Advertisement

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

08:16 AM May 02, 2024 | Team Udayavani |

ಬೆನಕಟ್ಟಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾರನ್ನು ಜಾತಿಯಿಂದ ನೋಡದೆ ನಮ್ಮ ದೇಶದ ಪ್ರಜೆ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಎಲ್ಲ ಜನಾಂಗಕ್ಕೂ ಸಮಾನತೆಯಿಂದ ಗೌರವಿಸಿದ್ದಾರೆ ಎಂದು ಶಾಸಕ ಪ್ರದೀಪ ಶೆಟ್ಟರ್ ಹೇಳಿದರು.

Advertisement

ಅವರು ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಸವದತ್ತಿ ರಾಮದುರ್ಗ ಗೋಕಾಕ್ ಮತ್ತು ಬೈಲಹೊಂಗಲ ಮತ ಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇನ್ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ದೇಶವನ್ನು 70 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಆಡಳಿತವನ್ನು ಮಾಡಿ ವಿಶ್ವದಲ್ಲಿ ಆರ್ಥಿಕತೆಯಲ್ಲಿ ಹಿಂದುಳಿದಿತ್ತು, ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದ ಮೇಲೆ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ಏರಿದೆ ಇನ್ನೊಂದು ಬಾರಿಗೆ ಪ್ರಧಾನಮಂತ್ರಿಯಾಗಿ ವಿಶ್ವದಲ್ಲಿ ನಂಬರ್ ಒನ್ ಸ್ಥಾನಕ್ಕೆ ಆರ್ಥಿಕವಾಗಿ ಬರಲಿದೆ, ಬಿಜೆಪಿ ಪಕ್ಷ ಈ ಹಿಂದೆ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಗಿದೆ ಇವಾಗ ನರೇಂದ್ರ ಮೋದಿಜಿ ಅವರು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಮುಖಂಡ ಮಡಿವಾಳಪ್ಪ ಬಿರದಗಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷದವರಿಗೆ ಚುನಾವಣೆ ಬಂದಾಗ ಮಾತ್ರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ನೆನಪಾಗುವುದು ಚುನಾವಣೆ ಮುಗಿದ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನಪು ಮಾತ್ರ ಕಾಣುವುದಿಲ್ಲ ಸಿದ್ದರಾಮಯ್ಯನವರ ಸರಕಾರ ರಾಜ್ಯದ ಎಸ್ಸಿ/ಎಸ್ಟಿ ಮೀಸಲಾತಿ 11500 ಸಾವಿರ ಕೋಟಿ ರೂಪಾಯಿ ಯೋಜನೆಯನ್ನು ಬಂದ್ ಮಾಡಿ ಗ್ಯಾರಂಟಿ ಯೋಜನೆಗೆ ಕೊಡಲಾಗಿದೆ ಇದರಿಂದ ರಾಜ್ಯದ ಜನತೆಗೆ ಟೋಪಿ ಹಾಕಿದ್ದಾರೆ ಎಂದು ವ್ಯಂಗವಾಡಿದರು.

ಜಿಲ್ಲಾ ಕಾಂಗ್ರೆಸ್ ಎಸ್ಸಿ/ಎಸ್ಟಿ ಸೆಕ್ರೆಟರಿ ಅರುಣ ಗೋಕಾಕ ಮಾತನಾಡಿ ನಮ್ಮ ಸಮಾಜದ ನಾಯಕರಾದ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು, ಆದರೆ ನಾವು ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಇದ್ದೀವಿ, ಆದರೆ ನಾಯಕರು ನಮ್ಮನ್ನು ಕಡೆಗಣಿಸಿ ಕಾಂಗ್ರೇಸ್ ಪಕ್ಷದವರು ನಮ್ಮನ್ನು ತುಳಿಯುತಿದ್ದಾರೆ ಅದಕ್ಕಾಗಿ ಬೇಸತ್ತು ನಾವು ಬಿಜೆಪಿ ಪಕ್ಷವನ್ನು ಸೇರುತ್ತಿದ್ದೇವೆ ಎಂದು ತಿಳಿಸಿದರು.

Advertisement

ಬಿಜೆಪಿ ಮುಖಂಡರಾದ ವಿರುಪಾಕ್ಷ ಮಾಮನಿ, ಪಂಚನಗೌಡ ದ್ಯಾಮನಗೌಡರ ಹಾಗೂ ಬಸಯ್ಯಾ ಹಿರೇಮಠ ಮಾತನಾಡಿದರು, ವಿನಯಕುಮಾರ ದೇಸಾಯಿ, ಪುಂಡಲಿಕ ಮೇಟಿ, ಅಜಿತಕುಮಾರ ದೇಸಾಯಿ, ಜಗದೀಶ ಕೌಜಗೇರಿ, ಮಹಾರುದ್ರಪ್ಪ ಉಪ್ಪಿನ, ಪ್ರಕಾಶ ನರಿ ಬಸಯ್ಯ ಗೌಡರ, ಗುರುಪಾದಪ್ಪ ಕಳ್ಳಿ ಗೌಡಪ್ಪ ಸವದತ್ತಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು, ಮಹಾದೇವ ಮುರುಗೋಡ ಕಾರ್ಯಕ್ರಮ ನಿರೂಪಿಸಿದರು, ಸುಭಾಷ್ ಗಿದಿಗೌಡರ ಸ್ವಾಗತಿಸಿದರು.

ಇದನ್ನೂ ಓದಿ: Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Advertisement

Udayavani is now on Telegram. Click here to join our channel and stay updated with the latest news.

Next