ಸಿರುಗುಪ್ಪ: ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಸದಸ್ಯರು 26 ಗ್ರಾಪಂಗಳಲ್ಲಿ 16 ಪಂಚಾಯಿತಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿ ಅಧಿ ಕಾರದ ಚುಕ್ಕಾಣಿ ಹಿಡಿಯುವ ಮೂಲಕ ಪಕ್ಷ ಮತ್ತಷ್ಟು ಬಲಿಷ್ಠವಾದಂತಾಗಿದೆ ಎಂದು ಮಾಜಿ ಶಾಸಕ ಬಿ.ಎಂ. ನಾಗರಾಜ ತಿಳಿಸಿದರು.
ನಗರದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ರೈತ ವಿರೋಧಿ ಧೋರಣೆ ಮೂಲಕ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರೈತರ ಹೋರಾಟಕ್ಕೆ ಮನ್ನಣೆ ನೀಡದೆ ಶ್ರೀಮಂತರ ಹಾಗೂ ಉದ್ದಿಮೆಗಳ ಪರ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ದುರಾಡಳಿತಕ್ಕೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಘೋಷಣೆಗೆ ಸೀಮಿತವಾಯ್ತೇ ಆಸರೆ?ಉಪಚುನಾವಣೆ ಹೊತ್ತಲ್ಲಿ ಮತ್ತೆ ಮುನ್ನೆಲೆಗೆ
ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯಸ್ವಾಮಿ, ಯುವ ಮುಖಂಡ ಮುರಳಿಕೃಷ್ಣ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ನಗರಸಭೆ ಅಧ್ಯಕ್ಷ ಡಿ. ನಾಗರಾಜ, ಮುಖಂಡರಾದ ಎಚ್.ಕೆ. ಮಲ್ಲಿಕಾರ್ಜುನಯ್ಯಸ್ವಾಮಿ ಎಂ. ಶಿವಶಂಕರಗೌಡ, ಬಿ.ಕೆ. ರಘು ಮಾತನಾಡಿದರು. ಟಿ.ಎಂ. ಸಿದ್ದರಾಮಯ್ಯ ಸ್ವಾಮಿ, ಮಲ್ಲಿಕಾರ್ಜುನ ಬಾಲಪ್ಪ, ವೀರೇಶಗೌಡ, ಬಿ.ಎಂ.ಸತೀಶ್, ವೆಂಕಟರಾಮರೆಡ್ಡಿ, ಲಕ್ಷ್ಮೀದೇವಿ, ನಾಗರುದ್ರಗೌಡ, ಶೈಲಜಾ, ಮಹಮ್ಮದ್ ನೂರುಲ್ಲಾ, ಹರಿವರ್ಧನರೆಡ್ಡಿ, ಕುಮಾರ ರಾಜಗೌಡ, ಟಿ.ಎಂ. ಸಿದ್ದಲಿಂಗಯ್ಯಸ್ವಾಮಿ, ಗೋವಿಂದರೆಡ್ಡಿ ಹಾಗೂ ಗ್ರಾಪಂ ಸದಸ್ಯರು, ಕಾರ್ಯಕರ್ತರು ಇದ್ದರು.