ಅವರು ಮುಖ್ಯಮಂತ್ರಿಗಳ ಪರ ಬ್ಯಾಟಿಂಗ್ ಮಾಡಿದ್ದಾರೆ.
Advertisement
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಪ್ರತ್ಯೇಕ ಪ್ರವಾಸ ಮಾಡುತ್ತಿರುವ ಕುರಿತಂತೆ ಸುದ್ದಿಗಾರರಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರದಲ್ಲಿ ಅವರಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಗೊಂದಲ ಇದ್ದರೆ ಅದು ಅಪ್ರಬುದಟಛಿ ವಿಚಾರ. ಒಂದು ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರದ ಸಾಧನೆಗಳನ್ನು ವಿವರಿಸಲು ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಯಾತ್ರೆ ಹೋಗುತ್ತದೆ. ಕೆಪಿಸಿಸಿ ಅಧ್ಯಕ್ಷರಿಗೆ ಮಾಡಲು ಬೇರೆ ಕೆಲಸಗಳಿರುತ್ತವೆ. ಹೀಗಾಗಿ ಈ ವಿಚಾರದಲ್ಲಿ ಗೊಂದಲ ಸರಿಯಲ್ಲ ಎಂದರು.
ಅವರನ್ನು ಅತ್ಯಾಚಾರಿ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರ ಬಗ್ಗೆ ಕಿಡಿ ಕಾರಿದ ಕಾಗೋಡು ತಿಮ್ಮಪ್ಪ, ವೇಣುಗೋಪಾಲ್ ವಿರುದ್ಧ ಆರೋಪ ಇರುವುದು ಕೇರಳದಲ್ಲಿ. ಬಿಜೆಪಿಯವರು ಬೇಕಿದ್ದರೆ ಅಲ್ಲಿ ಹೋಗಿ ಪ್ರತಿಭಟನೆ ಮಾಡಲಿ ಎಂದು ಹೇಳಿದರು. ಪಕ್ಷದ ತೀರ್ಮಾನಕ್ಕೆ ಬದ್ಧ: ಕಳೆದ ವಿಧಾನಸಭೆ ಚುನಾವಣೆ ವೇಳೆ ಇದು ನನ್ನ ಕಡೇ ಚುನಾವಣೆ ಎಂದು ಘೋಷಿಸಿದ್ದ ಸಚಿವ ಕಾಗೋಡು ತಿಮ್ಮಪ್ಪ ಇದೀಗ ತಮ್ಮ ನಿಲುವು ಬದಲಿಸಿದ್ದು, ತಾವು ಸ್ಪರ್ಧಿಸುವ ವಿಚಾರವನ್ನು ಪಕ್ಷ
ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
Related Articles
ಪಕ್ಷದ ತೀರ್ಮಾನಕ್ಕೆ ಬದಟಛಿ. ಪಕ್ಷ ಏನು ಹೇಳುತ್ತದೋ ಅದನ್ನು ಕೇಳುತ್ತೇನೆ ಎಂದರು.
Advertisement