Advertisement

ಬೆಳಗಾವಿ ಹುಡುಗನ ಕ್ಯಾಚ್‌ಗೆ ಫಿದಾ; ವಿಡಿಯೋ ಶೇರ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್‌

03:34 PM Feb 13, 2023 | Nagendra Trasi |

ಬೆಳಗಾವಿ: ಬೆಳಗಾವಿಯಲ್ಲಿ ನಡೆದಿರುವ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಬೌಂಡರಿ ಲೈನ್‌ನಲ್ಲಿ ಅದ್ಭುತವಾಗಿ ಕ್ಯಾಚ್‌ ಹಿಡಿದಿರುವುದನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಅನೇಕ ಕ್ರಿಕೆಟ್‌ ದಿಗ್ಗಜರು ಕೊಂಡಾಡಿದ್ದು, ಈ ಕ್ಯಾಚ್‌ ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗಿದೆ.

Advertisement

ನಗರದ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೋದಲ್ಲಿ ಶಾರೀ ಸ್ಫೋರ್ಟ್ಸ್ ಆಯೋಜಿಸಿರುವ ಕ್ರಿಕೆಟ್‌ ಟ್ರೋಫಿಯಲ್ಲಿ ಬೆಳಗಾವಿಯ ಕಿರಣ ತರಳೇಕರ ಎಂಬ ಆಟಗಾರ ಬೌಂಡರಿ ಲೈನ್‌ನಲ್ಲಿ ಮೇಲಕ್ಕೆ ಹಾರಿ ಕ್ಯಾಚ್‌ ಹಿಡಿದು ತಾವು ಬೌಂಡರಿ ಲೈನ್‌ ಹೊರಕ್ಕೆ ಹೋಗುವಾಗ ಮತ್ತೆ ಬಾಲ್‌ ಮೇಲಕ್ಕೆ ಹಾರಿಸಿ ಫ‌ುಟ್‌ಬಾಲ್‌ ರೀತಿಯಲ್ಲಿ ಬ್ಯಾಕ್‌ ಶಾಟ್‌ ಹೊಡೆದಿದ್ದಾರೆ. ಆಗ ಮೈದಾನದೊಳಗೆ ಮತ್ತೂಬ್ಬ ಆಟಗಾರ ಬೌಲ್‌ ಕ್ಯಾಚ್‌ ಹಿಡಿದಿರುವುದು ಕ್ರಿಕೆಟ್‌ ಜಗತ್ತಿನಲ್ಲಿ ಭಾರೀ ಮೆಚ್ಚುಗೆಗೆ  ಕಾರಣವಾಗಿದೆ. ಕಿರಣ ತರಳೇಕರ ಅಷ್ಟೊಂದು ಅದ್ಭುತವಾಗಿ ಕ್ಯಾಚ್‌ ಮಾಡಿರುವುದನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮೂಲಕ ವಿಡಿಯೋ ಶೇರ್‌ ಮಾಡಿದ್ದಾರೆ.

ಫುಟ್‌ಬಾಲ್‌ ಆಡುವುದನ್ನೂ ಕಲಿತಿರುವ ಹುಡುಗನನ್ನು ನೀವು ಕರೆ ತಂದಾಗ ಏನಾಗುತ್ತದೆ! ಎಂಬುದರ ಅರಿವಾಯಿತು ಎಂದು ಟ್ವೀಟ್‌ ಮಾಡುವ ಮೂಲಕ ಕಿರಣ ತರಳೇಕರನನ್ನು ಕೊಂಡಾಡಿದ್ದಾರೆ.

ನ್ಯೂಜಿಲೆಂಡನ್‌ ಜಿಮ್ಮಿ ನಿಶಮ್‌, ಇಂಗ್ಲೆಂಡ್‌ನ‌ ಮಾಜಿ ಆಟಗಾರ ಮೈಕೆಲ್‌ ವಾನ್‌ ಸೇರಿದಂತೆ ಅನೇಕರು ಟ್ವೀಟ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದಾರೆ. ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ನಡೆದಿರುವ ಕ್ರಿಕೆಟ್‌ ಪಂದ್ಯಾವಳಿಯ ಸೆಮಿ ಫೈನಲ್‌ ನಲ್ಲಿ ಎಸ್‌ಆರ್‌ಎಸ್‌ ತಂಡದ ವಿರುದ್ಧ ಸಾಯಿರಾಜ್‌ ವಾರಿಯರ್ಸ್‌ ತಂಡದ ಕಿರಣ ತರಳೇಕರ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ಹಿಡಿದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಎರಡು ತಿಂಗಳ ಹಿಂದೆಯಷ್ಟೇ ಸಚಿನ್‌ ತೆಂಡೂಲ್ಕರ್‌ ಗೋವಾಕ್ಕೆ ತೆರಳುವ ಮಾರ್ಗದಲ್ಲಿ ಬೆಳಗಾವಿಯ ಮಚ್ಛೆ ಎಂಬ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಚಹಾ ಅಂಗಡಿಗೆ ತೆರಳಿ ಚಹಾ ಸೇವಿಸಿರುವ ವಿಡಿಯೋ ತಮ್ಮ ಫೇಸ್‌ ಬುಕ್‌ನಲ್ಲಿ ಶೇರ್‌ ಮಾಡಿದ್ದರು. ಈಗ ಮತ್ತೊಮ್ಮೆ ಬೆಳಗಾವಿಯ ಈ ಪ್ರಸಂಗವನ್ನು ಶೇರ್‌ ಮಾಡಿದ್ದು ಬೆಳಗಾವಿಗರಲ್ಲಿ ಸಂತಸಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next