ನವದೆಹಲಿ: ಡಿಎನ್‌ಎ ತಂತ್ರಜ್ಞಾನ ಬಳಸಿ ಅಪರಾಧಿಯ ಗುರುತು ಹಚ್ಚುವಿಕೆಗೆ ನೆರವಾಗುವ ಡಿಎನ್‌ಎ ಸಂಗ್ರಣಾ ವಿಧೇಯಕ (ಡಿಎನ್‌ಎ ಪ್ರೊಫೈಲಿಂಗ್)ಕ್ಕೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅದಕ್ಕೆ ಮತ್ತೂಮ್ಮೆ ಅನುಮೋದನೆ ನೀಡಿದೆ.
ಜನವರಿಯಲ್ಲಿ ಲೋಕಸಭೆ ಅದಕ್ಕೆ ಅನುಮೋದನೆ ನೀಡಿತ್ತು. ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲದೇ ಇದ್ದ ಕಾರಣ ಅದು ಮಸೂದೆ ಬಿದ್ದುಹೋಗಿತ್ತು. ಹೊಸತಾಗಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿರುವುದರಿಂದ ಹಾಲಿ ಅಧಿವೇಶನದಲ್ಲಿಯೇ ಅದನ್ನು ಮಂಡಿಸಲಾಗುತ್ತದೆ. ವಿಧೇಯಕದ ಪ್ರಕಾರ ರಾಷ್ಟ್ರೀಯ ಡಿಎನ್‌ಎ ಬ್ಯಾಂಕ್ ಮತ್ತು ಪ್ರಾದೇಶಿಕವಾಗಿಯೂ ಡಿಎನ್‌ಎ ಡೇಟಾ ಬ್ಯಾಂಕ್ ಸ್ಥಾಪನೆಗೆ ಅವಕಾಶ ಸಿಗಲಿದೆ. ಪ್ರತಿಯೊಂದು ಅಪರಾಧ ಪ್ರಕರಣದ ಅಂಶವನ್ನು ಸಂಗ್ರಹಿಸಬೇಕು. ಶಂಕಿತರು ಅಥವಾ ವಿಚಾರಣಾಧೀನರ ವಿವರ, ನಾಪತ್ತೆಯಾದವರ ಮಾಹಿತಿ ಸಂಗ್ರಹಿಸಲು ಅವಕಾಶ ಮಾಡಿಕೊಡಲಿದೆ.
Advertisement