ಗಂಗಾವತಿ: ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜನಜೀವನ ಮಿಷನ್ ಕಾಮಗಾರಿ ಸಂಬಂಧಪಟ್ಟಂತೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಘರ್ಷಣೆ ತಾರ್ಕಿಕ ಹಂತಕ್ಕೆ ತಲುಪಿದೆ .
ಕಾಂಗ್ರೆಸ್ ಮುಖಂಡ ವಿ ಪ್ರಸಾದ್ ಅವರ ಮೇಲೆ ಬಿಜೆಪಿ ಮುಖಂಡ ಮುರಳಿ ಕೃಷ್ಣ ಅವರು ಟ್ರ್ಯಾಕ್ಟರ್ ಹತ್ತಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕಲ್ಗುಡಿಯಿಂದ ಗಂಗಾವತಿ ನಗರದ ಪೊಲೀಸ್ ಠಾಣೆವರೆಗೂ ಬೃಹತ್ ಪಾದಯಾತ್ರೆ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆ ಎದುರು ಪ್ರತಿಭಟನಾ ಧರಣಿ ನಡೆಸಿದರು .
ಈ ಸಂದರ್ಭದಲ್ಲಿ ಮಾಜಿ ಸಚಿವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ ಕಾಂಗ್ರೆಸ್ ಮುಖಂಡರಾದ ಮುಕುಂದರಾವ್ ಭವಾನಿಮಠ ಮಾತನಾಡಿ ,ಬಿಜೆಪಿ ಕನಕಗಿರಿ ಕ್ಷೇತ್ರದಲ್ಲಿ ದೌರ್ಜನ್ಯ ವ್ಯಾಪಕ ಭ್ರಷ್ಟಾಚಾರವನ್ನು ಮಾಡುತ್ತಿದೆ ಸ್ಥಳೀಯ ಶಾಸಕರು ಕಾರ್ಯಕರ್ತರ ದೌರ್ಜನ್ಯ ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ ಆದ್ದರಿಂದಲೇ ಕಲ್ಗುಡಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ್ ಮೇಲೆ ಮುರಳಿಕೃಷ್ಣ ಎನ್ನುವ ಬಿಜೆಪಿ ಮುಖಂಡ ಮುರುಳಿಕೃಷ್ಣ ಟ್ರ್ಯಾಕ್ಟರ್ ಹತ್ತಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಜನಜೀವನ ್ಮಿಷನ್ ಕಾಮಗಾರಿ ಎಪ್ಪತ್ತು ಲಕ್ಷ ರೂ ಅನುದಾನಕ್ಕೆ ಇದರಲ್ಲಿ ಶಾಸಕರು ಕಾಂಗ್ರೆಸ್ ಮುಖಂಡರಿಂದ ಹತ್ತು ಲಕ್ಷ₹ಭ್ರಷ್ಟಾಚಾರ ನಡೆಸಿ ಕಾಂಗ್ರೆಸ್ ಮುಖಂಡರಿಗೆ ಕಾಮಗಾರಿಯನ್ನು ಕೊಟ್ಟಿದ್ದಾರೆ ಇದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತ ಶಾಸಕರ ವಿರುದ್ಧ ಗರಂ ಆದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತ ವಿ ಪ್ರಸಾದ್ ಮೇಲೆ ಮುರುಳಿಕೃಷ್ಣ ಟ್ರ್ಯಾಕ್ಟರ್ ಹತ್ತಿಸಿ ಹಲ್ಲೆ ಮಾಡಿದ್ದಾರೆ .ಹಲ್ಲೆ ನಡೆಸಿ 24 ಗಂಟೆ ಕಳೆದರೂ ಪೋಲಿಸರು ಪ್ರಕರಣ ದಾಖಲಿಸದಂತೆ ಶಾಸಕ ದಡೇಸುಗೂರು ಬಸುರಾಜ ಒತ್ತಡ ಹೇರಿದ್ದರಿಂದ ಆರೋಪಿ ತಲೆಮರೆಸಿಕೊಂಡಿದ್ದಾನೆ .ಕಾಂಗ್ರೆಸ್ ಮುಖಂಡರು ಠಾಣೆ ಎದುರು ಬಂದು ಪ್ರತಿಭಟನೆ ನಡೆಸಿದ ತಕ್ಷಣ ಸಂಜೆ ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ ನ ಸೀಜ್ ಮಾಡಿದ್ದಾರೆ ಮುರುಳಿಕೃಷ್ಣನನ್ನು ಇನ್ನೂವರೆಗೂ ಬಂಧಿಸಿಲ್ಲ.
