ಉಡುಪಿ: ಅಯೋಧ್ಯೆಯ ಶ್ರೀರಾಮಜನ್ಮ ಭೂಮಿ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳ ಅನುಷ್ಠಾನಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಒಪ್ಪಿಗೆ ನೀಡಿದೆ ಎಂದು ಟ್ರಸ್ಟ್‌ನಸದಸ್ಯರೂ ಆದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾಹಿತಿ ನೀಡಿದರು.
ಅಯೋಧ್ಯೆಯಲ್ಲಿ ಈಗಿಂದಲೇ ಧಾರ್ಮಿಕ ಅನುಷ್ಠಾನದ ಭಾಗವಾಗಿ ನಾಲ್ಕು ವೇದಗಳು, ಭಾಗವತ, ರಾಮಾಯಣ, ಮಹಾಭಾರತದ ನಿತ್ಯ ಪಾರಾಯಣಕ್ಕೆ ಸ್ಥಳಾವಕಾಶ ಕಲ್ಪಿಸಲು ದಿಲ್ಲಿಯಲ್ಲಿ ರವಿವಾರ ನಡೆದ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಸಭೆಯು ಅನುಮತಿ ನೀಡಿದೆ ಎಂದರು.
ರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹ ಸಹಿತವಾಗಿ ವಿವಿಧ ವಿಷಯದ ರಶೀದಿ, ದಾಖಲೆಗಳನ್ನು ಡಿಜಿಟಲಿಕರಣಕ್ಕೆ ತೀರ್ಮಾನಿಸಲಾಗಿದೆ. ರಾಮಜನ್ಮಭೂಮಿ ಆವರಣದಲ್ಲಿರುವ ಪೊಲೀಸ್ ಕ್ಯಾಂಪ್ ಕಟ್ಟಡ ಸ್ಥಳಾಂತರಕ್ಕೂ ಅನುಮತಿ ನೀಡಲಾಗಿದೆ.
ಇದನ್ನೂ ಓದಿ:ಮಳೆ, ಚಳಿಯಿಂದ ರೈತರಿಗೆ ಸಮಸ್ಯೆಗಳ ಸಾಗರ
ಮಂದಿರಕ್ಕೆ ಸಂಬಂಧಿಸಿದ ವ್ಯಾಜ್ಯ ನಿರ್ವಹಣೆಗೆ ವಕೀಲರ ನೇಮಕಕ್ಕೂ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.