Advertisement

ಚಿಕ್ಕಂದಿನಿಂದಲೇ ಶಿಸ್ತು, ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಿ’

12:44 AM Aug 04, 2019 | Sriram |

ಕುಂದಾಪುರ: ಮಕ್ಕಳು ಚಿಕ್ಕಂದಿ ನಿಂದಲೇ ಶಿಸ್ತು ಬದ್ಧ ಜೀವನಶೈಲಿಗೂ ಸಮಯಪ್ರಜ್ಞೆಯನ್ನು ಮೈಗೂಡಿಸಿ ಕೊಂಡರೆ, ಭವಿಷ್ಯದ ಬದುಕು ಸುಂದರ ವಾಗಿ ರೂಪುಗೊಳ್ಳುತ್ತದೆ. ಪ್ರೌಢಶಿಕ್ಷಣ ಜೀವನದ ಮಹತ್ವದ ಕಾಲಘಟ್ಟವಾಗಿದ್ದು, ಇಲ್ಲಿ ಎಡವಿ ಬೀಳದೆ, ಜಾಗರೂಕತೆಯಿಂದ ಮುನ್ನಡೆಯಿರಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಹೇಳಿದರು.

Advertisement

ಅವರು ಶನಿವಾರ ತಲ್ಲೂರು ಸರಕಾರಿ ಪ್ರೌಢಶಾಲೆಯಲ್ಲಿ ಈ ಸಾಲಿನ ಸ್ಟೂಡೆಂಟ್ ಪೊಲೀಸ್‌ ಕೆಡೆಟ್ ಯೋಜನೆಗೆ ಚಾಲನೆ ನೀಡಿ, ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ, ಕುಂದಾಪುರ ಪೊಲೀಸ್‌ ಠಾಣಾ ಸಹಯೋಗದಲ್ಲಿ ಆಯೋಜಿಸಿದ ರಸ್ತೆ ಸುರಕ್ಷತಾ ಸಪ್ತಾಹ, ಮಾದಕ ದ್ರವ್ಯ ವ್ಯಸನ ವಿರೋಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು, ಯುವಕರು ಗಾಂಜಾ ದಂತಹ ಮಾದಕ ವ್ಯಸನಗಳತ್ತ ಆಕರ್ಷಿತ ರಾಗದೇ ಉತ್ತಮವಾಗಿ ಕಲಿತು, ಉನ್ನತ ಸ್ಥಾನಕ್ಕೇರುವ ಕನಸನ್ನು ಕಾಣಿರಿ ಹಾಗೂ ಅದಕ್ಕಾಗಿ ನಿರಂತರವಾಗಿ ಪ್ರಯತ್ನಿಸಿ. ಹೊಸದಾಗಿ ಆರಂಭವಾದ ಈ ಸ್ಟೂಡೆಂಟ್ ಪೊಲೀಸ್‌ ಕೆಡೆಟ್ ಯೋಜನೆಯನ್ನು ನೀವೆಲ್ಲ ಸದುಪಯೋಗಪಡಿಸಿಕೊಳ್ಳಿ ಎಂದವರು ಕಿವಿಮಾತು ಹೇಳಿದರು.

ಅಭಿವೃದ್ಧಿ ಕೌಶಲ
ಕುಂದಾಪುರ ಪೊಲೀಸ್‌ ಠಾಣಾ ಎಸ್‌ಐ ಹರೀಶ್‌ ಆರ್‌. ಅವರು ಸ್ಟೂಡೆಂಟ್ ಪೊಲೀಸ್‌ ಕೆಡೆಟ್ (ಎಸ್‌ಪಿಸಿ) ಯೋಜನೆ ಬಗ್ಗೆ ಮಾಹಿತಿ ನೀಡಿ, ದೇಶದಲ್ಲಿ 10 ವರ್ಷಗಳ ಹಿಂದೆಯೇ, ಮೊದಲಿಗೆ ಕೇರಳದಲ್ಲಿ ಆರಂಭವಾಗಿದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. 8 ನೇ ತರಗತಿ ಮಕ್ಕಳಿಗೆ ಮಾತ್ರ ಇದಕ್ಕೆ ಸೇರಲು ಅವಕಾಶವಿದ್ದು, ಒಂದು ಶಾಲೆಯಲ್ಲಿ 44 ಮಂದಿ ಅದರಲ್ಲಿ ತಲಾ 22 ವಿದ್ಯಾಥಿ ಹಾಗೂ ವಿದ್ಯಾರ್ಥಿನಿಯರು ಸೇರಬಹುದು. ಒಂದು ವರ್ಷದ ಕೋರ್ಸ್‌ ಇದಾಗಿದ್ದು, ಮಕ್ಕಳಿಗೆ ಅಭಿವೃದ್ಧಿ ಕೌಶಲ ನೀಡುವ ಉದ್ದೇಶವಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿಸುವ ತರಬೇತಿ ನೀಡಲಾಗುತ್ತದೆ ಎಂದವರು ತಿಳಿಸಿದರು.

ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ, ಜಿ.ಪಂ. ಸದಸ್ಯೆ ಜ್ಯೋತಿ ಎಂ. ನಾಯ್ಕ, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ ಪೂಜಾರಿ, ಉದಯ ತಲ್ಲೂರು, ಎಸ್‌ಪಿಸಿ ಯೋಜನೆಯ ಶಾಲಾ ನೋಡಲ್ ಅಧಿಕಾರಿ ಜಾರ್ಜ್‌ ಎಸ್‌. ಗೋವಿಂದಯ್ಯ, ಮತ್ತಿತರರು ಉಪಸ್ಥಿತರಿದ್ದರು.

Advertisement

ಮುಖ್ಯೋಪಾಧ್ಯಾಯ ವಿನಾಯಕ ಕೆ. ಸ್ವಾಗತಿಸಿದರು. ಶಿಕ್ಷಕರಾದ ಮಂಜುನಾಥ ವಂದಿಸಿದರು. ಗೋವಿಂದ್‌ ಕಾರ್ಯಕ್ರಮ ನಿರ್ವಹಿಸಿದರು.

ವ್ಯಸನದಿಂದ ದೂರವಿರಿ

ದಿನೇ ದಿನೇ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಶಾಲಾ – ಕಾಲೇಜು ಮಕ್ಕಳೇ ಇದಕ್ಕೆ ಬಲಿಯಾಗುತ್ತಿದ್ದೀರಿ. ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮದ ಬಗ್ಗೆ ತಿಳಿದುಕೊಂಡು, ಇದರಿಂದ ದೂರವಿರಬೇಕು. ಇದರೊಂದಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆಯೂ ತಿಳಿದುಕೊಂಡು, ಸ್ವಾಸ್ಥ್ಯ ಸಮಾಜ ರೂಪಿಸಲು ಸಹಕರಿಸಬೇಕು. – ಹರೀಶ್‌ ಆರ್‌., ಕುಂದಾಪುರ ಎಸ್‌ಐ
Advertisement

Udayavani is now on Telegram. Click here to join our channel and stay updated with the latest news.

Next