Advertisement

ಕಾಂಗ್ರೆಸ್ ಇಂದು ಭೌತಿಕವಾಗಿ ದಿವಾಳಿಯಾಗಿ ರಾಷ್ಟ್ರವಿರೋಧಿಯಾಗಿದೆ: ನಳೀನ್ ಕುಮಾರ್ ಕಟೀಲ್

08:47 AM Feb 20, 2020 | Mithun PG |

ಬೀದರ್: ಕಾಂಗ್ರೆಸ್ ಭೌತಿಕವಾಗಿ ದಿವಾಳಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಂದಿನ ಕಾಂಗ್ರೆಸ್ ಗೂ ಇಂದಿನ ಕಾಂಗ್ರೆಸ್ ಗೂ ಬಹಳ ವ್ಯತ್ಯಾಸ ಇದೆ. ಅಂದು ರಾಷ್ಟ್ರಭಕ್ತ ಕಾಂಗ್ರೆಸ್ ಇಂದು ರಾಷ್ಟ್ರವಿರೋಧಿ ಕಾಂಗ್ರೆಸ್ ಆಗಿದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್  ಕುಮಾರ್  ಕಟೀಲ್ ಎಂದು ವಾಗ್ದಾಳಿ ನಡೆಸಿದರು.

Advertisement

ಪಾಕಿಸ್ತಾನಕ್ಕೆ ಜೈ ಎಂದವರಿಗೆ ಬೆಂಬಲ ನೀಡುತ್ತಾರೆ ಅಂದರೆ ಎಲ್ಲರೂ  ಯೋಚನೆ ಮಾಡಬೇಕು. ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಘಟನೆಯ ದೃಶ್ಯವಳಿಗಳೇ ಸಾಕ್ಷಿ ಆಗಿದೆ.

ದೇಶದಲ್ಲಿ ಹತ್ತಾರು ಸಂಧರ್ಭದಲ್ಲಿ ಹಲವು ಕಾನೂನು ರಚನೆಯಾಗಿವೆ. ಕಾಂಗ್ರೆಸ್ ನವರಿಗೆ ಅಧಿವೇಶನ ನಡೆಸುವುದು ಅವಶ್ಯಕತೆ ಇಲ್ಲಾ, ಚರ್ಚೆಗಳು ಬೇಕಾಗಿಲ್ಲಾ. ಕಾಂಗ್ರೆಸ್ ನವರು  ಅಧಿಕಾರ ಇದ್ದಾಗ ದರ್ಪದಲ್ಲಿ ಬದುಕುತ್ತಾರೆ. ಅಧಿಕಾರ ಹೋದಾಗ ಮಾರ್ಗದಲ್ಲಿ ಬೆಂಕಿ ಹಾಕುವ ಕೆಲಸ‌ಮಾಡುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next