ಲಿ ಟಿಕೆಟ್ ನೀಡಿದ್ದಾರೆ ಎಂಬುದನ್ನು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ನನ್ನ ವಿರುದ್ಧ ಸಂಚಿಗೆ ಇನ್ನೂ ಹತ್ತು ಮಂದಿಯನ್ನು ಕಣಕ್ಕಿಳಿಸಿದರೂ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಗೆಲುವು ನನ್ನದೇ. ನನ್ನ ಪಕ್ಷದ ಜಿಲ್ಲೆಯ ನಾಯಕರು ನಡೆಸುತ್ತಿರುವ ರಾಜಕೀಯ ಸಂಚಿನ ಕುರಿತು ಹೈಕಮಾಂಡಗೆ ದೂರು ನೀಡುವುದಿಲ್ಲ. ದೇವರು ಅವರಿಗೆ ದೇವರು ಒಳ್ಳೆ ಬುದ್ದಿ ಕೊಡದಿದ್ದರೆ ನಾನೇ ಅವರಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಎಚ್ಚರಿಕೆ ನೀಡಿದರು.