Advertisement

ಎಸೆಸೆಲ್ಸಿ ಮೌಲ್ಯಮಾಪನ ಕೇಂದ್ರಕ್ಕೂ ಸಮ್ಮತಿ

01:51 AM Feb 17, 2022 | Team Udayavani |

ಪುತ್ತೂರು: ಉಪವಿಭಾಗದ ನಾಲ್ಕು ತಾಲೂಕಿಗೆ ಸಂಬಂಧಿಸಿ ಖಾಸಗಿ ಯಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ತೆರೆಯಲು ಗ್ರೀನ್‌ ಸಿಗ್ನಲ್‌ ದೊರೆತಿದೆ. ಜತೆಗೆ ಎಸೆಸೆಲ್ಸಿ ಮೌಲ್ಯಮಾಪನ ಕೇಂದ್ರವು ಪ್ರಾರಂಭಗೊಳ್ಳಲಿದ್ದು ಅಧಿಕೃತ ಒಪ್ಪಿಗೆ ದೊರೆಯಲಷ್ಟೇ ಬಾಕಿ.

Advertisement

ಏನಿದು ಪರೀಕ್ಷಾ ಕೇಂದ್ರ?
ಎಸೆಸೆಲ್ಸಿಯಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆಯಲು ಅವಕಾಶ ಇದ್ದು, ಈ ವಿದ್ಯಾರ್ಥಿಗಳು ಮಂಗಳೂರಿಗೆ ತೆರಳಿ ಪರೀಕ್ಷೆ ಬರೆಯಬೇಕಿತ್ತು. ಈ ಬಾರಿ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವವರಿಗೆ ಪ್ರತ್ತೂರಿನಲ್ಲಿ ಪರೀûಾ ಕೇಂದ್ರ ಮಂಜೂರು ಮಾಡಲಾಗಿದೆ. ಪುತ್ತೂರು ನಗರದ ತೆಂಕಿಲ, ವಿವೇಕನಂದ ವಿದ್ಯಾಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರ ತೆರಯಲಾಗುತ್ತದೆ. ಪುತ್ತೂರು ಉಪ ವಿಭಾಗದ ಎಲ್ಲ ತಾ|ನ ವಿದ್ಯಾರ್ಥಿಗಳು ಇದುವರೆಗೆ ಮಂಗಳೂರಿನಲ್ಲಿ ಪರೀಕ್ಷೆ ಬರೆಯಬೇಕಿತ್ತು. ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ ಭಾಗದವರಿಗೆ ಇದರಿಂದ ಸಮಯ ವ್ಯರ್ಥವಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆಯಿಲ್ಲ. ನಾಲ್ಕು ತಾಲೂಕಿನ ವಿದ್ಯಾರ್ಥಿಗಳು ಪುತ್ತೂರಿನಲ್ಲಿ ಪರೀಕ್ಷೆ ಬರೆಯಬಹುದು.

ಮೌಲ್ಯಮಾಪನ ಕೇಂದ್ರ
ಕಳೆದ ವರ್ಷವೇ ಪುತ್ತೂರಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಮೌಲ್ಯಮಾಪನ ನಡೆಸಲು ಉಪಕ್ರಮ ಆರಂಭಿಸಿಲಾಗಿತ್ತಾದರೂ ಕೋವಿಡ್‌ ಪರಿಸ್ಥಿತಿಯಿಂದಾಗಿ ಈಡೇ ರಿಲ್ಲ. ಈ ಬಾರಿ ಯಾವುದೇ ಸಮಸ್ಯೆ ಯಿಲ್ಲದೆ ಎಸೆಸೆಲ್ಸಿ ಪರೀಕ್ಷೆ ನಡೆಯುವ ನಿರೀಕ್ಷೆ ಮೂಡಿದ್ದು, ಪುತ್ತೂರಿನಲ್ಲಿ ಮೌಲ್ಯಮಾಪನ ಕೇಂದ್ರ ಪ್ರಾರಂಭಗೊಳ್ಳಲಿದೆ.

