Advertisement

ಅಂದು ಬಿ.ಬಿ. ಚಿಮ್ಮನಕಟ್ಟಿ ಅಸಮಾಧಾನ; ಇಂದು ಕಾರ್ಯಕರ್ತರ ಅಸಮಾಧಾನ

01:12 PM Dec 21, 2021 | Team Udayavani |

ಕುಳಗೇರಿ ಕ್ರಾಸ್: ಜಿ.ಬಾಗಲಕೋಟೆ:  ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಸುಮಾರು 45 ವರ್ಷದಿಂದ ಕಾರ್ಯಕರ್ತರ ಜೊತೆಗೂಡಿಸಿಕೊಂಡು ಪಕ್ಷವನ್ನು ಕಟ್ಟಿ ಬೆಳೆಸುವ ಜೊತೆಗೆ ಒಂದೂ ಕಪ್ಪು ಚುಕ್ಕಿ ಇಲ್ಲದೆ ಕಾಪಾಡಿಕೊಂಡು ಬಂದಿದ್ದಾರೆ. ಕಾರಣ ಬಿ.ಬಿ. ಚಿಮ್ಮನಕಟ್ಟಿ ಯವರಿಗೆ ಅನ್ಯಾಯ ವಾಗಿದ್ದೆ ನೀಜವಾದ್ರೆ ಬಾದಾಮಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶ ಗ್ಯಾರಂಟಿ ಎಂದು ಮುಖಂಡ ಶ್ರೀಕಾಂತಗೌಡ ಗೌಡರ ಅಸಮಾಧಾನ ಹೊರಹಾಕಿದರು.

Advertisement

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ದಿಢೀರ್ ಬದಲಾವನೆಗೆ ಅಸಮಾಧಾನಗೊಂಡ ಪಕ್ಷದ ಕಾರ್ಯಕರ್ತರು ಗ್ರಾಮದ ಪ್ರವಾಸಿ ಮಂದಿರದಲ್ಲಿ  ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ಕಾರ್ಯಕರ್ತರ ಮಾತು ಕೇಳಿಕೊಂಡು ಬಿಬಿಸಿ ಯವರನ್ನೂ ಕಡೆಗಣಿಸಿ ಪಕ್ಷದ ಹುದ್ದೆಗಳನ್ನು ಬದಲಾಯಿಸಿ ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕೆ ಎಂ ಎಫ್ ನಿರ್ದೇಶಕ ಈರನಗೌಡ ಕರಿಗೌಡ್ರ ಮಾತನಾಡಿ ಕ್ಷೇತ್ರ ತ್ಯಾಗ ಮಾಡಿದ ಬಿ.ಬಿ. ಚಿಮ್ಮನಕಟ್ಟಿಯವರನ್ನೇ ನಿರ್ಲಕ್ಷ್ಯ ಮಾಡುತ್ತಿರುವುದು ಯಾವ ನ್ಯಾಯ. ಸಿದ್ಧರಾಮಯ್ಯ ನವರಿಗೆ  ಬಿ.ಬಿ. ಚಿಮ್ಮನಕಟ್ಟಿ ಕ್ಷೇತ್ರ ತ್ಯಾಗ ಮಾಡಿದ್ದೇ ತಪ್ಪ. ಶಾಸಕರು ಪಕ್ಷದಲ್ಲಿ ನಡೆದ ಕಾರ್ಯವೈಖರಿ ತಿಳಿಯದೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮನೆ ಹಾಕುತ್ತಿರುವುದು ಸರಿಯಲ್ಲ. ಕೈ ಪಕ್ಷದಲ್ಲಿ ಕಾನದ ಕೈಗಳು ಇಲ್ಲ ಸಲ್ಲದ ಚಾಡಿ  ವಿಷಯಗಳನ್ನ ಹೇಳಿ ಬಿ.ಬಿ.ಸಿ ಹಾಗೂ ಸಿದ್ಧರಾಮಯ್ಯ ನಡುವೆ ಒಡಕು ಉಂಟು ಮಾಡುತ್ತಿದ್ದಾರೆ. ಬಾದಾಮಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಇಬ್ಬಾಗ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕಾರಣ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿ ಅಸಮಾಧಾನಗೊಂಡ ನಾಯಕರನ್ನು ಒಂದುಗೂಡಿಸಿ ಪಕ್ಷಗಳ ಒಡಕು ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಶ್ರೀಕಾಂತ್ ಅಡಪಟ್ಟಿ ಮಾತನಾಡಿ ನಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯ ನವರು ಆಯ್ಕೆಯಾದ ಮೇಲೆ ಪಕ್ಷ ಇಬ್ಬಾಗವಾಗಿದೆ. ಸಿದ್ದುಪರ ಕೆಲ ಮುಖಂಡರಿದ್ದರೆ, ಬಿ.ಬಿ.ಸಿ ಪರ ಕೆಲವರಿದ್ದಾರೆ. ಇವರ ನಡುವೆ ಕಾರ್ಯಕರ್ತರು ಏನು ಮಾಡಬೇಕು ಎಂದು  ಪ್ರಶ್ನಿಸಿದರು. ಪಕ್ಷದ ಮುಖಂಡರನ್ನೂ ಕಡೆಗಣಿಸಿ ಪಕ್ಷದ ಚಟುವಟಿಕೆ ನಡೆಸಲಾಗುತ್ತಿದೆ ಕಾರಣ ಶಾಸಕರು ವಿಪ ನಾಯಕರು ಗಮನ ಹರಿಸಿ ಕಾರ್ಯಕರ್ತರನ್ನ ಒಂದುಗೂಡಿಸುವ ಕಾರ್ಯ ಮಾಡಬೇಕು  ಎಂದು ಹೇಳಿದರು.

ಮುಖಂಡರಾದ ನಿಂಗಪ್ಪ ಕುರಿ, ಹನುಮಂತ ಚಿಕ್ಕೊಪ್ಪ, ಬೀರಪ್ಪ  ಪೆಂಟಿ, ಶಿವಾನಂದ ಚೋಳನ್ನವರ, ಲಕ್ಷ್ಮಣ್ ದಾದನಟ್ಟಿ, ಕಲ್ಲಪ್ಪ ಬೀರಗೌಡ್ರ, ಹನಮಂತ ಸಿಗ್ಗಾರ, ಪ್ರಕಾಶ್ ಬಿಲ್ಲಾರ, ಸಿದ್ದಪ್ಪ ಕಟ್ಟಿಕಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next