Advertisement
ಕಾಂಗ್ರೆಸ್ ಸರ್ಕಾರವಿದ್ದಾಗ ಅಧಿಕಾರ ಅನುಭವಿಸಿರುವ ಅರ್ಧ ಡಜನ್ ಮಾಜಿ ಸಚಿವೆಯರು ಮನೆ ಬಿಟ್ಟು ಕದಲದ ಬಗ್ಗೆ ಅಸಮಾಧಾನ ಹೊರಹಾಕಿರುವ ಡಿ.ಕೆ.ಶಿವಕುಮಾರ್ ಚುನಾವಣೆ ಬಂದಾಗ ಮಾತ್ರ ಕಾಣಿಸಿಕೊಳ್ಳುವವರಿಗೆ ಅವಕಾಶ ಕೊಡಲಾಗದು ಎಂಬ ಸಂದೇಶ ರವಾನಿಸಿದ್ದಾರೆ.
Related Articles
Advertisement
ಸ್ತ್ರೀ ಶಕ್ತಿ ಸಂಘಟನಾ ಸಮಿತಿ ರಚಿಸಿ ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ವರು, ಮಾಜಿ ಮೇಯರ್‌ಗಳು ಸೇರಿ 28 ಮಹಿಳಾ ನಾಯಕಿಯರನ್ನು ನೇಮಿಸಿದ್ದು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ 1 ಸಾವಿರ ಹೊಸ ಸಕ್ರಿಯ ಮಹಿಳಾ ಮುಖಂಡರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸುವ ಜವಾಬ್ದಾರಿ ವಹಿಸಲಾಗಿದೆ. ಆರು ತಂಡಗಳಾಗಿ ರಚಿಸಿ ಜಿಲ್ಲಾವಾರು ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ.
ಪಂಚಾಯಿತಿಯಲ್ಲಿ ಚುನಾವಣೆಗಳಲ್ಲಿ ಶೇ.50ರಷ್ಟು ಮೀಸಲಾತಿಯಡಿ ಅವಕಾಶ ಪಡೆದು ಚುನಾಯಿತರಾದರು ಆ ನಂತರ ದೂರ ಸರಿದಿದ್ದಾರೆ. ಅವರನ್ನೆಲ್ಲಾ ಭೇಟಿ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಹಾಗೂ ಸ್ತ್ರೀ ಶಕ್ತಿ ಸಂಘಟನೆಗಳ ಜತೆ ನಿರಂತರ ಸಂಪರ್ಕ ಸಾಧಿಸಿ ಅವರ ಒಲವು ಗಳಿಸುವ ಗುರಿ ಸಹ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
30ಟಿಕೆಟ್‌ಗೆ ಡಿಮ್ಯಾಂಡ್ : ಈ ಮಧ್ಯೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಗೊಂದರಂತೆ ಕನಿಷ್ಠ 30 ಸ್ಥಾನಗಳಲ್ಲಿ ಮಹಿಳೆಯರಿಗೆ ಅವಕಾಶ ಕೊಡಬೇಕೆಂಬಪ್ರಸ್ತಾವನೆ ಮಹಿಳಾ ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಅಧ್ಯಕ್ಷರ ಮುಂದಿಡಲಾಗಿದೆ. ಹಾಲಿ ಇರುವ ಆರು ಶಾಸಕರ ಜತೆಗೆ, ಉಮಾಶ್ರೀ, ರಾಣಿ ಸತೀಶ್,ಮೋಟಮ್ಮ, ಸುಮಾ ವಸಂತ್, ಜಯಮಾಲಾ, ಶಾರದಾ ಮೋಹನ್‌ಶೆಟ್ಟಿ, ಪುಷ್ಪಾ ಅಮರನಾಥ್,ಪದ್ಮಾವತಿ, ಗಂಗಾಂಬಿಕೆ, ವಾಸಂತಿ ಶಿವಣ್ಣ, ಮಲ್ಲಾಜಮ್ಮ ಸೇರಿ ಹದಿನೈದಕ್ಕೂ ಹೆಚ್ಚು ಮಂದಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ತಯಾರಿನಡೆಸಿದ್ದಾರೆ.ಹೀಗಾಗಿ, ಮಹಿಳೆಯರಿಗೆ30ಟಿಕೆಟ್ ಮೀಸಲಿಡಬೇಕೆಂಬ “ಡಿಮ್ಯಾಂಡ್’ ಇಟ್ಟಿದ್ದಾರೆ.
ರಾಜ್ಯವ್ಯಾಪಿ ಪ್ರವಾಸ ಮಾಡಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಸಾವಿರ ಮಹಿಳಾ ನಾಯಕಿಯರನ್ನು ಗುರುತಿಸಿಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರುಸೂಚಿಸಿದ್ದಾರೆ. ಅದರಂತೆ ನಾವುಕಾರ್ಯೋನ್ಮುಖರಾಗಿದ್ದೇವೆ. –ಪುಷ್ಪಾ ಅಮರನಾಥ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
-ಎಸ್. ಲಕ್ಷ್ಮೀನಾರಾಯಣ