ಈ ಮಧ್ಯೆ ಬಿಜೆಪಿಯ ಮುಖಂಡರು ರಮೇಶ ನಾಯಕ ಎನ್ನುವ ವ್ಯಕ್ತಿಯಿಂದ ಅಟ್ರಾಸಿಟಿ ಕೇಸು ದಾಖಲಿಸಿ ಕಾಂಗ್ರೆಸ್ ನ ಮೂವರು ಮೇಲೆ ಕೇಸ್ ಮಾಡಿಸಿದ್ದಾರೆ ಇದರಿಂದ ಅಟ್ರಾಸಿಟಿ ಕೇಸ್ ನ ದುರುಪಯೋಗ ಮಾಡಿಕೊಂಡಂತಾಗಿದೆ .ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಬಿಜೆಪಿಯವರಿಗೆ ನಂಬಿಕೆಯಿಲ್ಲ ದೌರ್ಜನ್ಯ ದರ್ಪ ನಡೆಸುವ ಮೂಲಕ ಕ್ಷೇತ್ರದಲ್ಲಿ ಜನಗಳ ಮಧ್ಯೆ ಸಂಘರ್ಷ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಇದರ ಲಾಭ ಪಡೆದು ಪುನಃ ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯತ್ ಸ್ವರ್ಣ ಗೆಲ್ಲಲು ಹುನ್ನಾರ ನಡೆಸಿದ್ದಾರೆ .ಇನ್ನೂ ಇಂತಹ ಷಡ್ಯಂತ್ರ ಮಾಡುವ ಬಿಜೆಪಿ ವಿರುದ್ಧ ಕ್ಷೇತ್ರದಲ್ಲಿ ಜನರು ವ್ಯಾಪಕವಾಗಿ ವಿರೋಧಿಸುತ್ತಿದ್ದಾರೆ ಇವತ್ತು ಕಲ್ಗುಡಿಯಿಂದ ಪಾದಯಾತ್ರೆ ನಡೆಸ ಲಾಗಿದ್ದು ಮುಂಬರುವ ದಿನಗಳಲ್ಲಿ ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಇಡೀ ಜನರನ್ನು ಸಂಘಟಿಸಿ ಬಿಜೆಪಿ ವಿರುದ್ಧ ಶಾಸಕರ ವಿರುದ್ಧ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲಾಗುತ್ತದೆ ಕೂಡಲೇ ಆರೋಪಿಯನ್ನು ಬಂಧಿಸಬೇಕು ಅಟ್ರಾಸಿಟಿ ಕೇಸು ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನಾಗಪ್ಪ,ಜಿಪಂ ಮಾಜಿ ಅಧ್ಯಕ್ಷ ಕೆ ರಾಜಶೇಖರ ಹಿಟ್ನಾಳ್ , ಮಾಜಿ ಸಂಸದ ಶಿವರಾಮಗೌಡ ,ಬಸವರಾಜ ಮಳಿಮಠ ಶಾಮೀದ್ ಮನಿಯಾರ್ ,ವೆಂಕಟಕೃಷ್ಣ ನಾನೇ ಶರಣಬಸವರಾಜ್ ಕೃಷ್ಣಸ್ವಾಮಿ ಶರಣೇಗೌಡ ಸೇರಿದಂತೆ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪಾದಯಾತ್ರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಯಾವುದೇ ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.