ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಾಚರಣೆ ನಡೆಯಿತು.
ಈ ಸಂದರ್ಭ ಮಾಜಿ ಸಚಿವ ಕೆ. ಅಭಯಚಂದ್ರ ಅವರು ಮಾತನಾಡಿ, ಇತಿಹಾಸದಲ್ಲೇ ಮೊದಲ ಬಾರಿಗೆ ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಪ್ರಧಾನಿ ಮೋದಿಯವರು ಹೇಳಿ ಹೋಗಿದ್ದರು. ಆದರೆ ಈಗ ಅವರ ಕಣ್ಣಿಗೆ ಕಾಣುವ ಹಾಗೆ ಕಿವಿಗೆ ಕೇಳುವ ಹಾಗೆ ಕಾಂಗ್ರೆಸ್ ಸರಕಾರದ ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ. ಕಾಂಗ್ರೆಸ್‌ನ ಶಕ್ತಿ ಏನೆಂದು ನಾವು ತೋರಿಸಿಕೊಟ್ಟಿದ್ದು, ಹೊಸದಿಲ್ಲಿಗೆ ಸ್ಪಷ್ಟವಾದ ಸಂದೇಶ ತಲುಪಿದೆ ಎಂದರು.
ಮಾಜಿ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಂ ಕೊಡಿಜಾಲ್, ಮನಪಾ ವಿಪಕ್ಷ ನಾಯಕ ನವೀನ್ ಡಿ’ಸೋಜಾ, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಜಿ.ಪಂ. ಮಾಜಿ ಸದಸ್ಯ ಸಾಹುಲ್ ಹಮೀದ್ ಕೆ.ಕೆ., ಪ್ರಮುಖರಾದ ರಮಾನಂದ ಪೂಜಾರಿ, ಶುಭೋದಯ ಆಳ್ವ, ನೀರಜ್ ಪಾಲ್, ವಿಶ್ವಾಸ್ ಕುಮಾರ್ ದಾಸ್, ಗಣೇಶ್ ಪೂಜಾರಿ, ಸಬಿತಾ ಮಿಸ್ಕಿತ್, ರಹಿಮಾನ್ ಕೊಡಿಜಾಲ್, ವಿಕಾಸ್ ಶೆಟ್ಟಿ, ಮುಹಮ್ಮದ್ ಬಪ್ಪಲಿಗ, ಮಂಜುಳಾ ನಾಯಕ್, ಶರೀಫ್ ಚೊಕ್ಕಬೆಟ್ಟು, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಹನೀಫ್ ಬೆಂಗ್ರೆ, ಪ್ರಶಾಂತ್ ಪೂಜಾರಿ, ಯೋಗೀಶ್ ಕುಮಾರ್, ಸಮರ್ಥ್ ಭಟ್, ಭುವನ್ ಕರ್ಕೇರ, ಇಮ್ರಾನ್ ಎ.ಆರ್., ಟಿ.ಕೆ. ಸುಧೀರ್, ಯಶವಂತ್ ಪ್ರಭು, ಹನೀಫ್ ಸೋಲಾರ್, ಯೋಗೀಶ್ ಕುಮಾರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.
ಉಡುಪಿ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಶನಿವಾರ ಜಿಲ್ಲಾ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬಿ. ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಶೇರಿಗಾರ್, ಹರೀಶ್ ಶೆಟ್ಟಿ ಪಾಂಗಾಳ, ರಮೇಶ್ ಕಾಂಚನ್, ಶಬೀರ್ ಅಹ್ಮದ್, ನವೀನ್ ಶೆಟ್ಟಿ, ಯುವರಾಜ್, ಸಾಯಿರಾಜ್, ಸತೀಶ್ ಮಂಚಿ, ಆನಂದ ಪೂಜಾರಿ ಕಿದಿಯೂರು, ಜಿತೇಶ್ ಕುಮಾರ್, ಸುರೇಶ್ ಶೆಟ್ಟಿ ಬನ್ನಂಜೆ, ಸಂಜೀವ ಕಾಂಚನ್, ಕೆ. ಕೃಷ್ಣಮೂರ್ತಿ ಆಚಾರ್ಯ, ಸೌರವ್ ಬಲ್ಲಾಳ್, ಸುರೇಂದ್ರ ಆಚಾರ್ಯ, ಶರತ್ ಶೆಟ್ಟಿ, ಮಹೇಶ್ ಮಲ್ಪೆ, ಹಸನ್ ಅಜ್ಜರಕಾಡು, ಉಪೇಂದ್ರ, ಗಿರೀಶ್ ಉಪಸ್ಥಿತರಿದ್ದರು.
ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ಬಳಿಯ ಕಾರು ಪಾರ್ಕಿಂಗ್ ಪ್ರದೇಶದಲ್ಲಿಯೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.