ನಾಲ್ಕು ತಾಲೂಕು ವ್ಯಾಪ್ತಿ
ಪ್ರಸ್ತುತ ಮಂಗಳೂರಿನಲ್ಲಿ ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳಿವೆ. ಎಲ್ಲ ತಾ|ನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯ ಮಾಪನ ಅಲ್ಲಿ ನಡೆಯುತ್ತಿತ್ತು. ಪುತ್ತೂರಿನಲ್ಲಿ ಮೌಲ್ಯಮಾಪನ ಕೇಂದ್ರ ಆರಂಭಗೊಂಡ ಮೇಲೆ ಸುಳ್ಯ, ಪುತ್ತೂರು, ಕಡಬ ಮತ್ತು ಬೆಳ್ತಂಗಡಿ ತಾಲೂಕುಗಳ ಮೌಲ್ಯಮಾಪಕರು ಪುತ್ತೂರಿನಲ್ಲಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾವ ಜಿಲ್ಲೆಯ ಉತ್ತರ ಪತ್ರಿಕೆಯ ಮೌಲ್ಯ ಮಾಪನ ಪುತ್ತೂರು ಕೇಂದ್ರದಲ್ಲಿ ನಡೆ ಯಲಿದೆ ಎನ್ನುವ ಬಗ್ಗೆ ಇಲಾಖೆ ನಿರ್ಧಾರ ಕೈಗೊಂಡ ಬಳಿಕ ಅಂತಿಮಗೊಳ್ಳಲಿದೆ.

ಎರಡು ಪ್ರೌಢಶಾಲೆ ಆಯ್ಕೆ
ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆದ ಸಮಾಲೋಚನಾ ಸಭೆಯ ಬಳಿಕ ಮೂಲಸೌಕರ್ಯಗಳ ಲಭ್ಯತೆ ಬಗ್ಗೆ ವರದಿ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಪುತ್ತೂರು ಬಿಇಒ ಕಚೇರಿಗೆ ಸೂಚನ ನೀಡಿದ್ದರು. ಪುತ್ತೂರಿನಿಂದ ಒಟ್ಟು ನಾಲ್ಕು ಕೇಂದ್ರಗಳ ಹೆಸರನ್ನು ಕಳಿಸ ಲಾಗಿದ್ದು, ಅದರಲ್ಲಿ ಸುದಾನ ಶಾಲೆ,
ವಿವೇಕಾನಂದ ಶಾಲೆಯನ್ನು ಅಂತಿಮ ವಾಗಿ ಅರಿಸಲಾಗಿದೆ. ಇಲ್ಲಿ ರುವ ಮೂಲ ಸೌಕರ್ಯಗಳ ಬಗ್ಗೆ ವರದಿ ಸಲ್ಲಿಸಲಾಗಿದೆ. ಕೊಠಡಿ ವ್ಯವಸ್ಥೆ, ಕಂಪ್ಯೂಟರ್‌, ಡಾಟಾ ಎಂಟ್ರಿ ಆಪರೇಟರ್‌ ಮತ್ತಿತರ ಸೌಲಭ್ಯದ ಬಗ್ಗೆ ವರದಿಯಲ್ಲಿ ತಿಳಿಸಲಾಗಿದ್ದು, ಮೌಲ್ಯ ಮಾಪನ ಕೇಂದ್ರಕ್ಕೆ ಬೇಕಾದ ವ್ಯವಸ್ಥೆಗಳನ್ನು ಇಲ್ಲಿ ಜೋಡಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಸಮ್ಮತಿ ಸಿಕ್ಕಿದೆ
ಪ್ರೌಢಶಾಲೆಯ ಶಿಕ್ಷಕ ಸಂಘವು ಪುತ್ತೂರು ಉಪವಿಭಾಗ ವ್ಯಾಪ್ತಿಗೆ ಸಂಬಂಧಿಸಿ ಪುತ್ತೂರಿನಲ್ಲಿ ಎಸೆಸೆಲ್ಸಿ ಮೌಲ್ಯಮಾಪನ ಕೇಂದ್ರ ತೆರೆಯುವ ಬೇಡಿಕೆ ಸಲ್ಲಿಸಿತ್ತು. ಅದರಂತೆ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಿದ್ದು, ಸಮ್ಮತಿ ಸಿಕ್ಕಿದೆ. ಕೇಂದ್ರಗಳಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಜೋಡಣೆಗೆ ಸೂಚಿಸಲಾಗಿದೆ.
-ಸಂಜೀವ ಮಠಂದೂರು,
ಶಾಸಕರು, ಪುತ್ತೂರು

ಪ್ರಸ್ತಾವನೆ ಸಲ್ಲಿಕೆ
ಕಳೆದ ವರ್ಷವೇ ಮೌಲ್ಯಮಾಪನ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಾರಿ ಪುತ್ತೂರಿನಲ್ಲಿ ಪರೀûಾ ಮೌಲ್ಯಮಾಪನ ನಡೆಯುವುದು ಬಹುತೇಕ ಖಚಿತ. ಹಾಗೆಯೇ ಖಾಸಗಿಯಾಗಿ ಪರೀಕ್ಷಾ ಬರೆಯುವವರಿಗೂ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ಮಂಜೂರಾಗಿದೆ.
-ಸಿ.ಲೋಕೇಶ್‌,
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next