Advertisement
ನಗರಕ್ಕಾಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರು ಸ್ವಾರ್ಥ ರಾಜಕೀಯಕ್ಕಾಗಿ ಸದನವನ್ನೇ ಸಂಪೂರ್ಣ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಸದನ ನಡೆದರೆ ರಾಜ್ಯದ ಗಂಭೀರ ವಿಷಯ ಚರ್ಚೆ ನಡೆಯುತ್ತಿದ್ದವು. ಇದಕ್ಕೆ ಅವಕಾಶ ಕೊಡಲಿಲ್ಲ ಎಂದರು. ಮಾತೆತ್ತಿದ್ದರೆ ಸಿದ್ದರಾಮಯ್ಯ ದುರಹಂಕಾರದಿಂದ ಮಾತಾಡ್ತಾರೆ. ಬೆಳಗ್ಗೆ ಎದ್ದರೆ ಸಾಕು ಯಾರನ್ನು ಕೆಣಕಬೇಕು ಅಂತ ವಿಚಾರ ಮಾಡುತ್ತಿರುತ್ತಾರೆ. ನಾವು ಕೆಣಕೋಕೆ ಹೋಗಲ್ಲ. ಯಾಕಂದ್ರೆ ಎಲ್ಲ ವಿಚಾರಗಳನ್ನು ಅವರು ಮೈಮೇಲೆ ಎಳೆದುಕೊಳ್ಳುತ್ತಾರೆ. ಮಡಿಕೇರಿಗೆ ಹೋಗುವ ಪ್ರಯತ್ನ ಮಾಡಿದರು. ಅವರಿಗೆ ಅಲ್ಲಿಗೆ ಹೋಗಲು ಆಗಲಿಲ್ಲ ಎಂದು ಟೀಕಿಸಿದರು.
Related Articles
Advertisement
ನಮ್ಮ ಮುಖ್ಯಮಂತ್ರಿ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಒಬ್ರು ಗಮ್ ಹಚಿ¤ದ್ರೆ, ಇನ್ನೊಬ್ಬರು ಪೋಸ್ಟರ್ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಪಕ್ಷ ಒಂದು ಎಟಿಎಂ ಇದ್ದಂತೆ. ಪ್ರತಿದಿನ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ತಮ್ಮ ಕನ್ನಡಕವನ್ನು ಮೊದಲು ಒರೆಸಿ ನೋಡಲಿ. ಯಾರನ್ನ ಪಕ್ಕಕ್ಕಿಟ್ಟುಕೊಂಡು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ ಆತ್ಮಾವಲೋಕನ ಮಾಡಿಕೊಳ್ಳಲಿ. ನಮ್ಮ ದುರಂತ ಅಂದ್ರೆ ಇದೇ ಡಿ.ಕೆ. ಶಿವಕುಮಾರ, ಭ್ರಷ್ಟಾಚಾರದಲ್ಲಿ ಬೇಲ್ ಮೇಲೆ ಹೊರಗಿರುವ ವ್ಯಕ್ತಿ. ಅಂತವರು ಈಗ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಅರ್ಕಾವತಿ ಹಗರಣ ಬಗ್ಗೆ ಸಿದ್ದರಾಮಯ್ಯ ಬಹಿರಂಗ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಸ್ವಯಂ ಘೋಷಿತ ಅಹಿಂದ ನಾಯಕ ಎಂದುಕೊಳ್ಳುವ ಸಿದ್ದರಾಮಯ್ಯ, ತಮ್ಮ ಸರ್ಕಾರದಲ್ಲಿ ಹಿಂದುಳಿದವರಿಗೆ ಕೊಡುವ ಅನುದಾನದಲ್ಲಿ ಮೋಸ ಮಾಡಿದರು. ಬಿಬಿಎಂಪಿ ಕಸ ವಿಲೇವಾರಿ ಮಾಡುವ ವಿಚಾರದಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ. ಬಡವರಿಗೆ ಸಿಗಬೇಕಾದ ಮರಳು ಸಿಗುತ್ತಿಲ್ಲ. ಮರಳನ್ನೇ ಲೂಟಿ ಮಾಡಿ ದೊಡ್ಡ ಶ್ರೀಮಂತರಾಗುವ ಕೆಲಸ ಮಾಡಿದರು. ಕಾಮಗಾರಿಗಳನ್ನು ಮಾಡದೇ ಬಿಲ್ ಕೊಟ್ಟು ಲೂಟಿ ಮಾಡಿದರು. ಬಡವರಿಗೆ 6-7 ಕೆಜಿ ಅಕ್ಕಿ ಕೊಟ್ಟಿದ್ದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ ಕೇಂದ್ರ-ರಾಜ್ಯ ಸರ್ಕಾರ ಸೇರಿ ಈಗ 10 ಕೇಜಿ ಕೊಡುತ್ತಿದ್ದೇವೆ. ಸಿದ್ದರಾಮಯ್ಯ ಬಂದರೆ 10 ಕೇಜಿ ಕೊಡ್ತೀನಿ ಅಂತಿದ್ದಾರೆ. ಆದರೆ ನಾವೀಗ 10 ಕೆಜಿ ಕೊಡುತ್ತಿದ್ದೇವೆ. ಅಕ್ಕಿ ಕೊಡುವ ವಿಚಾರದಲ್ಲಿ ಕಳ್ಳಸಂತೆಯಲ್ಲಿ ಮಾರಾಟ ಮಾಡಿದ್ದರು. ಅಹಿಂದ, ಪಜಾ, ಪಪಂ ವಿದ್ಯಾರ್ಥಿಗಳ ತಲೆದಿಂಬು, ಹಾಸಿಗೆ ಕೊಡುವ ವಿಚಾರದಲ್ಲಿ ಹಗರಣ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನರನಾಡಿಗಳಲ್ಲಿ ಭ್ರಷ್ಟಾಚಾರ ಅಡಗಿದೆ ಎಂದು ಆರೋಪಿಸಿದರು.