ಮೈಸೂರು: ಧ್ರುವನಾರಾಯಣ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ನಡೆದ ಪೂರ್ವ ಸಭೆಯಲ್ಲಿ ಟಿಕೆಟ್ ಕೂಗು ಕೇಳಿ ಬಂದ ಘಟನೆ ನಡೆದಿದೆ.
ಶಾಸಕ ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿದ್ದರಾಮಯ್ಯ ನಿವಾಸದಲ್ಲಿ ಧ್ರುವನಾರಾಯಣ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ನಡೆದ ಪೂರ್ವ ಸಭೆ ನಡೆದಿದೆ. ವರುಣ ಹಾಗೂ ಟಿ.ನರಸೀಪುರ ಕ್ಷೇತ್ರದ ಪ್ರಮುಖರನ್ನು ಒಳಗೊಂಡ ಸಭೆಯಲ್ಲಿ ವರುಣದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಲು ಒಕ್ಕೊರಲ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ ಧ್ರುವನಾರಾಯಣ ಅವರ ಪುತ್ರ ದರ್ಶನ್ ಅವರಿಗೆ ಟಿಕೆಟ್ ನೀಡಬೇಕೆಂದುಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಆಂಧ್ರ ಸಿಎಂ ಆಪ್ತ ಎಂದು ನಂಬಿಸಿ ಕೋಟಿ, ಕೋಟಿ ರೂಪಾಯಿ ವಂಚಿಸಿದ ಮಾಜಿ ಕ್ರಿಕೆಟಿಗ!
ಧ್ರುವನಾರಾಯಣರವರು ನಮ್ಮ ಸಮಾಜದ ಕಣ್ಣು. ಖರ್ಗೆ ಬಳಿಕ ಆ ಸ್ಥಾನ ತುಂಬುವ ಸಾಮರ್ಥ್ಯ ಅವರಿಗಿತ್ತು. ಧ್ರುವನಾರಾಯಣರವರ ಸಾವಿಗೆ ನ್ಯಾಯ ಕೊಡಿಸಬೇಕೆಂದರೆ ದರ್ಶನ್ ಗೆ ಟಿಕೆಟ್ ನೀಡಬೇಕು. ಅವರ ಸಾವಿನ ದಿನವೇ ರಾಜ್ಯ ನಾಯಕರು ಟಿಕೆಟ್ ಘೋಷಣೆ ಮಾಡಬೇಕಿತ್ತು. ಟಿಕೆಟ್ ಘೋಷಣೆ ಮಾಡುವಲ್ಲಿ ನಾಯಕರು ಯಾಕೆ ವಿಳಂಬ ಮಾಡಿದ್ದಾರೆ ಗೊತ್ತಿಲ್ಲ. ಪುತ್ರ ದರ್ಶನ್ ಗೆ ಟಿಕೆಟ್ ನೀಡದಿದ್ದರೆ ಮೈಸೂರು, ಚಾಮರಾಜನಗರ ಭಾಗದಲ್ಲಿ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬೀಳುವುದು ಗ್ಯಾರಂಟಿ ಎಂದು ಸಭೆಯಲ್ಲಿ ಧ್ರುವನಾರಾಯಣ ಅಭಿಮಾನಿಗಳು ಒತ್ತಾಯಿಸಿದರು.
ಸಭೆಯಲ್ಲಿ ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ, ತಗಡೂರು ಬ್ಲಾಕ್ ಕಾಂಗ್ರೆಸ್, ವರುಣ ಬ್ಲಾಕ್ ಕಾಂಗ್ರೆಸ್ ಸದಸ್ಯರು ಭಾಗಿ.