Advertisement

ಹೆಬ್ರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಜನರ ಸೇವಕನಾಗಿ ದುಡಿಯುತ್ತೇನೆ : ಪ್ರಮೋದ್‌

07:31 PM Mar 28, 2019 | Sriram |

ಹೆಬ್ರಿ : ಜನರೊಂದಿಗೆ ನಿರಂತರ ಇದ್ದು ಕೆಲಸ ಮಾಡುವ ಪ್ರಮೋದ್‌ ಬೇಕಾ… ಅಪರೂಪಕ್ಕೆ ಬಂದು ಹೋಗುವ ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕಾ ಎಂದು ನೀವೆಲ್ಲ ಯೋಚಿಸಿ ನನ್ನನ್ನು ಗೆಲ್ಲಿಸಿ ಮುಂದಿನ 5 ವರ್ಷ ನಿಮ್ಮ ಸೇವಕನಾಗಿ ದುಡಿಯುತ್ತೇನೆ ಎಂದು ಲೋಕಾ ಚುನಾವಣೆಯ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಹೆಬ್ರಿ ಚೆ„ತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಮರಳು ಲೋಡಿಗೆ ಒಂದು ಲಕ್ಷದಂತೆ ಬೆಂಗಳೂರಿಗೆ ಹೋಗುತ್ತಿತ್ತು. ನಮ್ಮ ಜಿಲ್ಲೆಯ ಮರಳು ನಮ್ಮ ಜಿಲ್ಲೆಗೆ ದೊರೆಯಬೇಕು ಎಂದು ಕಾನೂನು ತಂದು ನಮ್ಮ ಜನರಿಗೆ ಮರಳು ದೊರೆಯುವಂತೆ ಮಾಡಿದೆ.

ಈಗಿನ ಮರಳು ಸಮಸ್ಯೆಗೆ ಪ್ರಮೋದ್‌ ಮಧ್ವರಾಜ್‌ ಕಾರಣ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಎಂಸ್ಯಾಂಡ್‌ ಬಿಸಿನೆಸ್‌ ಇದೆ. ಅದಕ್ಕೆ ಮರಳು ಸಿಗಲು ಬಿಡುತ್ತಿಲ್ಲ ಎಂದು ನನ್ನನ್ನು ದೂರುತ್ತಿದ್ದಾರೆ. ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆ ವೈಫಲ್ಯವೇ ಕಾರಣ ಎಂದು ಪ್ರಮೋದ್‌ ಮಧ್ವರಾಜ್‌ ದೂರಿದರು.

ಶೋಭಾ ಕರಂದ್ಲಾಜೆ ಮೌನ
ಕೇಂದ್ರ ಅರಣ್ಯ ಪರಿಸರ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಕುದುರೆಮುಖ ಸೇರಿ ದೇಶದಲ್ಲಿ 45 ಹುಲಿ ಯೋಜನೆ ಜಾರಿಗೊಳಿಸುವಾಗ ಸಂಸದರಾದ ಶೋಭಾ ಕರಂದ್ಲಾಜೆ,ನಳಿನ್‌ ಕುಮಾರ್‌ ಮೌನವಾಗಿದ್ದರಿಂದ ಹುಲಿ ಯೋಜನೆ ಜಾರಿಯಾಗಿದೆ, ರಾಜ್ಯದಲ್ಲಿ ಕಸ್ತೂರಿ ರಂಗನ್‌ ವರದಿಯ ಅನುಷ್ಠಾನ ಆಗಬಾರದು ಎಂದು ಮೂರು ಸಲ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ನೀಡಿದ್ದರೂ ಕೇಂದ್ರ ನಮ್ಮ ವರದಿಗೆ ಕಿವಿಗೊಡುತ್ತಿಲ್ಲ, ಪರಿಣಾಮ ಕಸ್ತೂರಿ ರಂಗನ್‌ ವರದಿ ಜಾರಿಯ ತೂಗುಕತ್ತಿ ನಮ್ಮ ಮೇಲಿದೆ ಎಂದು ಕಾರ್ಕಳದ ಮಾಜಿ ಶಾಸಕರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಭಂಡಾರಿ ಹೇಳಿದರು.

ರಾಹುಲ್‌ ಗಾಂಧಿ ದೇಶದ ಜನರಿಗೋಸ್ಕರ ಬಡತನದ ಕುಟುಂಬಕ್ಕೆ ವರ್ಷ 72 ಸಾವಿರ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಜನಪರ ಕಾಳಜಿ ಕಾಂಗ್ರೆಸ್ಸಿಗೆ ಮಾತ್ರ ಇದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಹೇಳಿದರು.

Advertisement

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯೋಗೀಶ್‌ ಶೆಟ್ಟಿ.ಕೆಪಿಸಿಸಿ ಕಾರ್ಯದರ್ಶಿ ಭರತ್‌ ಮುಂಡೋಡಿ, ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಜಾತ ಲಕ್ಷ್ಮಣ್‌, ಪಕ್ಷದ ಪ್ರಮುಖರಾದ ಎಚ್‌.ಶೀನಾ ಪೂಜಾರಿ, ರಾಘವ ದೇವಾಡಿಗ, ಜೆಡಿಎಸ್‌ ಕಾರ್ಕಳ ಕ್ಷೇತ್ರದ ಕಾರ್ಯಧ್ಯಕ್ಷ ಹೆಬ್ರಿ ಶ್ರೀಕಾಂತ್‌ ಪೂಜಾರಿ ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಮುದ್ರಾಡಿ ಸಂತೋಷ ಕುಮಾರ್‌ ಶೆಟ್ಟಿ ನಿರೂಪಿಸಿ ಜನಾರ್ಧನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next