Advertisement

ಬಜೆಟ್ ಪಾವಿತ್ರ್ಯತೆ ಹಾಳು ಮಾಡಿದ ಕಾಂಗ್ರೆಸ್ಸಿಗರು: ಈಶ್ವರಪ್ಪ ವಾಗ್ದಾಳಿ

06:44 PM Feb 19, 2023 | Team Udayavani |

ಕಲಬುರಗಿ: ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಹೂ ಇಟ್ಟುಕೊಂಡು ಬರುವ ಮೂಲಕ
ಬಜೆಟ್ ಅಧಿವೇಶನದ ಪಾವಿತ್ರ್ಯತೆ ಅವರು ಹಾಳು ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

Advertisement

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 8 ಬಾರಿ ಬಜೆಟ್ ಮಂಡನೆ ಮಾಡಿದವರು ಕಿವಿಯಲ್ಲಿ ಹೂ ಇಟಕೊಂಡು ಬಂದಿದ್ದಾರೆ.‌ ಮುಂದಿನ ಅಧಿವೇಶನದಲ್ಲಿ ಮತ್ತೆ ಏನೇನು ಇಟ್ಕೊಂಡು ಬರ್ತಾರೋ ಎಂದು ವ್ಯಂಗ್ಯವಾಡಿದರು.

ಪ್ರಚಾರ ಗಿಟ್ಟಿಸುವ ನೆಪದಲ್ಲಿ ದೇಶದ ಇತಿಹಾಸ ಹಾಳು ಮಾಡಿದ್ದಾರೆ.‌ಬಜೆಟ್ ಅಧಿವೇಶನಕ್ಕೆ ಅಪಮಾನ ಮಾಡಿದ್ದಾರೆ ವಾಗ್ದಾಳಿ ನಡೆಸಿದ ಈಶ್ವರಪ್ಪ, ಯಾರದೊ ಮಾತು ಕೇಳಿ ಹೀಗೆ ಮಾಡಿದ್ವಿ ಅಂತ ಅವರು ಕ್ಷಮೆ ಕೇಳಬೇಕೆಂದರು.

ಬಿಜೆಪಿ ಏನು ಭರವಸೆ ಕೊಟ್ಟಿದೆ ಹಾಗೂ ಏನು ಇಲ್ಲ ಎಂಬುದನ್ನು ಜನ ತೀರ್ಮಾನ ಮಾಡ್ತಾರೆ.ನೀವು ಏನು ಕೊಟ್ಟಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ, ಅದಕ್ಕಾಗಿಯೇ ಜನ ನಿಮನ್ನ ತಿರಸ್ಕರಿಸಿದ್ದಾರೆ ಎಂದು ಟೀಕಿಸಿದರು.

ನಮ್ಮ ನಾಯಕರಿಗೆ ಫೇಸ್ ಇದೆ ಅದಕ್ಕೆ ಮೋದಿ, ಶಾ ಅವರನ್ನು ಕರೆದುಕೊಂಡು ಬರುತ್ತೇವೆ. ಬಿಜೆಪಿ ನಾಯರನ್ನು ಜನ ದೇಶದ ಭವಿಷ್ಯದ ನಾಯಕರು ಅಂತ ಭಾವಿಸ್ತಾರೆ.‌ ಪ್ರಮುಖವಾಗಿ ನಮ್ಮ ನಾಯಕರುಗಳ ಮೇಲೆ ಜನರಿಗೆ ವಿಶ್ವಾಸ ಇದೆ ಹಾಗಾಗಿ ಅವರು ರಾಜ್ಯಕ್ಕೆ ಬರುತ್ತಾರೆ. ಕಾಂಗ್ರೆಸ್ ನವರಿಗೆ ಫೇಸ್ ವ್ಯಾಲ್ಯೂವೇ ಇಲ್ಲ. ಬೇಕಾದ್ರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ವಾದ್ರಾ ಯಾರನ್ನು ಬೇಕಾದ್ರೂ ಕರೆಸಲಿ, ಬೇಡ ಅಂದವರಾರು? ಎಂದು ತೀಕ್ಣವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ನವರು ಕಚ್ಚಾಡ್ತಿದ್ದಾರೆ ಎಂದರು.

Advertisement

ಮಾಜಿ ಸಿಎಂ ಸಿದ್ಧರಾಮಯ್ಯ ಬಗ್ಗೆ ಅಶ್ವಥನಾರಾಯಣ ಅವರು ಹೇಳಿಕೆ ನೀಡಿರುವುದು ತಪ್ಪು. ಅದಕ್ಕಾಗಿಯೇ ಅವರು ಕ್ಷಮೆಯನ್ನ ಕೇಳಿದ್ದಾರೆ.ಆದರೆ ಸಿದ್ರಾಮಯ್ಯ ಅವರು ಮೋದಿ ಅವರಿಗೆ ನರ ಹಂತಕ ಅಂದಿದ್ದರು. ಆವಾಗ ಸಿದ್ಧರಾಮಯ್ಯ ಅವರು ಕ್ಷಮೆ ಕೇಳಲಿಲ್ಲ. ಅವರು ಕ್ಷಮೆ ಕೇಳಿದ್ರೆ ನಾನು ಒಪ್ಪುತಿದ್ದೆ ಎಂದರು.

ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಅಂದ್ರೆ ಬಂಡಲ್ ಜನತಾ ಪಾರ್ಟಿ ಎಂದಿದ್ದಾರೆ.‌ ಹಿಂದೆ ಅವರ ಅಪ್ಪನನ್ನು ಸೋಲಿಸಿದ್ದೇವೆ. ಈಗ ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸುತ್ತೇವೆ. ಅವಾಗ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next