Advertisement

Water Conservation: ಜಲ ಸಂರಕ್ಷಣೆಗೆ ಜನ ಸಹಕಾರ ಮುಖ್ಯ: ಪ್ರಧಾನಿ ಮೋದಿ

11:13 PM Sep 06, 2024 | Team Udayavani |

ಸೂರತ್‌: ವಿಶ್ವದ ಒಟ್ಟು ಸಿಹಿನೀರಿನ ಸಂಪನ್ಮೂಲಗಳ ಪೈಕಿ ಭಾರತದಲ್ಲಿ ಕೇವಲ 4 ಪ್ರತಿಶತ ಭಾಗ ಮಾತ್ರವಿದ್ದು, ಜಲ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಹೀಗಾಗಿ ನೀರು ಸಂರಕ್ಷಿಸಲು ಭಾರತೀಯರು ರೆಡ್ನೂಸ್‌ (ಬಳಕೆಗೆ ಮಿತಿ), ರೀಯೂಸ್‌ (ಮರುಬಳಕೆ), ರೀಚಾರ್ಜ್‌ (ಮರುಪೂರಣ) ಮತ್ತು ರೀಸೈಕಲ್‌ (ಪುನರ್‌ಬಳಕೆ) ಎಂಬ ಮಂತ್ರ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Advertisement

ನೀರಿನ ಸಂರಕ್ಷಣೆಯಲ್ಲಿ ಸಮುದಾಯಗಳ ಪಾಲ್ಗೊಳ್ಳುವಿಕೆಯ ಗುರಿ ಹೊಂದಿರುವ “ಜಲ್‌ ಸಂಚಯ್‌ ಜನ್‌ ಭಾಗೀದಾರಿ’ ಉಪಕ್ರಮದ ಉದ್ಘಾಟನೆಯ ಭಾಗವಾಗಿ ಸೂರತ್‌ನ ವರ್ಚುವಲ್‌ ವೇದಿಕೆಯಲ್ಲಿ ಪ್ರಧಾನಿ ಮಾತನಾಡಿದರು. ಜಲವನ್ನು ಪೂಜಿಸುವ ಭಾರತೀಯ ಸಂಸ್ಕೃತಿಯೊಂದಿಗೆ ಜಲ ಸಂರಕ್ಷಣೆಯು ಮಿಳಿತವಾಗಿದ್ದು, ಜಲ ಸಂರಕ್ಷಣೆಯ ಈ ಅಭಿಯಾನವು ಕೇವಲ ಸರ್ಕಾರದ ನೀತಿಗಳಿಗಿಂತ ಮುಖ್ಯವಾಗಿ ಜನರ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆಯಿಂದ ಯಶಸ್ಸು ಪಡೆಯಲು ಸಾಧ್ಯ ಎಂದರು.

ಇದನ್ನೂ ಓದಿ: Maharastra: ಸಿಎಂ ಹೆಸರಿಲ್ಲದ್ದಕ್ಕೆ ಶಿವಸೇನೆ ಆಕ್ಷೇಪ… ಮಹಾಯುತಿಯಲ್ಲಿ ಬಿರುಕು?

Advertisement

Udayavani is now on Telegram. Click here to join our channel and stay updated with the latest news.

Next