Advertisement

ನಿಮ್ಮ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ… ವಂಚಕರ ಮಾತು ನಂಬಿ ಹಣ ಕಳೆದುಕೊಂಡ ಬಾಲಿವುಡ್ ನಟಿ

03:39 PM Jan 03, 2024 | Team Udayavani |

ಮುಂಬೈ: ರಜನಿಕಾಂತ್ ಅಭಿನಯದ ‘ಕಾಲಾ’, ‘ನ್ಯೂಟನ್’, ‘ಮಿರ್ಜಾಯ’ ಸಿನಿಮಾಗಳಲ್ಲಿ ಕೆಲಸ ಮಾಡಿರುವ ನಟಿ ಅಂಜಲಿ ಪಾಟೀಲ್ ದೊಡ್ಡ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಈ ವಂಚನೆಯಲ್ಲಿ ಅಂಜಲಿ 5.79 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಲ್ಲಿ ಈ ರೀತಿಯ ಸೈಬರ್ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ.

ವರದಿಗಳ ಪ್ರಕಾರ ಅಂಜಲಿಯನ್ನು ವಂಚಿಸಿದ ವ್ಯಕ್ತಿ ಮುಂಬೈ ಪೋಲೀಸ್ ಪೋಲೀಸ್ ಎಂದು ತೋರಿಸಿಕೊಂಡು ಆಕೆಗೆ ಕರೆ ಮಾಡಿ ಆಕೆಯ ಪಾರ್ಸೆಲ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾನೆ.

ಅಂಜಲಿಗೆ ಸೈಬರ್ ವಂಚನೆ ನಡೆದಿದ್ದು ಹೇಗೆ?
ಮುಂಬೈನ ಅಂಧೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಅಂಜಲಿಗೆ ದೀಪಕ್ ಶರ್ಮಾ ಎಂಬ ವ್ಯಕ್ತಿಯಿಂದ ಕರೆ ಬಂದಿದೆ. ಈ ಕರೆಯಲ್ಲಿ, ವ್ಯಕ್ತಿಯು ತಾನು ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ತೈವಾನ್‌ಗೆ ಕಳುಹಿಸಿದ್ದ ನಿಮ್ಮ ಹೆಸರಿನ ಪಾರ್ಸೆಲ್ ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಇದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಪಾರ್ಸೆಲ್ ಬಾಕ್ಸ್ ಪರಿಶೀಲನೆ ನಡೆಸಿದ ವೇಳೆ ನಿಮ್ಮ ಆಧಾರ್ ಕಾರ್ಡ್ ಪ್ರತಿ ಸಿಕ್ಕಿರುವುದಾಗಿ ತಿಳಿಸಿದ್ದಾನೆ.

ಹೆಚ್ಚಿನ ವಿವರಗಳಿಗಾಗಿ ಮುಂಬೈ ಸೈಬರ್ ಪೊಲೀಸರನ್ನು ಸಂಪರ್ಕಿಸಲು ಅಂಜಲಿಯನ್ನು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಅಂಜಲಿಗೆ ಬ್ಯಾನರ್ಜಿ ಎಂಬ ವ್ಯಕ್ತಿಯಿಂದ ಸ್ಕೈಪ್ ಕರೆ ಬಂದಿದ್ದು ತಾನು ಮುಂಬೈ ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ವ್ಯಕ್ತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಮೂರು ಬ್ಯಾಂಕ್ ಖಾತೆಗಳಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಅಂಜಲಿಗೆ ತಿಳಿಸಿದ್ದಾನೆ. ಪರಿಶೀಲನೆ ಪ್ರಕ್ರಿಯೆ ಹೆಸರಿನಲ್ಲಿ ಆಕೆಯಿಂದ ಮೊದಲು 96 ಸಾವಿರದ 525 ರೂ. ವರ್ಗಾಯಿಸುವಂತೆ ಹೇಳಿದ ಆತ ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಪ್ರಕರಣದಿಂದ ಹೊರಬರಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದು ನಟಿ ಬಳಿ ಹೇಳಿಕೊಂಡಿದ್ದಾನೆ ಇದನ್ನು ನಂಬಿದ ನಟಿ 4,83,291 ರೂ. ಹಣವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಜಮಾ ಮಾಡಲು ಹೇಳಿದ್ದಾನೆ ಇದನ್ನು ನಂಬಿದ ನಟಿ ಹಣ ವರ್ಗಾವಣೆ ಮಾಡಿದ್ದಾಳೆ. ಇದಾದ ಬಳಿಕ ಕರೆ ಕಟ್ ಮಾಡಿದ ವ್ಯಕ್ತಿ ತನ್ನ ಕರೆಯನ್ನು ಕಟ್ ಮಾಡಿದ್ದಾನೆ.

Advertisement

ಈ ವಿಚಾರದ ಬಗ್ಗೆ ತಿಳಿಯಲು ನಟಿ ಆ ವ್ಯಕ್ತಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ ಇದಾದ ಕೆಲವು ಸಮಯದ ಬಳಿಕ ತಾನು ಮೋಸ ಹೋಗಿರುವುದು ಆಕೆ ಗಮನಕ್ಕೆ ಬಂದಿದೆ. ಕೂಡಲೇ ಡಿಎನ್‌ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇಂತಹ ನಾಚಿಕೆಗೆಟ್ಟ ಸರ್ಕಾರ ಆದಷ್ಟು ಬೇಗ ಕೆಳಗೆ ಇಳಿದರೆ ಒಳ್ಳೆಯದು: ಆರಗ ಜ್ಞಾನೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next