Advertisement

ಎಚ್ಚರಿಕೆ, ಗಲ್ಲಿಗೇರಿಸಿದ್ರೆ ಹುಷಾರ್! ಕುಲಭೂಷಣ್ ಪರ ಒಂದಾದ ಲೋಕಸಭೆ

01:02 PM Apr 11, 2017 | Sharanya Alva |

ನವದೆಹಲಿ:ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ (46ವರ್ಷ) ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿರುವ ಕ್ರಮದ ವಿರುದ್ಧ ಲೋಕಸಭೆಯ ಉಭಯ ಸದನಗಳಲ್ಲಿಯೂ ಸದಸ್ಯರು ಪಕ್ಷಾತೀತವಾಗಿ ಖಂಡನೆ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದರು.

Advertisement

ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು: ಖರ್ಗೆ ಒತ್ತಾಯ
ಕುಲಭೂಷಣ್ ಜಾಧವ್ ಗೆ ಗಲ್ಲುಶಿಕ್ಷೆ ವಿಧಿಸಿರುವ ಪಾಕಿಸ್ತಾನದ ಸರ್ಕಾರದ ಕ್ರಮದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಅವರು, ಅಮಾಯಕ ವ್ಯಕ್ತಿಯನ್ನು ಪಾಕಿಸ್ತಾನ ಕಿಡ್ನಾಪ್ ಮಾಡಿ, ಈಗ ಬೇಹುಗಾರ ಎಂಬ ಸುಳ್ಳು ಆರೋಪ ಹೊರಿಸಿ, ವಿಚಾರಣೆ, ಸಾಕ್ಷ್ಯಾಧಾರ ಇಲ್ಲದೆ ಗಲ್ಲುಶಿಕ್ಷೆ ವಿಧಿಸಿದೆ. ಅದೊಂದು ಭಯೋತ್ಪಾದಕ ಫ್ಯಾಕ್ಟರಿಯನ್ನು ಹೊಂದಿರುವ ದೇಶ. ಜಾಧವ್ ರಕ್ಷಣೆಗಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಜಾಧವ್ ಬದುಕಿ ಬರದಿದ್ದರೆ ಅದು ಮೋದಿ ಸರ್ಕಾರದ ವೈಫಲ್ಯ ಎಂದು ದೂರಿದ ಖರ್ಗೆ, ಪಾಕ್ ಪ್ರಧಾನಿ ಆಹ್ವಾನಕ್ಕೆ ಮಣಿದು ಪಾಕಿಸ್ತಾನಕ್ಕೆ ಮದುವೆಗೆ ಹೋಗ್ತಾರೆ, ಮದ್ವೆಗೆ ಹೋಗುವ ಪ್ರಧಾನಿ ಮೋದಿ ಕುಲಭೂಷಣ್ ಬಗ್ಗೆ ಯಾಕೆ ಚರ್ಚಿಸಿಲ್ಲ. ಕುಲಭೂಷಣ್ ಕುರಿತಂತೆ ಪಾಕ್ ನಡೆ ಸರಿಯಾಗಿಲ್ಲ ಎಂದು ಕಿಡಿಕಾರಿದರು.

ಪಾಕ್ ಗೆ ಕಠಿಣ ಎಚ್ಚರಿಕೆಯ ಸಂದೇಶ ರವಾನೆ:
ಇರಾನ್ ನಲ್ಲಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಅಪಹರಿಸಿತ್ತು. ಬಳಿಕ ಪಾಕ್ ಮಾಧ್ಯಮಗಳ ಮುಂದೆ ಜಾಧವ್ ಅವರನ್ನು ಭಾರತದ ಬೇಹುಗಾರ ಎಂದು ಬಿಂಬಿಸಿತ್ತು. 

ಜಾಧವ್ ಗೂಢಚಾರಿ ಎಂಬ ಬಗ್ಗೆ ಯಾವುದೇ ಸಾಕ್ಷ್ಯ ನೀಡಿಲ್ಲ. ಹಾಗಾಗಿ ಒಂದು ವೇಳೆ ಜಾಧವ್ ಅವರನ್ನು ವಿಚಾರಣೆ ನಡೆಸದೇ ಗಲ್ಲುಶಿಕ್ಷೆ ವಿಧಿಸಿದರೆ ಅದು ಪೂರ್ವನಿಯೋಜಿತ ಕೊಲೆಯಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರ ಕುಲಭೂಷಣ್ ಜಾಧವ್ ಅವರ ಬಿಡುಗಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಭರವಸೆ ನೀಡಿದರು.

Advertisement

ಏನೇ ಆಗಲಿ ಕುಲಭೂಷಣ್ ಜಾಧವ್ ಅವರಿಗೆ ನ್ಯಾಯ ಒದಗಿಸಿ ಕೊಡುವುದಾಗಿ ಸಿಂಗ್ ಸ್ಪಷ್ಟಪಡಿಸಿದರು. 

ಒಂದು ವೇಳೆ ಪಾಕಿಸ್ತಾನ ಸರ್ಕಾರ ಕುಲಭೂಷಣ್ ಜಾಧವ್ ಅವರನ್ನು ಗಲ್ಲಿಗೇರಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಜಾಧವ್ ಬೇಹುಗಾರರಲ್ಲ, ಅವರು ನಿರಪರಾಧಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ಹೇಳಿದರು.

ಕುಲಭೂಷಣ್ ಜಾಧವ್ ತಪ್ಪೆಸಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಜಾಧವ್ ವಿರುದ್ಧ ಹೊರಿಸಿರುವ ಆರೋಪ ನಿರಾಧಾರವಾದದ್ದು ಎಂದರು. ಜಾಧವ್ ಗಲ್ಲುಶಿಕ್ಷೆ ವಿಚಾರದಲ್ಲಿ ಮುಂದುವರಿದರೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಸುಷ್ಮಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next