Advertisement

ಸಿಜೆಐ ದೀಪಕ್‌ ಮಿಶ್ರಾ ಉಚ್ಚಾಟನೆ ಅರ್ಜಿ ಹಿಂಪಡೆದುಕೊಂಡ ಕಾಂಗ್ರೆಸ್‌

11:47 AM May 08, 2018 | Team Udayavani |

ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಹುದ್ದೆಯಿಂದ ಉಚ್ಚಾಟಿಸಲು ವಿರೋಧ ಪಕ್ಷಗಳು ನೀಡಿದ್ದ ಮಹಾಭಿಯೋಗದ ನೊಟೀಸನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದುದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ತಾನು ಸಲ್ಲಿಸಿದ್ದ ಅರ್ಜಿಯನ್ನು ಕಾಂಗ್ರೆಸ್‌ ಇಂದು ಮಂಗಳವಾರ  ಹಿಂಪಡೆದುಕೊಂಡು ಅಚ್ಚರಿ ಉಂಟುಮಾಡಿದೆ. 

Advertisement

ಸಿಜೆಐ ಜಸ್ಟಿಸ್‌ ದೀಪಕ್‌ ಮಿಶ್ರಾ ವಿರುದ್ಧ ಸಂಸತ್ತಿನಲ್ಲಿ  ಮಹಾಭಿಯೋಗದ ನೊಟೀಸ್‌ ಜಾರಿ ಮಾಡುವಲ್ಲಿ ಕಾಂಗ್ರೆಸ್‌, ವಿರೋಧ ಪಕ್ಷಗಳೊಂದಿಗೆ ಸೇರಿಕೊಂಡಿತ್ತಾದರೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಚಿದಂಬರಂ ಮುಂತಾದ ಹಿರಿಯ ನಾಯಕರು ಅದರಿಂದ ದೂರ ಸರಿದು ನೊಟೀಸಿಗೆ ಸಹಿ ಹಾಕದ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. 

ಮಹಾಭಿಯೋಗದ ನೊಟೀಸ್‌ ನೀಡುವಲ್ಲಿ ವಿರೋಧ ಪಕ್ಷಗಳ ಜತೆಗೆ ಕಾಂಗ್ರೆಸ್‌ ಸೇರಿಕೊಂಡದ್ದೇ ರಾಷ್ಟ್ರಾದ್ಯಂತ ವ್ಯಾಪಕ ಟೀಕೆ, ಚರ್ಚೆಗೆ ಗುರಿಯಾಗಿತ್ತು. ಅನಂತರ ಕಾಂಗ್ರೆಸ್‌ ಈ ವಿಷಯದಲ್ಲಿ ಮೌನಾಚರಣೆ ಮಾಡಿತ್ತು.

ಹಾಗಿದ್ದರೂ ಉಪ ರಾಷ್ಟ್ರಪತಿಗಳು ಮಹಾಭಿಯೋಗದ ನೊಟೀಸ್‌ ತಿರಸ್ಕರಿಸಿದುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇಂದು ಅದು ಹಠಾತ್ತನೇ ತನ್ನ ಅರ್ಜಿಯನ್ನು ಹಿಂಪಡೆದು ರಾಜಕೀಯ ವಲಯದಲ್ಲಿ ಸಂಚಲನೆ  ಉಂಟುಮಾಡಿತು. 

Advertisement

Udayavani is now on Telegram. Click here to join our channel and stay updated with the latest news.

Next